ಪುತ್ತೂರು, ನ 16 : ಕಬಕ ಪೇಟೆಯಲ್ಲಿರುವ ಅಂಗಡಿಗಳಿಗಳಲ್ಲಿ ಸರಣಿ ಕಳ್ಳತನವಾದ ಘಟನೆ ನ15 ರ ರಾತ್ರಿ ನಡೆದಿದೆ. ಕಬಕದ ರೋಟರಿ ಕಟ್ಟಡ ದಲ್ಲಿರುವ ಹೋಟೆಲ್ ವಿಜಿ ಹಾಗೂ ಬ್ರೈಟ್ ಕಾಂಪ್ಲೆಕ್ಸ್ ನಲ್ಲಿರುವ ಕಬಕ ಜನರಲ್ ಸ್ಟೋರ್ ನಿಂದ ನಗದು ಮತ್ತು ಸೊತ್ತುಗಳು ಕಳವಾಗಿದೆ. ಮುಖ್ಯ ರಸ್ತೆಯ ಬದಿಯಲ್ಲೇ ಇರುವ ಅಂಗಡಿಯಾಗಿದ್ದು, ನಿರ್ಭೀತಿಯಿಂದಲೇ ಕಳ್ಳರು ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ.
ಕಳ್ಳರು ರೋಲಿಂಗ್ ಶಟರ್ ನ ಬೀಗ ಮುರಿದು ಒಳ ನುಗ್ಗಿ ನಗದು ಹಾಗೂ ಚಿಲ್ಲರೆ ಸಾಮಗ್ರಿಗಳನ್ನು ಕಳವು ಗೈದಿರುವುದಾಗಿ ತಿಳಿದುಬಂದಿದೆ ಅದಲ್ಲದೆ ಸ್ಥಳೀಯ ಗ್ಯಾರೇಜಿಗೂ ಕಳ್ಳರು ನುಗ್ಗಿದ್ದಾರೆಂದು ತಿಳಿದು ಬಂದಿದೆ.
ಕಳ್ಳತನವಾಗಿದೆ ಎನ್ನಲಾದ ಅಂಗಡಿಯ ಜಗಲಿಯಲ್ಲಿ ಬಿಸ್ಕೆಟ್ ಕಟ್ಟುಗಳು ಪತ್ತೆಯಾಗಿದೆ. ಜನರಲ್ ಸ್ಟೋರ್ ವೊಂದರಿಂದ ಕಳವು ಮಾಡಿದ ಬಿಸ್ಕೆಟ್ ಮತ್ತು ಚಾಕಲೇಟ್ ಪ್ಯಾಕ್ ಗಳನ್ನು ಪಕ್ಕದ ಅಂಗಡಿಯ ಜಗಲಿಯಲ್ಲಿ ಬಿಟ್ಟು ಹೋಗಿದ್ದಾರೆ.
ಈ ಬಗ್ಗೆ ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳವು ನಡೆದಿರುವ ಅಂಗಡಿಗಳಿಗೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಅವರು ಭೇಟಿ ನೀಡಿದ್ದು, ಕಳ್ಳತನದ ಬಗ್ಗೆ ಮಾಹಿತಿಯನ್ನು ಪಡೆದರು
ಕಳೆದ ವಾರವಷ್ಟೆ ಕಡಬದಲ್ಲಿ ಸರಣಿ ಕಳ್ಳತನದ ಪ್ರಕರಣ ನಡೆದಿತ್ತು. ಆ ಪ್ರಕರಣ ಮಾಸುವಷ್ಟರಲ್ಲೇ ಕಬಕದಲ್ಲಿಯೂ ಸರಣಿ ಕಳ್ಳತನ ಪ್ರಕರಣ ನಡೆದಿದ್ದು ಭಾರೀ ಆತಂಕ ಮೂಡಿಸಿದೆ.