ಪುತ್ತೂರು: ವಿದ್ಯುತ್ ಕಂಬಕ್ಕೆ ಮರ ಬಿದ್ದು ಸಾಲು ಸಾಲು ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ತಂತಿಗಳು ನಡುರಸ್ತೆಯಲ್ಲೇ ಬಿದ್ದಿದೆ. ಬಾರಿ ಅವಘಡವೊಂದು ಸ್ವಲ್ಪದರಲ್ಲಿ ತಪ್ಪಿದೆ.
ನ.14 ರ ರಾತ್ರಿ 9.30 ಸಮಯದಲ್ಲಿ ಈ ಘಟನೆ ನಡೆದಿದ್ದೆ.
ಮಾಣಿ -ಮೈಸೂರು ಹೆದ್ದಾರಿಯ ನೆಹರುನಗರ ಸಮೀಪದ ಮಂಜಲ್ಪಡ್ಪು ಎಸ್ಪಿ ಕಚೇರಿ ಬಳಿ ಘಟನೆ ನಡೆದಿದೆ.
ಸಾವಿರಾರು ವಾಹನಗಳು ದಿನನಿತ್ಯ ಸಂಚರಿಸುವ ಈ ರಸ್ತೆಯಲ್ಲಿ ಆದಿತ್ಯವಾರವಾದ ಕಾರಣ ಹೆಚ್ಚು ವಾಹನಗಳಿಲ್ಲದಿರುವುದರಿಂದ ಪಾವಡಸದೃಶ್ಯವಾಗಿ ಯಾವೂದೇ ದುರ್ಘಟನೆ ನಡೆಯಲಿಲ್ಲ.

ರಸ್ತೆಗೆ ಅಡ್ಡಲಾಗಿ ಮೈನ್ ಲೈನ್ ತಂತಿಗಳು ಹಾಗೂ ಮರ, ಹಲವು ವಿದ್ಯುತ್ ಕಂಬಗಳು ಬಿದ್ದಿದೆ.
ಸ್ಥಳೀಯರು ವಾಹನಗಳಿಗೆ ದೂರದಿಂದಲೇ ಮಾಹಿತಿ ನೀಡಿ ಸಂಚಾರಕ್ಕೆ ಅನುವು ಮಾಡಿಕೊಡುತಿದ್ದಾರೆ.
ಪುತ್ತೂರು ಪೇಟೆಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತಯವಾಗಿದೆ.