ಪಾಲಕ್ಕಾಡ್: ನ 15: ಆರ್‌ಎಸ್‌ಎಸ್ ಕಾರ್ಯಕರ್ತನನ್ನು ಹಾಡುಹಗಲೇ, ಆತನ ಪತ್ನಿಯ ಎದುರೇ ದುಷ್ಕರ್ಮಿಗಳ ತಂಡವುಂದು ಮಾರಾಕಯುದ್ದಗಳಿಂದ ಕೊಚ್ಚಿ ಕೊಲೆ ಮಾಡಿದ ಕೃತ್ಯ ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿ ನ.15 ರಂದು ಬೆಳಿಗ್ಗೆ ನಡೆದಿದೆ. ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಬರತ್ ಎಂಬಲ್ಲಿ ಈ ಭೀಭತ್ಸ ಘಟನೆ ನಡೆದಿದೆ.
ಎಲಪ್ಪಳ್ಳಿ ನಿವಾಸಿ ಸಜಿತ್ ( 27) ಮೃತ ಯುವಕ. ಇವರು ಎಲಪ್ಪಳ್ಳಿ RSS ಮಂಡಲ ಕಾರ್ಯವಾಹವಾಗಿದ್ದರು. ಇವರು ಪತ್ನಿಯೊಂದಿಗೆ ಕೆಲಸಕ್ಕೆಂದು ಸಜೀತ್ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ನಾಲ್ವರ ತಂಡ, ಏಕಾಏಕಿ ದಾಳಿ ಮಾಡಿದೆ. ಕಾರಿನಲ್ಲಿ ಬಂದ ದುಷ್ಕರ್ಮಿಗಳ ಗ್ಯಾಂಗ್ ಬೈಕ್ ನಿಲ್ಲಿಸಿ ಸಜಿತ್ ಅವರ ಮೇಲೆ ಮಚ್ಚು ಬೀಸಿದೆ.
ಕೊಲೆ ಕೃತ್ಯವೂ ಹಲವರ ಸಮ್ಮುಖದಲ್ಲೇ ಲ್ಲೆ ನಡೆದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ರಾಜಕೀಯ ದ್ವೇಷವೇ ಕೊಲೆಗೆ ಕಾರಣ ಎಂದು ಶಂಕಿಸಲಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆ ಕೆಲವು ರಾಜಕೀಯ ಘರ್ಷಣೆಗಳು ನಡೆದಿದ್ದು, ಅದರ ಮುಂದುವರಿದ ಭಾಗವಾಗಿ ಈ ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.
ಘಟನೆಯ ಹಿಂದೆ ಎಸ್‌ಡಿಪಿಐ ಕಾರ್ಯಕರ್ತರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ. ಜಿಲ್ಲಾ ಬಿಜೆಪಿ ಅಧ್ಯಕ್ಷ ಹರಿದಾಸ್ ರವರು ಈ ಕೊಲೆ ಕೃತ್ಯದಲ್ಲಿ ಪಾಲಿಟಿಕಲ್ ಫ್ರಂಟ್ ಅಪ್ ಸಂಘಟನೆಯ ರಾಜಕೀಯ ವಿಂಗ್ ಎಸ್‌ಡಿಪಿಐಯ ಕೈವಾಡವಿದೆಯೆಂದು ನೇರವಾಗಿ ಆರೋಪಿಸಿದ್ದಾರೆ.

ಮೃತದೇಹವನ್ನು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಕೃತ್ಯ ಎಸಗಿ ಸ್ಥಳದಿಂದ ಪರಾರಿಯಾಗಿರುವ ದುಷ್ಕರ್ಮಿಗಳಿಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.