
ಪುತ್ತೂರು: ಸರ್ಕಾರದ ನೀತಿಯಿಂದ ಕಚ್ಚಾವಸ್ತು ಬೆಲೆ ಬಾರಿ ಏರಿಕೆ ಆದರೂ ಎಸ್.ಆರ್ ದರದಲ್ಲಿ ಏರಿಕೆ ಮಾಡದ ಹಾಗೂ 40% ಏರಿಕೆ ಆದ ಲಂಚ ಬಗ್ಗೆ ಪುತ್ತೂರಿನ ಗುತ್ತಿಗೆದಾರರರು ಆಕ್ರೋಶ ವ್ಯಕ್ತಪಡಿಸಿದರು.
ಸಣ್ಣ ಸಣ್ಣ ಕಾಮಗಾರಿಗಳನ್ನು ಪಡೆದುಕೊಂಡು ಕೆಲಸ ನಿರ್ವಹಿಸುತ್ತಿದ್ದವರಿಗೆ ಸರ್ಕಾರದ ನೀತಿಗಳಿಂದಾಗಿ ಕೆಲಸ ನಿರ್ವಹಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರ ಜೊತೆಗೆ ಕಚ್ಚಾವಸ್ತುಗಳ ದರ ಏರಿಕೆಯಾದರೂ ಎಸ್.ಆರ್ ದರ ಕಡಿಮೆ, ಹಿಂದಿನ ಕಾಮಗಾರಿಗಳ ಬಿಲ್ ಬಾಕಿ, ಕಾಮಗಾರಿ ಹಂಚಿಕೆಯಲ್ಲೂ ಭ್ರಷ್ಟಾಚಾರ, ಶೇ.40ಕ್ಕೆ ಏರಿದ ಲಂಚ ವ್ಯವಹಾರಗಳ ಸಮಸ್ಯೆಗಳಿಗೆ ಪರಿಹಾರ ಕುರಿತು ಪುತ್ತೂರು ಗುತ್ತಿಗೆದಾರರ ಸಂಘದಿಂದ ನ.17ರಂದು ಬೈಪಾಸ್ ಹೊಟೇಲ್ ಉದಯಗಿರಿ ರೆಸಿಡೆನ್ಸಿಯ ಭಾಗೀರಥಿ ಸಭಾಭವನದಲ್ಲಿ ವಿಶೇಷ ಸಭೆ ನಡೆಯಿತು.
ಗುತ್ತಿಗೆದಾರರ ಸಂಘದ ಜಿಲ್ಲಾ ಅಧ್ಯಕ್ಷ ರಾಧಾಕೃಷ್ಣ ನಾಯಕ್ ಅವರು ಮಾತನಾಡಿ ಗುತ್ತಿಗೆದಾರರು ಪ್ರತಿ ಹಂತದಲ್ಲೂ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಎಸ್.ಆರ್ ದರ, ಕೆಲಸಕ್ಕಾಗಿ ಬಿಲೋ ದರ ಹಾಕುವುದು. ಕೊನೆಗೆ ಕೈ ಸುಟ್ಟುಕೊಳ್ಳುವುದು ಇದು ಗುತ್ತಿಗೆದಾರರ ಸಮಸ್ಯೆ. ಜೊತೆಗೆ ಪ್ರತಿ ಕಾಮಗಾರಿಯಲ್ಲೂ ಪರ್ಸಂಟೇಜ್ ಕೊಡುವುದನ್ನು ನಿಲ್ಲಿಸಬೇಕು. ಹಾಗಾಗಿ ಎಲ್ಲರು ಒಗ್ಗಟ್ಟಿನಲ್ಲಿ ನಮಗೇನು ಬೇಕೋ ಅದನ್ನು ಹೋರಾಟ ಮಾಡಿ ಪಡೆಯಬೇಕು ಎಂದರು.

ಈ ನಿಟ್ಟಿನಲ್ಲಿ ತಿಂಗಳ ಅಂತ್ಯಕ್ಕೆ ಜಿಲ್ಲಾ ಸಂಘದ ಸಭೆಯಲ್ಲಿ ಚರ್ಚಿಸಿ ನಮ್ಮ ಬೇಡಿಕೆಗಳಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಕೊಡುವ ನಿರ್ಣಯ ಮಾಡಲಾಗುವುದು ಎಂದರು. ಮನವಿ ಸಂದರ್ಭ ಪುತ್ತೂರು ತಾಲೂಕು ಸಂಘದ ಎಲ್ಲಾ ಸದಸ್ಯರು ಭಾಗವಹಿಸಬೇಕು. ನಮ್ಮ ಶಕ್ತಿಯನ್ನು ತೋರಿಸಬೇಕೆಂದರು.
ಇತ್ತೀಚಿಗಿನ ದಿನಗಳಲ್ಲಿ ಎಸ್.ಆರ್ ದರವನ್ನು ಎಲ್ಲಾ ಕಡೆ ಒಂದೇ ರೀತಿ ಮಾಡುತ್ತಿದ್ದಾರೆ. ರಸ್ತೆಗೆ ಮತ್ತು ಕಟ್ಟಡಕ್ಕೆ ಬೇರೆ ಬೇರೆ ಇದೆ. ಈ ನಿಟ್ಟಿನಲ್ಲಿ ಈ ಕುರಿತು ಕೂಡಾ ಮನವಿ ನೀಡಲಾಗುವುದು. ಡಿಸೆಂಬರ್ ಅಥವಾ ಜನವರಿ ತಿಂಗಳಲ್ಲಿ ರಾಜ್ಯಮಟ್ಟದಲ್ಲಿ ಸಭೆ ನಡೆಯಲಿದೆ ಎಂದರು.


ಸಭೆಯ ನಿರ್ಣಯಗಳು
ಎಸ್.ಆರ್.ದರ ಏರಿಸಬೇಕು, ವಿಶೇಷ ಅನುದಾನ ತಂದಾಗ ಆಗುವ 40% ವರೆಗಿನ ಲಂಚ ಕೊಡುವ ವ್ಯವಹಾರ ನಡೆಯುವುದು ನಿಲ್ಲಬೇಕು, ಬಿಲೋ ಹಾಕುವುದನ್ನು ನಿಲ್ಲಿಸಬೇಕು, ಸೀನಿಯಾರಿಟಿ ಮೈಂಟೈನ್ ಮಾಡಲು ಪ್ರಯತ್ನ, ಅಡ್ವಾನ್ಸ್ ವರ್ಕ್ ಮಾಡಬಾರದು ಎಂಬೆಲ್ಲ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಇವತ್ತಿನ S R Rate ಯಾವ ಇಸವಿಯಿಂದ ನೀಡುತಿದ್ದಾರೆ ಅನ್ನುವುದನ್ನು ಯಾರಾದರೂ ಅರ್ಥ ಮಾಡಿಕೊಂಡಿದ್ದಾರ ಎಂದು ಸಭೆಯಲ್ಲಿ ಪ್ರಶ್ನೆ ಎದ್ದಿತು. 2018-19 ಇಸವಿಯನ್ನು ನೀಡುತಿದ್ದರೆ 2018-19 ಕ್ಕೂ ಇವತ್ತಿನ ಮೆಟಿರಿಯಲ್ ರೇಟಿಗೂ ಎಷ್ಟು ವೆಚ್ಚಗಳಿವೆ ಎಂಬುದರ ಬಗ್ಗೆ ತಿಳಿಸುವ ಕೆಲಸವನ್ನು ಸಭೆಯಲ್ಲಿ ಮಾಡಲಾಯಿತು.
ಟೆಂಡರ್ ಆಗಿ ಮಾಡಿದ ಕಾಮಗಾರಿಗಳಿಗೆ ಬಿಲ್ ನೀಡದೆ ವಿಶೇಷ ಅನುಧಾನ ಎಂಬ ಹೆಸರಿನಲ್ಲಿ ಕಾಮಗಾರಿಯನ್ನು ಬಿಲ್ ಮಾಡುತ್ತಿದ್ದಾರೆ ಎಂದು ಗುತ್ತಿಗೆದಾರರ ಆರೋಪವಾಗಿದೆ.
ಕಾಮಗಾರಿ ಒಟ್ಟು ಹಣವನ್ನು ಟೆಂಡರ್ 10 – 10 ಲಕ್ಷದಂತೆ 50 ಲಕ್ಷ 1 ಕೋಟಿ ಮಾಡಿ ಪ್ಯಾಕೇಜ್ ಟೆಂಡರ್ ನೀಡುವ ಬಗ್ಗೆ ಗುತ್ತಿಗೆದಾರರರು ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಅನುಭವ ಇಲ್ಲದಿದ್ದರೂ ಅವನಿಗೆ ಒಂದನೇ ದರ್ಜೆಯ ಗುತ್ತಿಗೆದರನಾಗಿ ಬೋಗಸ್ ದಾಖಲೆ ನೀಡುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆಯಾಯಿತು.
ಕಾಮಗಾರಿಗಳಿಗೆ M- ಸೆಂಡ್ ಹಾಕಬಹುದೆಂದು ಇಂಜಿನಿಯರ್ ಇಲಾಖೆಯ ಆದೇಶ ಇದ್ದರು ಸ್ಥಳಿಯವಾಗಿ ಹಾಕಲು ಅಡ್ಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.
ಕಾಮಗಾರಿಗಳನ್ನು K R I D L land army ಮತ್ತು ನಿರ್ಮಿತಿ ಕೇಂದ್ರಗಳಿಗೆ ಕೊಡುವುದರ ಬಗ್ಗೆ ಯಾರ ಕೈವಾಡ ಇದೆ ಎಂದು ಗುತ್ತಿಗೆದಾರರ ಪ್ರಶ್ನಿಸಿದರು.

ಟೆಂಡರ್ ಆಗಿ ಕಾಮಗಾರಿಯನ್ನು ಪಡೆದು ಕೆಲಸ ಮುಗಿಸಲು ಅವಧಿ ಇರುತ್ತದೆ. ಆದರೆ ಕೆಲಸ ಆದ ನಂತರ ಹಣ ಪಾವತಿಸಲು ಯಾವುದೇ ವ್ಯವಸ್ಥೆ ಇರುವುದಿಲ್ಲ ಇದರ ಬಗ್ಗೆ ಸರಕಾರದ ಗಮನಕ್ಕೆ ತರಬೇಕು ಎಂದು ಹೇಳಿದರು.
ಮೊದಲು ಮಾಡಿದ ಕಾಮಗಾರಿಯ ಹಣ ಪಾವತಿ ಮಾಡದೇ ನಂತರ ಮಾಡಿದ ಕಾಮಗಾರಿಗಳಿಗೆ ಬಿಲ್ಲನ್ನು ಪಾವತಿಸುವ ಬಗ್ಗೆ ಕ್ರಮ ಕೈಗೊಳ್ಳಲು ಸರಕಾರಕ್ಕೆ ತಿಳಿಸಬೇಕು ಎಂದು ಒತ್ತಾಯಿಸಿದರು.
ಬಾಕಿ ಇರುವ ಬಿಲ್ಲನ್ನು ತಕ್ಷಣವೇ ಬಿಡುಗಡೆ ಮಾಡಬೇಕಾಗಿ ಸರಕಾರಕ್ಕೆ ಒತ್ತಡ ಹೇರಬೇಕು ಎಂದು ಸಭೆಯಲ್ಲಿ ಚರ್ಚೆಯಾಯಿತು ಎನ್ನುತ್ತಾರೆ ಗುತ್ತಿಗೆದಾರರರು.
ಮರಳಿನ ಸಮಸ್ಯೆ ಇದ್ದರು ಮರಳನ್ನು ಹಾಕಿ ಕೆಲಸ ಮಾಡಬೇಕೆಂದು ಇಲಾಖೆಯವರು ಒತ್ತಡ ಹೇರುತ್ತಿರುವುದರಿಂದ ಗುತ್ತಿಗೆದಾರರಿಗೆ ಆಗುತ್ತಿರುವ ತೊಂದರೆಯನ್ನು ಸರಿ ಪಡಿಸಲು ಕ್ರಮ ಕೈಗೊಳ್ಳಬೇಕು ಎಂದರು.
10 ಲಕ್ಷದವರೆಗಿನ ಕಾಮಗಾರಿಯನ್ನು ತಾಲೂಕು ಮಟ್ಟದಲ್ಲಿ ಇರುವ ಗುತ್ತಿಗೆದಾರರೇ ಟೆಂಡರನ್ನು ಹಾಕುವ ಹಾಗೆ ಜಿಲ್ಲಾ ಗುತ್ತಿಗೆದಾರರ ಸಂಘದಲ್ಲಿ ನಿರ್ಣಯ ಕೈಗೊಳ್ಳಬೇಕು ಎಂದರು.
ಗುತ್ತಿಗೆದಾರರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ ಕೆ ಅಬ್ದುಲ್ ನಾಝಿರ್, ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್, ಪುತ್ತೂರು ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಗುರುಪ್ರಸಾದ್, ಖಜಾಂಜಿ ಉಸ್ಮಾನ್, ಕಾರ್ಯದರ್ಶಿ ಮಂಜುನಾಥ್, ಉಪಾಧ್ಯಕ್ಷ ಗಿರೀಶ್ , ಗೌರವ ಸಲಹೆಗಾರ ಹರೀಶ್, ಬೆಳ್ತಂಗಡಿ ತಾಲೂಕು ಉಪಾಧ್ಯಕ್ಷ ಗಿರೀಶ್ ಕುಮಾರ್, ಮುರಳಿಕೃಷ್ಣ ಹಸಂತಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪದ್ಮಶ್ರೀ ಗ್ರೂಪ್ಸ್‌ನ ಸೀತಾರಾಮ ರೈ ಸ್ವಾಗತಿಸಿ, ಲೋಕೇಶ್ ರೈ ವಂದಿಸಿದರು.