Ad Widget

ಮಾಣಿ : ಕಾರುಗಳ ನಡುವೆ ಅಪಘಾತದ ವೇಳೆ, ಘರ್ಷಣೆ ಪೊಲೀಸ್ ಕರ್ತವ್ಯಕ್ಕೆ ಅಡ್ಡಿ – 20ಕ್ಕೂ ಅಧಿಕ ಮಂದಿಯ ವಿರುದ್ದ ಪ್ರಕರಣ ದಾಖಲು | ಇಬ್ಬರ ಬಂಧನ

WhatsApp-Image-2021-11-15-at-18.54.46
Ad Widget

Ad Widget

Ad Widget

ವಿಟ್ಲ:   ಕಾರುಗಳ ನಡುವೆ  ಅಪಘಾತ ನಡೆದ ಸಂದರ್ಭ ಗುಂಪು ಸೇರಿ  ಪೊಲೀಸ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ  20 ರಿಂದ 30 ಜನರ ಮೇಲೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ.

Ad Widget

Ad Widget

Ad Widget

Ad Widget

ಸೂರಿಕುಮೇರಿ ನಿವಾಸಿ ಮಹಮ್ಮದ್ ಹನೀಫ್ (೪೩), ಹಳಿರಾ ನಿವಾಸಿ ಜಗದೀಶ್ (೨೫) ಬಂಧಿತರು. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಹಳೀರಾದಲ್ಲಿ ನ.12 ರಂದು ಸಂಜೆ ಎರಡು ಕಾರುಗಳ ಮಧ್ಯೆ ಅಪಘಾತ ನಡೆದಿತ್ತು . ಈ ವೇಳೆ ಹೋಯ್‌ ಕೈ ತಳ್ಳಾಟ ಹೊಡೆದಾಟ ನಡೆದಿದೆ ಎಂದು ಸುದ್ದಿಯಾಗಿತ್ತು. ಅಲ್ಲದೆ, ಈ ಬಗ್ಗೆ ವಿಡಿಯೋ ತುಣುಕೊಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು.

Ad Widget

Ad Widget

Ad Widget

Ad Widget

ಏನಿದು ಪ್ರಕರಣ ?  

 ನ.12 ರಂದು ಬೆಂಗಳೂರು ಕಡೆಯ ಶಿಫ್ಟ್ ಕಾರು ಹಾಗೂ ಉಪ್ಪಿನಂಗಡಿ ಕಡೆಯ ಇನ್ನೋವಾ ನಡುವೆ ಅಪಘಾತವಾಗಿತ್ತು.  ಈ ಸಂದರ್ಭ  ಸ್ಥಳದಲ್ಲಿ ಸೇರಿದವರ ನಡುವೆ ಮಾತಿನ ಚಕಮಕಿ ನಡೆದು, ಇತ್ತಂಡದವರು ಪರಸ್ಪರ ಹಲ್ಲೆಗೆ ಮುಂದಾಗಿದ್ದರು.

ಈ ವೇಳೆ ಪೊಲೀಸರು ಚಾಲಕರನ್ನು ಮಾತನಾಡಿಸಿ ಸಮಾಧಾನ ಪಡಿಸುತಿದ್ದ  ಸಂದರ್ಭದಲ್ಲಿ,  ಗುಂಪೂಂದು  ಪೊಲೀಸರನ್ನು ಅಲಕ್ಷಿಸಿ  ಶಾಂತಿ ಭಂಗ  ಮಾಡಿತ್ತು ಎನ್ನಲಾಗಿದೆ,   ಈ ವೇಳೆ  ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಸುಮೋಟೊ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು  ಆರೋಪಿಗಳ ಪತ್ತೆಗೆ ಮುಂದಾಗಿದ್ದರು.

Ad Widget

Ad Widget

ಈ ಬಗ್ಗೆ ಇಬ್ಬರು  ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣದ ಬಗ್ಗೆ ವದಂತಿಗಳನ್ನು ಹಬ್ಬಿಸುವವರ ಮೇಲೆ ಪೊಲೀಸರು ತೀವ್ರ ನಿಗಾ ಇರಿಸಿದ್ದಾರೆಂದು ತಿಳಿದು ಬಂದಿದ್ದು,  ಶಾಂತಿ ಭಂಗಕ್ಕೆ ಯತ್ನಿಸಿದರೆ ಅಂತಹವರ ಮೇಲೂ ಪ್ರಕರಣ ದಾಖಲಿಸುವ ಸಾಧ್ಯತೆ ಇದೆ ಎನ್ನಲಾಗಿದೆ  

Ad Widget

Leave a Reply

Recent Posts

error: Content is protected !!
%d bloggers like this: