ಕ್ರಿಕೇಟರ್ ಹಾರ್ದಿಕ್ ಪಾಂಡ್ಯ ಗೆ ಸೇರಿದ ಕೋಟ್ಯಾಂತರ ಬೆಲೆಬಾಳುವ ಎರಡು ವಾಚ್ ಗಳು ವಿಮಾನ ನಿಲ್ದಾಣದಲ್ಲಿ ಕಸ್ಟಮ್ ವಶಕ್ಕೆ- ಗರಂ ಆದ ಪಾಂಡ್ಯ

20211116_122233
Ad Widget

Ad Widget

Ad Widget

ಮುಂಬೈ: ಭಾರತೀಯ ಕ್ರಿಕೆಟ್ ತಂಡದ ಆಟಗಾರ ಹಾರ್ದಿಕ್ ಪಾಂಡ್ಯ ಅವರಿಗೆ ಕಸ್ಟಮ್ಸ್ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಯುಎಇಯಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾಗವಹಿಸಿ ಭಾರತಕ್ಕೆ ಮರಳುತ್ತಿರುವ ಪಾಂಡ್ಯ ವಿರುದ್ಧ ಕಸ್ಟಮ್ಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ.
ಭಾನುವಾರ ರಾತ್ರಿ ಎರಡು ದುಬಾರಿ ವಾಚ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮುಂಬೈ ವಿಮಾನ ನಿಲ್ದಾಣದಲ್ಲಿ ಪಾಂಡ್ಯ ಅವರನ್ನು ತಡೆದಿದ್ದರು. ಕೈಗಡಿಯಾರುಗಳು ಹೇಗೆ ಬಂದ್ವು? ಎಲ್ಲಿ ಖರೀದಿ ಮಾಡಿದ್ರಿ? ಇವುಗಳ ಬಿಲ್ ಎಲ್ಲಿ ಅಂತಾ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.

Ad Widget

ಆದ್ರೆ, ಆಲ್ ರೌಂಡರ್ ಆಟಗಾರ ಹಾರ್ದಿಕ್ ಪಾಂಡ್ಯ ಅಧಿಕಾರಿಗಳ ಯಾವ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಿಲ್ಲ. ಅಲ್ಲದೆ ದುಬಾರಿ ವಾಚ್ ಗಳಿಗೆ ಸಂಬಂಧಿಸಿದಂತೆ ಬಿಲ್‌ನ್ನು ಸಹ ತೋರಿಸಲಿಲ್ಲ. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಎರಡೂ ವಾಚುಗಳನ್ನು ಜಪ್ತಿ ಮಾಡಿಕೊಂಡಿದೆ. ಎರಡೂ ಕೈಗಡಿಯಾರಗಳ ಬೆಲೆ ಸುಮಾರು 5 ಕೋಟಿ ರೂಪಾಯಿ ಇರಬಹುದು ಎಂದು ಹೇಳಲಾಗುತ್ತಿದೆ.

Ad Widget

Ad Widget

Ad Widget

ಹಾರ್ದಿಕ್ ಪಾಂಡ್ಯ ಭಾನುವಾರ ತಂಡದೊಂದಿಗೆ ಮನೆಗೆ ಮರಳಿದರು. ಆದರೆ ಅವರನ್ನು ಏರ್​ಪೋರ್ಟ್​ನಲ್ಲೇ ತಡೆದ ಕಸ್ಟಮ್ಸ್ ಇಲಾಖೆ ಅವರ ದುಬಾರಿ ವಾಚ್‌ಗಳನ್ನು ಜಪ್ತಿ ಮಾಡಿದೆ ಎಂದು ವರದಿಯಾಗಿದೆ. ಹಾರ್ದಿಕ್ ವಿಶ್ವದ ಅತ್ಯಂತ ದುಬಾರಿ ವಾಚ್‌ಗಳನ್ನು ಹೊಂದಿದ್ದಾರೆ ಮತ್ತು ಅವರ ವಾಚ್ ಸಂಗ್ರಹವು ಪಾಟೆಕ್ ಫಿಲಿಪ್ ನಾಟಿಲಸ್ ಪ್ಲಾಟಿನಂ 5711 ಅನ್ನು ಸಹ ಒಳಗೊಂಡಿದೆ . ಇದರ ಬೆಲೆ ಬರೋಬ್ಬರಿ 5 ಕೋಟಿ ರೂ. ಆಗಿದೆ.

Ad Widget

ಹಾರ್ಧಿಕ್ ಪಾಂಡ್ಯ ಗರಂ: ಈ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಹಾರ್ಧಿಕ್ ಪಾಂಡ್ಯ ಈ ವಾಚ್ 5 ಕೋಟಿದ್ದು ಅಲ್ಲ 1.5 ಕೋಟಿ ಬೆಲೆಯ ಇದಾಗಿದೆ ಎಂದಿದ್ದಾರೆ. ನಾನು ದೇಶದ ಕಾನೂನಿಗೆ ಗೌರವಕೊಡುವವನಾಗಿದ್ದು. ಯಾವೂದೇ ತಪ್ಪು ನಡೆಸಿಲ್ಲ. ಎಲ್ಲಾ ಬಿಲ್ ಗಳನ್ನು ತೋರಿಸಿದ್ದೇನೆ ಎಂದು ಪಾಂಡ್ಯ ಟ್ವಿಟರಲ್ಲಿ ಪ್ರಕಟನೆ ಹೊರಡಿಸಿದ್ದಾರೆ. ಯಾರೋ ತಪ್ಪು ಮಾಹಿತಿ ಹಬ್ಬಿಸಿ ಎಂದು ಗರಂ ಆಗಿದ್ದಾರೆ

Ad Widget

Ad Widget

Leave a Reply

Recent Posts

ದೇಶದಲ್ಲಿ ಹಿಂದೂಗಳ ಶಕ್ತಿ ಹೇಗಿರಬೇಕೆಂದರೆ ಸರ್ಕಾರ ಹಿಂದೂಗಳ ಹೇಳಿಕೆಯಂತೆ ನಡೆಯಬೇಕು..! : ದೇವಸ್ಥಾನಗಳನ್ನು ಸರಕಾರಿಕರಣಗೊಳಿಸಿದಂತೆ ಮಸೀದಿಗಳನ್ನು ಏಕೆ ಮಾಡುವುದಿಲ್ಲ..? ಮಂದಿರ ಸಂಸ್ಕೃತಿ ರಕ್ಷಣೆ ಸಭೆಯಲ್ಲಿ ಚರ್ಚೆ – ಮುಂಬೈಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿನ ಭ್ರಷ್ಟಾಚಾರ ಬೆಳಕಿಗೆ ತಂದಿರುವ ಸುಪ್ರಸಿದ್ಧ ಸರ್ಜನ್ ರ ಪುಸ್ತಕ ಬಿಡುಗಡೆ

error: Content is protected !!
%d bloggers like this: