Ad Widget

ಅಭಿಮಾನಿ ದೇವರುಗಳಿಗೆ ಪುನೀತ್ ಪತ್ನಿಯ ಭಾವುಕ ಪತ್ರ – 20 ದಿನಗಳ ಬಳಿಕ ಮೌನ ಮುರಿದ ಅಶ್ವಿನಿ ಪುನೀತ್

puneeth-ashwini-
Ad Widget

Ad Widget

ಪವರ್‌ ಸ್ಟಾರ್‌  ಪುನೀತ್​ ರಾಜ್​ಕುಮಾರ್​ ಅಗಲಿ 20 ದಿನ ಕಳೆದರೂ, ಅಪ್ಪು ಕುಟುಂಬಸ್ಥರು ಮಾತ್ರವಲ್ಲದೇ, ಇಡೀ ಕರ್ನಾಟಕ  ಆ ಆಘಾತದಿಂದ ಚೇತರಿಸಿಕೊಂಡಿಲ್ಲ. ಪುನೀತ್‌ ಸಾವಿನ ಬಳಿಕ ಸಾರ್ವಜನಿಕವಾಗಿ ಮೌನಕ್ಕೆ ಶರಣಾಗಿದ್ದ ಪತ್ನಿ ಅಶ್ವಿನಿ ಪುನೀತ್‌ ರಾಜಕುಮಾರ್‌ ಇದೇ ಮೊದಲ ಬಾರಿಗೆ ತನ್ನ ಕಾಷ್ಠ ಮೌನವನ್ನು ಮುರಿದಿದ್ದಾರೆ. ಭಾವನಾತ್ಮಕ ಪತ್ರವೊಂದನ್ನು ಬರೆದು ಅದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿ ಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ನೋವನ್ನು ತೋಡಿಕೊಂಡಿದ್ದು ಮಾತ್ರವಲ್ಲದೇ ಈ ವಿಷಮ ಗಳಿಗೆಯಲ್ಲಿ ಪುನೀತ್‌ ಅಭಿಮಾನಿಗಳು ತೋರಿದ ಸಂಯಮಕ್ಕೂ ಹೃದಯಾಂತರಾಳದಿಂದ ಧನ್ಯವಾದ ಅರ್ಪಿಸಿದ್ದಾರೆ   

Ad Widget

Ad Widget

Ad Widget

Ad Widget

  ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ  ಪುನೀತ್‌ ರಾಜಕುಮಾರ್‌ ಅವರಿಗೆ ಶ್ರದ್ದಾಂಜಲಿ ಆರ್ಪಿಸುವ ಪ್ರಯುಕ್ತ ಪುನೀತ್‌ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದಕ್ಕೆ ದೊಡ್ಮನೆಯಿಂದ  ಶಿವರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್​ , ಆಶ್ವಿನಿ ಪುನೀತ್‌ ರಾಜಕುಮಾರ್‌ ಹಾಗೂ ಅವರ ಕುಟುಂಬದವರು ಆಗಮಿಸಿದ್ದರು ಆಶ್ವಿನಿಯವರು ಕಣ್ಣೀರು ಹಾಕಿದರು. ಅಲ್ಲದೆ, ಅರ್ಧದಲ್ಲೆ ಕಾರ್ಯಕ್ರಮದಿಂದ ಹೊರ  ಹೋಗಿದ್ದಾರೆ

Ad Widget

Ad Widget

Ad Widget

Ad Widget

ಅದಾದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಒಂದು ಶೇರ್‌ ಮಾಡಿಕೊಂಡಿದ್ದಾರೆ. ಅದರಲ್ಲಿ ಪುನೀತ್‌ ಅದರ್ಶಗಳನ್ನು ಮಾದರಿಯಾಗಿರಿಸಿಕೊಂಡು ಮಾಡುತ್ತಿರುವ ಸತ್ಕಾರ್ಯಗಳಿಗೆ ಮೆಚ್ಚುಗೆ ಸೂಚಿಸಿದ್ದೂ, ಶೋಕವನ್ನು ಹಂಚಿಕೊಂಡ ಅಭಿಮಾನಿ ದೇವರುಗಳಿಗೆ ಹೃತ್ಪೂರ್ವಕ ಧನ್ಯವಾದ ಆರ್ಪಿಸಿದ್ದಾರೆ.

 

Ad Widget

Ad Widget

‘ಪುನೀತ್ ರಾಜ್‌ಕುಮಾರ್ ಅವರ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೆ ಆಘಾತಕಾರಿ ವಿಷಯ. ನಿಷ್ಕಲ್ಮಶ ಪ್ರೀತಿಯಿಂದ, ಅಕ್ಕರೆಯ ಅಭಿಮಾನದಿಂದ ಅವರನ್ನು ಪವರ್ ಸ್ಟಾರ್ ಆಗಿ ರೂಪಿಸಿದ್ದ ನಿಮ್ಮೆಲ್ಲರಿಗೆ ಅವರ ವಿದಾಯ ತಂದಿತ್ತ ದುಃಖ ಎಷ್ಟಿರಬಹುದೆಂದು ಊಹಿಸಲು ಸಾಧ್ಯವಿಲ್ಲ. ಆದರೂ ಇಂತಹ ಸಂದರ್ಭದಲ್ಲಿ ನೀವುಗಳು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ ಅಹಿತಕರ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದಿರಿ’ ಎಂದು ಪತ್ರ ಆರಂಭಿಸಿದ್ದಾರೆ

‘ಸಿನಿಮಾ ಪ್ರೇಮಿಗಳಷ್ಟೇ ಅಲ್ಲದೇ, ವಯೋಮಾನದ ಮಿತಿಯಿಲ್ಲದೇ, ದೇಶವಿದೇಶಗಳಿಂದ ಕೋಟ್ಯಂತರ ಜನರು ಸಂತಾಪ ಸೂಚಿಸುವುದನ್ನು ಕಂಡಾಗ ಮನಸ್ಸು ಭಾರವಾಗುತ್ತದೆ. ನಿಮ್ಮ ಪ್ರೀತಿಯ ಅಪ್ಪು ಅವರು ಹಾಕಿಕೊಟ್ಟ ದಾರಿಯಲ್ಲಿ ನಡೆಯುತ್ತಾ ಸಾವಿರಾರು ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡಿಸುವುದನ್ನು ನೋಡಿದಾಗ ಕಣ್ಣುಂಬಿ ಬರುತ್ತದೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವುಗಳು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ. ವಿಶ್ವದಾದ್ಯಂತ ನಮ್ಮ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಹತ್ತೂರ್ವಕ ಧನ್ಯವಾದಗಳು’ ಎಂದು ಪತ್ರ ಪೂರ್ಣಗೊಳಿಸಿದ್ದಾರೆ ಅಶ್ವಿನಿ ಅವರು.

Ad Widget

Leave a Reply

Recent Posts

error: Content is protected !!
%d bloggers like this: