ಶಾಂತಿ ಮೊಗರು ಸೇತುವೆ ಬಳಿ ಹಿಟ್‌ ಅಂಡ್‌ ರನ್‌ | ಬೈಕ್‌ ಗೆ ಡಿಕ್ಕಿ ಹೊಡೆದು ಕಾರು ಪರಾರಿ – ಬೈಕ್‌ ಸವಾರ ಗಂಭೀರ

accident
Ad Widget

Ad Widget

Ad Widget

ಕಾರೊಂದು ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದು ಪರಾರಿಯಾದ ಹಾಗೂ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಕಡಬ ತಾಲೂಕಿನ ಶಾಂತಿ ಮೊಗರು ಸೇತುವೆ ಸಮೀಪ ನ 15 ರಂದು ರಾತ್ರಿ ನಡೆದಿದೆ.

Ad Widget

ಕಡಬ ತಾಲೂಕಿನ ಕಾಣಿಯೂರು ಸಮೀಪದ ನೂಜಿ ನಿವಾಸಿ ಮಹೇಶ್ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ. ಇವರನ್ನು ಸ್ಥಳೀಯರ ಸಹಾಯದಿಂದ ಕೂಡಲೇ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ.

Ad Widget

Ad Widget

Ad Widget

ಕುದ್ಮಾರ್ ಹಾಗೂ ಆಲಂಗಾರನ್ನು ಸಂಪರ್ಕಿಸುವ ರಸ್ತೆಯಲ್ಲಿ ಶಾಂತಿ ಮೊಗರು ಸೇತುವೆಯಿಂದ 300 ಮೀಟರ್ ದೂರದಲ್ಲಿ ಅಪಘಾತ ಸಂಭವಿಸಿದೆ. ನೂಜಿ ಮಹೇಶ್ ರವರು ತಮ್ಮ ಬಜಾಜ್‌ ಡಿಸ್ಕವರಿ ಬೈಕ್‌ ನಲ್ಲಿ ಅಲಂಗಾರಿನಿಂದ ತನ್ನ ಮನೆಗೆ ಬರುತ್ತಿರುವಾಗ ಅಪಘಾತ ನಡೆದ ಸ್ಥಳದಲ್ಲಿ ಯಾವುದೋ ಕಾರಣಕ್ಕೆ ಬೈಕ್ ನಿಲ್ಲಿಸಿದ್ದರು .

Ad Widget
ಚಿತ್ರ : ಸಾಂಧರ್ಬಿಕ

ಕೆಲ ಸಮಯದ ಬಳಿಕ ಅದೇ ಮಾರ್ಗದಲ್ಲಿ ಅಲಂಗಾರಿನಿಂದ ಕುದ್ಮಾರ್ ಕಡೆಗೆ ಬರುತ್ತಿದ್ದ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದು, ನಿಲ್ಲಿಸದೆ ಪರಾರಿಯಾಗಿದೆ ಎಂದು ಹೇಳಲಾಗುತ್ತಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಕೆಳಕ್ಕೆ ಉರುಳಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಇದನ್ನು ಗಮನಿಸಿಯೂ, ಕಾರು ಚಾಲಕ ನಿಲ್ಲಿಸಿ ಉಪಚರಿಸದೇ ಪರಾರಿಯಾಗಿದ್ದಾನೆ ಎಂದು ಆರೋಪಿಸಿರುವ ಸ್ಥಳಿಯರು ಆತನ ನಡವಳಿಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ad Widget

Ad Widget

ನೂಜಿ ಮಹೇಶ್ ರವರಿಗೆ 6 ವರ್ಷಗಳ ಹಿಂದೆ ಅಪಘಾತವಾಗಿತ್ತು. ಆಗ ಇವರ ಜತೆ ಪ್ರಯಾಣಿಸುತ್ತಿದ್ದ ಇಬ್ಬರು ಅಪಘಾತದಲ್ಲಿ ಮೃತಪಟ್ಟಿದ್ದು , ಇವರು ಪವಾಡ ಸದೃಶ್ಯವಾಗಿ ಬದುಕಿಳಿದಿದ್ದರು

Leave a Reply

Recent Posts

error: Content is protected !!
%d bloggers like this: