ಬೆಂಗಳೂರು: ಬಿಟ್ ಕಾಯಿನ್ ಹಗರಣದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಪ್ರಿಯಾಂಕ್ ಖರ್ಗೆ ಎಳೆದು ತಂದಿದ್ದಾರೆ.
ಬಿಟ್‌ಕಾಯಿನ್ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ!
ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ ಬಿಟ್ ಕಾಯಿನ್ ವಿಚಾರದಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ ಎಂದು ನನಗೆ ಖಾತ್ರಿಯಿದೆ. ಅವರು ತಮ್ಮ ಮೌನ ಮುರಿಯಬೇಕು ಇಲ್ಲವಾದಲ್ಲಿ ಅವರ ‘ನಿಗೂಢ ಮೌನ’ದ ಬಗ್ಗೆ ಜನರು ತಪ್ಪು ತಿಳಿಯಬಹುದು.
— PRIYANK KHARGE / ಪ್ರಿಯಾಂಕ್ ಖರ್ಗೆ (@PRIYANKKHARGE) NOVEMBER 15, 2021
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಟ್‌ಕಾಯಿನ್ ವಿಚಾರದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರು ಮೌನವಾಗಿರುವುದನ್ನು ನೋಡಿ ನನಗೆ ಆಶ್ಚರ್ಯವಾಗಿದೆ..! ಆಡಳಿತ ಪಕ್ಷದ ಅಧ್ಯಕ್ಷರಾಗಿ ಅವರಿಗೆ ಬಿಟ್ ಕಾಯಿನ್ ವಿಚಾರದಲ್ಲಿ ಸಾಕಷ್ಟು ಮಾಹಿತಿ ಇರುತ್ತದೆ ಎಂದು ನನಗೆ ಖಾತ್ರಿಯಿದೆ.
ಅವರು ತಮ್ಮ ಮೌನ ಮುರಿಯಬೇಕು ಇಲ್ಲವಾದಲ್ಲಿ ಅವರ ‘ನಿಗೂಢ ಮೌನ’ದ ಬಗ್ಗೆ ಜನರು ತಪ್ಪು ತಿಳಿಯಬಹುದು ಎಂದು ಕಾಲೆಳೆದಿದ್ದಾರೆ.
ಬಿಟ್ ಕಾಯಿನ್ ವಿಷಯವಾಗಿ ವಿರೋಧ ಪಕ್ಷ ದೇಶದ ಅತೀ ದೊಡ್ಡ ಭ್ರಷ್ಟಾಚಾರ ಎಂದು ಹೇಳುತಿದ್ದಾರೆ. ಪ್ರಭಾವಿ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ ಎನ್ನುತ್ತಿದ್ದಾರೆ. ಬಿಜೆಪಿ ನಾಯಕರು ವಿರೋಧಿಸುತಿದ್ದಾರೆ.
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಈ ವಿಚಾರವಾಗಿ ಮಾತನಾಡದೇ ಮೌನವಾಗಿದ್ದಾರೆ.