ಸುಳ್ಯ : ನ 15 : ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಯೊಬ್ಬಳ ಬಳಿ ತಾನೂ ಹಿಂದೂ ಎಂದು ನಂಬಿಸಿ , ಆಕೆಯನ್ನು ಬಲವಂತವಾಗಿ ಮಡಿಕೇರಿಯ ಪಾರ್ಕ್ ಗೆ ಕರೆದು ಕೊಂಡು ಹೋಗಿ ,ಅಲ್ಲಿ ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿದ್ದಾನೆ, ಅಲ್ಲದೇ ಇಬ್ಬರು ಜತೆಗಿರುವ ಪೋಟೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಯುವತಿಯೊಬ್ಬಳು ಸುಳ್ಯ ಠಾಣೆಗೆ ದೂರು ನೀಡಿದ್ದಾಳೆ . ದೂರನ್ನು ಸ್ವೀಕರಿಸಿರುವ ಪೊಲೀಸರು ಕೃತ್ಯಕ್ಕೆ ಸಂಬಂಧಿಸಿದಂತೆ ಒರ್ವನನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಯುವತಿಯ ದೂರಿನ ಪ್ರಕಾರ ವಶಕ್ಕೆ ಪಡೆದ ವ್ಯಕ್ತಿಯ ಹೆಸರು ತಸ್ಲಿಮ್ ಎಂದಾಗಿದ್ದು ಆತ ಈ ಮೊದಲು ತನ್ನನ್ನೂ ತಾನೂ ಕೌಶಲ್ ಎಂದು ಪರಿಚಯಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ. ಯುವಕನೂ ಕೂಡಗು ಜಿಲ್ಲೆಯ ಮಡಿಕೇರಿ ನಿವಾಸಿಯಾಗಿದ್ದೂ ಇಂಜನೀಯರಿಂಗ್ ವಿದ್ಯಾರ್ಥಿ ಎಂದು ಮೂಲಗಳಿಂದ ತಿಳಿದು ಬಂದಿದೆ.
ಯುವತಿಗೆ ವಂಚನೆ ಹಾಗೂ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಯುವಕನೂ ಸಂತ್ರಸ್ತ ಯುವತಿಗೆ 2 ತಿಂಗಳ ಹಿಂದೆ ಸಾಮಾಜಿಕ ಜಾಲತಾಣವೊಂದರ ಮೂಲಕ ಪರಿಚಯವಾಗಿದ್ದಾನೆ. ಆಗ ಅತನೂ ತನ್ನನ್ನೂ ತಾನೂ ಕೌಶಲ್ , ಹಿಂದೂ ಧರ್ಮೀಯ ಎಂದು ಪರಿಚಯಿಸಿಕೊಂಡಿದ್ದಾನೆ ಎನ್ನಲಾಗಿದೆ.

ಯುವತಿ ಮಾಡುತ್ತಿರುವ ಆರೋಪಗಳೇನು?
ನ 11 ರಂದು ಆ ಯುವಕ, ದೂರುದಾರೆ ಯುವತಿಯ ಬಳಿ ಬೇಟಿಯಾಗಲು ಸುಳ್ಯಕ್ಕೆ ಬರುವಂತೆ ಒತ್ತಾಯಿಸಿದ್ದಾನೆ. ಅದರಂತೆ ಆಕೆ ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಆತನನ್ನು ಸುಳ್ಯದಲ್ಲಿ ಭೇಟಿಯಾಗಿದ್ದಾಳೆ. ಅಲ್ಲಿ ಆತ ತನ್ನ ಬೈಕಿನಲ್ಲಿ ಕೂತುಕೊಳ್ಳುವಂತೆ ಯುವತಿಯಲ್ಲಿ ಒತ್ತಾಯಿಸಿದ್ದು, ಅದರಂತೆ ಆಕೆ ಆತ ಹಿಂದೂ ಎಂಬ ಭಾವನೆಯಲ್ಲಿ ಬೈಕ್ ನಲ್ಲಿ ಕೂತುಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬೈಕಿನಲ್ಲಿ ಕೂತ ಬಳಿಕ ಆತ ಮಡಿಕೇರಿಗೆ ಹೋಗುವ ದಾರಿಯಲ್ಲಿ ಬೈಕನ್ನು ಚಲಾಯಿಸಿದ್ದು ಯುವತಿಯೂ ಅದಕ್ಕೆ ಆಕ್ಷೇಪಿಸಿದ್ದಾಳೆ. ಆದರೇ ಆಕೆಯ ಮಾತನ್ನು ಲೆಕ್ಕಿಸದೇ ಬೈಕನ್ನು ವೇಗವಾಗಿ ಮಡಿಕೇರಿಯತ್ತ ಚಲಾಯಿಸಿದ್ದಾನೆ, ಅಲ್ಲಿ ಪಾರ್ಕಿಗೆ ಕರೆದು ಕೊಂಡು ಹೋಗಿ ಅನುಚಿತವಾಗಿ ವರ್ತಿಸಿದ್ದಾನೆ, ಕೈ ಹಿಡಿದೆಳೆದು ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ತ ಯುವತಿಯೂ ಆರೋಪಿಸಿದ್ದಾಳೆ.
ಯುವತಿಯೂ ವಿರೋಧಿಸಿದಾಗ ಆತ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದು ಮಾತ್ರವಲ್ಲದೇ, “ ನಾನು ಹಿಂದೂ ಅಲ್ಲ ನಾನು ಮುಸ್ಲಿಂ ಮತಕ್ಕೆ ಸೇರಿದವನು. ನನ್ನ ಹೆಸರು ತಸ್ಲೀಮ್ . ನನ್ನನ್ನು ವಿರೋಧಿಸಿ ಇಲ್ಲಿಂದ ಓಡಿ ಹೋದರೆ, ನಾವಿಬ್ಬರು ಜತೆಗಿರುವ ಫೋಟೊ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡುತ್ತೇನೆ ಎಂದು ಹೆದರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ
ನಾನು ಯಾರಲ್ಲಿಯೂ ಹೇಳುವುದಿಲ್ಲ. ನನ್ನನ್ನು ಸುಳ್ಯ ಕ್ಕೆ ಬಿಡು ಎಂದು ಬೇಡಿಕೊಂಡ ಹಿನ್ನಲೆಯಲ್ಲಿ ಆತನು ಮತ್ತೆ ಆಕೆಯನ್ನು ಸುಳ್ಯಕ್ಕೆ ಕರೆ ತಂದು ಬಿಟ್ಟಿರುವುದಾಗಿಯೂ ನನಗೆ ಜೀವ ಬೆದರಿಕೆ ಒಡ್ಡಿ, ಸುಳ್ಳು ಹೇಳಿ ವಂಚನೆ ಮಾಡಿ, ಅನುಚಿತವಾಗಿ ವರ್ತಿಸಿದ ಆತನ ವಿರುದ್ಧ ಕೇಸು ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿಯೂ ದೂರಿನಲ್ಲಿ ಮನವಿ ಮಾಡಿದ್ದಾಳೆ