ಉತ್ತರಾಖಂಡ: ಕಾಂಗ್ರೆಸ್ ಮತ್ತು ಕಮಿಷನ್ ಒಂದೇ ನಾಣ್ಯದ ಎರಡು ಮುಖಗಳು. ಎಲ್ಲೆಲ್ಲಿ ಕಾಂಗ್ರೆಸ್ ಇದೆಯೋ ಅಲ್ಲಿ ಕಮಿಷನ್ ಇದೆ ಬಿಜೆಪಿ ಇರುವಲ್ಲಿ ಮಿಷನ್ ಇದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಹೇಳಿದರು.
ಉತ್ತರಾಖಂಡದ ಚಮೋಲಿಯಲ್ಲಿ ನಡೆದ ‘ಶಹೀದ್ ಸಮ್ಮಾನ್ ಯಾತ್ರೆ’ ಉದ್ಘಾಟಿಸಿ ಬಿಜೆಪಿ ಅಧ್ಯಕ್ಷ ನಡ್ಡಾ ಉದ್ದೇಶಿಸಿ ಮಾತನಾಡಿದರು.
ಯಾತ್ರೆಯು ಉತ್ತರಾಖಂಡದ 13 ಜಿಲ್ಲೆಗಳು ಮತ್ತು 700 ಬ್ಲಾಕ್‌ಗಳ ಮೂಲಕ ಡಿ.7ರವರೆಗೆ ಹಾದು ಹೋಗಲಿದೆ.
ಹುತಾತ್ಮರು ಮತ್ತು ಅವರ ಕುಟುಂಬಗಳಿಗೆ ಅರ್ಹವಾದ ಗೌರವವನ್ನು ಪಡೆಯಲು ಈ ಯಾತ್ರೆಗೆ ಪ್ರತಿಯೊಬ್ಬರ ಭಾಗವಹಿಸುವಿಕೆ ಮತ್ತು ಪ್ರತಿ ಬ್ಲಾಕ್‌ನಿಂದ ಭವ್ಯವಾದ ಸ್ವಾಗತವನ್ನು ನಾನು ಬಯಸುತ್ತೇನೆ ಎಂದು ನಡ್ಡಾ ತಿಳಿಸಿದರು.
2022ರಲ್ಲಿ ಉತ್ತರ ಖಂಡದಲ್ಲಿ ಚುನಾವಣೆ ನಡೆಯಲಿದೆ.