ಬೆಂಗಳೂರು: ನ 16: ರಾಜ್ಯದಲ್ಲಿ ಶಬ್ದ ಮಾಲಿನ್ಯಕ್ಕೆ ಕಾರಣರಾಗುತ್ತಿರುವವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಖಡಕ್ಕಾಗಿ ಆದೇಶಿಸಿದೆ. ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಯೊಂದರ ವಿಚಾರಣೆಯನ್ನು ಇಂದು ನಡೆಸಿದ ನ್ಯಾಯಾಲಯವೂ ಈ ನಿರ್ದೇಶನ ನೀಡಿದೆ.
ದ್ವಿಚಕ್ರ ವಾಹನಗಳು, ನೈಟ್ ಕ್ಲಬ್ಗಳು, ಮಸೀದಿಗಳು ಸೇರಿದಂತೆ ಹಲವಾರು ಬಗೆಯಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದ್ದು, ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸ ಬೇಕೆಂದು ಕೋರಿ ಗಿರೀಶ್ ಭಾರದ್ವಾಜ್ ಎಂಬುವರು ಈ ಪಿಐಎಲ್ ಸಲ್ಲಿಸಿದ್ದಾರೆ.
ಬೆಂಗಳೂರಿನಲ್ಲಿನ ಮಸೀದಿಗಳlಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಈ ಪಿಐಎಲ್ ನಲ್ಲಿ ನಿರ್ದೀಷ್ಟವಾಗಿ ತಿಳಿಸಲಾಗಿತ್ತು. ಈ ಬಗ್ಗೆ ನ್ಯಾಯಾದೀಶರು “ಮಸೀದಿಗಳು ಪ್ರಮಾಣ ಪತ್ರದಲ್ಲಿ ವಕ್ಫ್ ಬೋರ್ಡ್ ಸೂಚನೆಯಂತೆ ದ್ವನಿವರ್ಧಕ ಬಳಸುತ್ತಿದ್ದೇವೆ ಎಂದು ತಿಳಿಸಿವೆ. ಆದರೆ ವಕ್ಪ್ ಬೋರ್ಡ್ಗೆ ದ್ವನಿವರ್ಧಕ ಬಳಸಲು ಅನುಮತಿ ನೀಡುವ ಅಧಿಕಾರವಿಲ್ಲ. ಹೀಗಾಗಿ ಯಾವ ಕಾನೂನಿನ ಅಡಿ ಇಂತಹ ಸುತ್ತೋಲೆ ಹೊರಡಿಸಿದೆ ಎಂಬ ಬಗ್ಗೆ ವಕ್ಪ್ ಮಂಡಳಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದರು.

ಈವರೆಗೆ ರಾಜ್ಯ ಸರಕಾರ ಶಬ್ದ ಮಾಲಿನ್ಯ ತಡೆಯುವಲ್ಲಿ ಯಾವುದೇ ಕ್ರಮ ಕೈಗೊಳ್ಳದಿರುವ ಬಗ್ಗೆ ಅಸಮಾಧನ ಹೊರ ಹಾಕಿದ ನ್ಯಾಯಪೀಠ ‘ಪರಿಸ್ಥಿತಿ ನೋಡಿದರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಂತೆ ಕಾಣುತ್ತಿಲ್ಲʼ ಎಂದು ಹೇಳಿದೆ
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಗಳು-2000ರ ನಿಯಮಗಳ ಪ್ರಕಾರ ರಾತ್ರಿ 10 ರಿಂದ ಬೆಳಗ್ಗೆ 6ರವರೆಗೆ ದ್ವನಿವರ್ಧಕ ಬಳಸುವಂತಿಲ್ಲ. ಅದೇ ರೀತಿ ಸಾರ್ವಜನಿಕ ಹಬ್ಬಗಳ ಸಂದರ್ಭದಲ್ಲಿ ವಾರ್ಷಿಕ 15 ದಿನಗಳಷ್ಟೇ ದ್ವನಿವರ್ಧಕ ಬಳಕೆಗೆ ಅವಕಾಶವಿದೆ. ಆದರೆ, ರಾಜ್ಯದಲ್ಲಿ ನಿಯಮಗಳ ಪಾಲನೆ ಆಗುತ್ತಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು. ಜತೆಗೆ ಮಾರ್ಪಾಡಿತ ವಾಹನಳಿಂದಲೂ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದರು. ಅದಕ್ಕೆ ಕೋರ್ಟ್, ಇಂಥ ವಾಹನಗಳು ಹಾಗೂ ಮಸೀದಿಗಳ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ, ಆ ಬಗ್ಗೆ ವರದಿ ನೀಡಿ ಎಂದು ಸರ್ಕಾರಕ್ಕೆ ಸೂಚಿಸಿದೆ.
ಇದೇ ವೇಳೆ ವಾಹನಗಳ ಸೈಲೆನ್ಸರ್ ಮಾರ್ಪಡಿಸಿ ಅತಿ ಹೆಚ್ಚಿನ ಶಬ್ಧ ಉಂಟು ಮಾಡುತ್ತಿರುವ ವಿಚಾರವನ್ನೂ ನ್ಯಾಯಾಲಯ ಸರ್ಕಾರದ ಗಮನಕ್ಕೆ ತಂದಿದೆ. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ಸೈಲೆನ್ಸರ್ ಮಾರ್ಪಡಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಇದನ್ನು ತಡೆಯಲು ಮೋಟಾರು ವಾಹನ ಕಾಯ್ದೆಯಡಿ ಕ್ರಮ ಕೈಗೊಳ್ಳಿ ಎಂದೂ ಹೇಳಿತು.
ನೀವು ಯಾವುದಾದ್ರೂ ಮುಖ್ಯ ರಸ್ತೆಯಲ್ಲಿ ನಿಂತು ನೋಡಿ.. ರಸ್ತೆಗಳಲ್ಲಿ ವಾಹನಗಳ ಶಬ್ಧ ಎಷ್ಟರ ಮಟ್ಟಿಗೆ ಇರುತ್ತೆ ಎಂದು ಅರಿವಿಗೆ ಬರುತ್ತೆ ಎಂದು ಚಾಟಿ ಬೀಸಿದ ನ್ಯಾಯಾಲಯ, ರಾಜ್ಯ ಸರ್ಕಾರವು ಈ ಸಂಬಂಧ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ತಾಕೀತುಮಾಡಿತು. ಅತಿ ಹೆಚ್ಚು ಶಬ್ಧ ಹೊರಸೂಸುವ ವಾಹನಗಳನ್ನು ಪತ್ತೆ ಮಾಡಿ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿತು.
ಇದೇ ವೇಳೆ ನೈಟ್ ಕ್ಲಬ್‌ಗಳೂ ಕೂಡಾ ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದು, ಅವುಗಳ ವಿರುದ್ಧವೂ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕೋರ್ಟ್ ಹೇಳಿದೆ. ಈ ಸಂಬಂಧ ಮುಂದಿನ ವಿಚಾರಣೆಯ ದಿನಾಂಕ ನಿಗದಿಪಡಿಸೋದಾಗಿ ತಿಳಿಸಿದೆ.