ಬಂಟ್ವಾಳ, ನ 16 : ಮಸೀದಿಗೆ ನುಗ್ಗಿ ಧರ್ಮಗುರುಗಳ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪದ ಮೇಲೆ ಮೂವರನ್ನು ಕೊಣಾಜೆ ಪೊಲೀಸರು ಸೋಮವಾರ ನವೆಂಬರ್ 15 ರಂದು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳದ ಕಾರ್ನಾಡ್ ನಿವಾಸಿ ಶರಣ್ (24), ವಿಘ್ನೇಶ್ (23) ಮತ್ತು ಹರ್ಷಿತ್ (22) ಎಂದು ಗುರುತಿಸಲಾಗಿದೆ.
ನವೆಂಬರ್ 14 ರ ಭಾನುವಾರ ಮಧ್ಯರಾತ್ರಿ ಆರೋಪಿಗಳು ದ್ವಿಚಕ್ರ ವಾಹನದಲ್ಲಿ ಬಂದು ದೂರುದಾರರ ಅಬ್ದುಲ್ ಸಮೀರ್ ಮನೆ ಬಳಿ ಬಂದ ಆರೋಪಿಗಳು ಮುಸ್ಲಿಂ ಸಮುದಾಯವನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
ದೂರುದಾರರು ಮನೆಯಿಂದ ಹೊರಗೆ ಬಂದಾಗ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆ ಬಳಿಕ ಮಸೀದಿಗೆ ನುಗ್ಗಿ ಧರ್ಮಗುರುಗಳನ್ನು ನಿಂದಿಸಿ ಹಲ್ಲೆಗೆ ಯತ್ನಿಸಿದ್ದು ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರು ನೀಡಲಾಗಿತ್ತು.
ಈ ಬಗ್ಗೆ ಮೂವರನ್ನು ಪೊಲೀಸರು **ಬಂಧಿಸಿದ್ದಾರೆ** .