ನೆಲ್ಯಾಡಿ : ನ 15 : ಕೆರೆಗೆ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟ ದಾರುಣ ಘಟನೆ ನ . 15 ರಂದು ಮುಂಜಾನೆ ನೆಲ್ಯಾಡಿ ಸಮೀಪದ ಕೊಣಾಲು ಎಂಬಲ್ಲಿ ನಡೆದಿದೆ.
ರಾಮಕುಂಜೇಶ್ವರ ಪ.ಪೂ.ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶ್ರೇಯಾ(18ವ.) ಮೃತಪಟ್ಟ ಯುವತಿ. ಈಕೆ ಕೊಣಾಲು ಗ್ರಾಮದ ಅಂಬರ್ಜೆ ನಿವಾಸಿ ಮೋಹನ ಹಾಗೂ ವಿನೋದ ದಂಪತಿಗಳ ಪುತ್ರಿ,
ಶ್ರೇಯಾ ಇಂದು ಬೆಳಿಗ್ಗೆ ಮನೆ ಸಮೀಪದ ಕೆರೆಯಲ್ಲಿರುವ ತಾವರೆ ಹೂ ಕೀಳಲೆಂದು ಹೋಗುವುದಾಗಿ ಮನೆಯವರಲ್ಲಿ ತಿಳಿಸಿ ಹೋಗಿದ್ದಾಳೆ. ಅದರೆ ತುಂಬಾ ಹೊತ್ತಾದರೂ ಮನೆಗೆ ವಾಪಸ್ಸು ಬಾರದ ಹಿನ್ನಲೆಯಲ್ಲಿ ಮನೆಯವರು ಕೆರೆ ಬಳಿ ಬಂದು ನೋಡಿದ್ದಾರೆ. ಈ ವೇಳೆ ಆಕೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವುದು ಪತ್ತೆಯಾಗಿದೆ.
ಕೆರೆಯಲ್ಲಿದ್ದ ತಾವರೆ ಹೂ ಕೀಳುವ ವೇಳೆ ಆಕೆ ಕಾಲು ಜಾರಿ ಆಕಸ್ಮಿಕವಾಗಿ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ.