ಮಂಗಳೂರು, ನ.15: ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ಗೆ ಮುಸ್ಲಿಮರ ಮಾಲ್ ಗಳ ಹಣ ಆಗುತ್ತದೆ. ಆದರೆ ಮುಸ್ಲಿಂ ಯುವಕರು ಯಾಕೆ ಆಗುವುದಿಲ್ಲ ಎಂದು ಬಿರುವೆರ್ ಕುಡ್ಲ ಮಂಗಳೂರು ಪ್ರಶ್ನಿಸಿದಲ್ಲದೆ, ಪಂಪ್ವೆಲ್ ಬಿರುವೆರ್ ಕುಡ್ಲದ ಕ್ಷಮೆಯಾಚಿಸಿಬೇಕೆಂದು ಒತ್ತಾಯಿಸಿದೆ.
ವಿಹಿಂಪ ನಾಯಕ ಶರಣ್ ಪಂಪ್ವೆಲ್ ಬಿರುವೆರ್ ಕುಡ್ಲ ಸಂಘಟನೆಯ ವಿರುದ್ದ ಹೇಳಿಕೆ ನೀಡಿದ ಬೆನ್ನಲ್ಲೇ ಬಿರುವೆರ್ ಕುಡ್ಲ ಸಂಘಟನೆ ಪತ್ರಿಕಾಗೋಷ್ಠಿ ಕರೆದಿದೆ.
ಮಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿರುವೆರ್ ಕುಡ್ಲದ ಸಂಚಾಲಕ ಲಕ್ಷ್ಮೀಶ್ ಈ ಹಿಂದೆ ನಡೆದ ಸಭೆಯೊಂದರಲ್ಲಿ ಶರಣ್ ಪಂಪ್ವೆಲ್ ಬಿರುವೆರ್ ಕುಡ್ಲ ಒಂದು ಜಾತಿಗೆ ಸೀಮಿತವಾಗಿದೆ ಎಂದಿದ್ದರು. ಬಿರುವೆರ್ ಕುಡ್ಲ ಸಮಾಜ ಸೇವೆಗಾಗಿ ಹುಟ್ಟಿಕೊಂಡ ಸಂಸ್ಥೆಯಾಗಿದೆ. ಏಳು ವರ್ಷಗಳಿಂದ ಸಂಸ್ಥೆಯು ಬಡವರಿಗೆ ಜಾತಿ ಭೇದ ನೋಡದೆ ಮೂರೂವರೆ ಕೋಟಿ ರೂ.ಗಳ ಸಹಾಯ ಮಾಡಿದೆ ಎಂದರು.
ಶರಣ್ ಪಂಪ್ವೆಲ್ ಅವರೇ ಮುಸ್ಲಿಂರ ದುಡ್ಡು ಆಗ್ತಾದ : ದೀಪು ಶೆಟ್ಟಿಗಾರ್ ಪ್ರಶ್ನೆ-ವಿಡಿಯೋ
ಬಿರುವೆರ್ ಕುಡ್ಲದ ದೀಪು ಶೆಟ್ಟಿಗಾರ್ ಮಾತನಾಡಿ ನಾನು ಬಿಲ್ಲವ ಅಲ್ಲ ಆದರೆ ಸಂಘಟನೆಯ ಉತ್ತಮ ಕೆಲಸ ನೋಡಿ ಹೋದವ. ಸಂಘಟನೆಗೆ ಜನ ಬೇಕು ಅಂತ ಓಡೋದಿಲ್ಲ ಜನರೇ ಬಿರುವೆರ್ ಕುಡ್ಲದ ಹಿಂದೆ ಬರ್ತಾರೆ ಎಂದರು. ದುಡ್ಡು ಮತ್ತು ಜಾತಿಯ ಹಿಂದೆ ಹೋದರೆ ಯಾವಾ ಸಂಘಟನೆಗೆ ಜನ ಕಡಿಮೆ ಆಗಬಹುದು ಯೋಚಿಸಿ ಎಂದು ಶರಣ್ ಪಂಪ್ವೆಲ್ ಗೆ ಉತ್ತರ ಕೊಟ್ಟರು.
ಬಿರುವೆರ್ ಕುಡ್ಲ ಸಂಘಟನೆಯ ವಿರುದ್ದ ವಾಗ್ದಾಳಿ ನಡೆಸಿದ ವಿಹಿಂಪ ನಾಯಕ ಶರಣ್ ಪಂಪ್ವೆಲ್ – ವಿಡಿಯೋ
ಶರಣ್ ಪಂಪ್‌ವೆಲ್ ಸಿಟಿ ಸೆಂಟರ್ ಸಹಿತ ಹಲವು ಮುಸ್ಲಿಮರ ಮಾಲ್ ಗಳ ಕೇಂದ್ರಗಳ ಗುತ್ತಿಗೆ ಪಡೆದು ಸಾಕಷ್ಟು ಹಣ ಸಂಪಾದಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಹೋರಾಟ ಮಾಡುವ ಅವರಿಗೆ ಮುಸ್ಲಿಮರ ಸಂಸ್ಥೆಯ ಹಣವಾಗುತ್ತದೆ, ಆದರೆ ಮುಸ್ಲಿಂ ಯುವಕರು ಬೇಡವಾಗಿದೆ ಎಂದು ಜನ ಮಾತನಾಡಿಕೊಳ್ತಿದ್ದಾರೆ. ಇದು ಎಷ್ಟು ಸರಿ ಶರಣ್ ಪಂಪ್ವೆಲ್ ಅವರೇ ಎಂದು ದೀಪು ಶೆಟ್ಟಿಗಾರ್ ಪ್ರಶ್ನಿಸಿದರು.
ನಾವು ಹೆಣ ಹೊರುವುದರಿಂದ ಹಿಡಿದು ಮನೆ ಕಟ್ಟಿ ಕೊಡುವವರೆಗೆ ಸಮಾಜ ಸೇವೆ ಮಾಡುತ್ತಿದ್ದೇವೆ. ಬಲ್ಲಾಳ್ ಬಾಗ್‌ನಲ್ಲಿ ಬಿರುವೆರ್ ಕುಡ್ಲ ಜನಪರ ಕೆಲಸ ಮಾಡಿದೆಯೇ ವಿನಃ ಶರಣ್ ಪಂಪ್‌ವೆಲ್‌ರಂತೆ ಸಮಾಜ ಒಡೆಯುವ ಕೆಲಸ ಮಾಡಿಲ್ಲ ಎಂದರು. ಬಿರುವೆರ್ ಕುಡ್ಲ ಸಂಘಟನೆಯನ್ನು ಶರಣ್ ಪಂಪ್ವೆಲ್ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕಿಶೋರ್ ಬಾಬು, ವಿದ್ಯಾ, ರಾಕೇಶ್, ಉದಯ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.