ಮಂಗಳೂರು : ರಾಜ್ಯ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು, ದ.ಕ ಹಾಗೂ ಉಡುಪಿ ಉಭಯ ಜಿಲ್ಲೆಯನ್ನು ಒಳಗೊಂಡ ದ.ಕ. ಕ್ಷೇತ್ರಕ್ಕೆ ನಡೆಯುವ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸಹಕಾರಿ ರಂಗದ ದಿಗ್ಗಜ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಕಣಕ್ಕೆ ಇಳಿಯಲು ನಿರ್ಧರಿಸಿದ್ದಾರೆ.
ಸಹಕಾರಿ ಬ೦ಧುಗಳು, ಸ್ವಸಹಾಯ ಸಂಘದ ಸದಸ್ಯರು ಹಾಗೂ ಹಿತೈಷಿಗಳ ಒತ್ತಾಯಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ. ನ.16ರಂದು ಬೆಳಗ್ಗೆ 11 ಗಂಟೆಗೆ ಮಂಗಳೂರಿನ ಕೊಡಿಯಾಲಬೈಲ್‌ನ ಇನ್‌ಲ್ಯಾಂಡ್ ಓರ್ನೆಟ್ ಸಮುಚ್ಚಯದಲ್ಲಿ ಚುನಾವಣಾ ಕಚೇರಿ ಉದ್ಘಾಟನೆಯಾಗಲಿದೆ. ನ.22ರಂದು ಅವರು ನಾಮಪತ ಸಲ್ಲಿಸಲಿದ್ದಾರೆ.
ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿಟ್ಟಿನಲ್ಲಿ ಶುಕ್ರವಾರ ಮೊದಲ ಸುತ್ತಿನ ಸಭೆ ನಡೆದಿದ್ದು, ಎಲ್ಲ ವಲಯಗಳಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ದ.ಕ, ಹಾಗೂ ಉಡುಪಿ ಜಿಲ್ಲೆಯ ಬಹುತೇಕ ಎಲ್ಲ ಸಹಕಾರಿಗಳು, ಸ್ಥಳೀಯ ಸಂಸ್ಥೆಗಳ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಈಗಾಗಲೇ ಪ್ರತಿ ಗ್ರಾಮ, ತಾಲೂಕು, ಜಿಲ್ಲೆ ಹಾಗೂ ದ.ಕ. ಕ್ಷೇತ್ರದ ಮಟ್ಟದಲ್ಲಿ ಒಟ್ಟು 17 ಸಮಿತಿಗಳನ್ನು ರಚಿಸಿ ಈಗಿಂದೀಗಲೇ ಪ್ರಚಾರಕ್ಕೆ ಇಳಿಯಲಾಗಿದೆ. ಈ ಸಮಿತಿಗಳ ಸಭೆ ಚುನಾವಣಾ ಕಚೇರಿ ಉದ್ಘಾಟನೆ ಬಳಿಕ ನಡೆಯಲಿದೆ ಎಂದು ಡಾ.ಎಂ.ಎನ್. ಆರ್. ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಎಲ್ಲ ಸಮಿತಿಗಳ ಜೊತೆಯಲ್ಲಿ ಸಭೆ ನಡೆಸಲಾಗುವುದು. ಯಾವ ರೀತಿಯಲ್ಲಿ ರಣತಂತ್ರ ರೂಪಿಸಬೇಕು ಎಂಬುದನ್ನು ಈಗಾಗಲೇ ಸಮಿತಿ ಸದಸ್ಯರಿಗೆ ಜವಾಬ್ದಾರಿ ಹಂಚಿಕೆ ಮಾಡಲಾಗಿದೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದರಿಂದ ದ.ಕ. ಕ್ಷೇತ್ರದ ಬಹುತೇಕ ಎಲ್ಲ ಪಕ್ಷಗಳ ಸ್ಥಳೀಯ ಸಂಸ್ಥೆಗಳ ಸದಸ್ಯರು ಬೆಂಬಲ ಸೂಚಿಸಿದ್ದಾರೆ. ಹಲವು ಪಕ್ಷೇತರ ಸದಸ್ಯರು ಕೂಡಾ ನಮ್ಮೊಂದಿಗೆ ಕೈ ಜೋಡಿಸಲು ಮುಂದೆ ಬಂದಿದ್ದಾರೆ. ರಾಜಕೀಯ ಪಕ್ಷಗಳ ಮುಖಂಡರು ಕೂಡಾ ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ. ದ.ಕ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ತಲಾ ಒಂದೊಂದು ಸ್ಥಾನವನ್ನು ಗೆಲ್ಲುವ ಸಾಮರ್ಥ್ಯ ಇದ್ದರೂ ಡಾ.ಎಂ.ಎನ್.ಆರ್. ಅವರ ಸ್ಪರ್ಧೆ ಇದೀಗ ನಿರ್ಣಾಯಕ ಎನಿಸಿದೆ.
ಚುನಾವಣಾ ಉಸ್ತುವಾರಿಗೆ ದೇವಿಪ್ರಸಾದ್ ಶೆಟ್ಟಿ
ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅವರು ವಿಧಾನಪರಿಷತ್ ಸ್ಥಾನಕ್ಕೆ ಸರ್ಧಿಸಲು ನಿರ್ಧರಿಸಿರುವುದರಿಂದ ಅವರ ಅಭಿಮಾನಿ ಬಳಗದ ನೇತೃತ್ವದಲ್ಲಿ ಚುನಾವಣೆ ಸಮಿತಿಗಳನ್ನು ರಚಿಸಲಾಗಿದೆ. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ಮುಖ್ಯ ಚುನಾವಣೆ ಉಸ್ತುವಾರಿಯನ್ನಾಗಿ ಆಯ್ಕೆ ಮಾಡಲಾಗಿದೆ.
ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಶಶಿಕುಮಾರ ರೈ ಬಾಲ್ಯೋಟು, ಉಡುಪಿ ಜಿಲ್ಲಾ ಅಧ್ಯಕ್ಷ ಜಯಕರ ಶೆಟ್ಟಿ ಇ೦ದ್ರಾಳಿ, ಮಾಧ್ಯಮ ಸಲಹೆಗಾರರಾಗಿ ಶ್ರೀಧರ ಸಾಸ್ತಾನ, ಚುನಾವಣಾ ಏಜೆಂಟ್ ಸದಾಶಿವ ಉಳ್ಳಾಲ್, ಚುನಾವಣಾ ವೀಕ್ಷಕರಾಗಿ ದಿವಾಕರ್ ಶೆಟ್ಟಿ ಕಾಪು ನೇಮಕವಾಗಿದ್ದಾರೆ.

ತಾಲೂಕು ಚುನಾವಣಾ ಸಮಿತಿ:
ಕಾರ್ಕಳ ವಾದಿರಾಜ ಶೆಟ್ಟಿ, ಮುನಿಯಾಲ ಉದಯಕುಮಾರ್ ಶೆಟ್ಟಿ, ಸುಧಾಕರ ಶೆಟ್ಟಿ, ಸುಧೀರ್ ಹೆಗ್ಡೆ,
ಕಾಪು- ರಾಜೇಶ್ ರಾವ್, ಆಶೋಕ್ ಕುಮಾರ್ ಶೆಟ್ಟಿ, ಶಿವಾಜಿ ಸುವರ್ಣ,
ಕುಂದಾಪುರ/ಬೈಂದೂರು- ಮಹೇಶ್ ಹೆಗ್ಡೆ, ರಾಜು ಪೂಜಾರಿ, ಮೋಹನ್‌ದಾಸ್ ಶೆಟ್ಟಿ,
ಮಂಗಳೂರು ; ಹರಿಶ್ಚಂದ್ರ, ಜೈರಾಜ್ ಬಿ.ರೈ, ಜಯಪ್ರಕಾಶ್,
ಬಂಟ್ವಾಳ, ಪದ್ಧಶೇಖರ್ ಜೈನ್, ಮೊನಪ್ಪ ಪೂಜಾರಿ ಕಜೆಕಾರು,
ಪುತ್ತೂರು- ಸವಣೂರು ಸೀತಾರಾಮ ರೈ, ಎಸ್.ಬಿ.ಜಯರಾಮ್ ರೈ, ರಾಜಶೇಖರ್ ಜೈನ್, ರಾಮಣ್ಣ ಉಪ್ಪಿನಂಗಡಿ,
ಕಡಬ-ಸತೀಶ ಕುಮಾರ್,
ಬೆಳ್ತಂಗಡಿ- ಬಿ.ನಿರಂಜನ್, ಸತೀಶ ಪೆರಾಡಿ, ಸುಂದರ ಗೌಡ ಇಚ್ಚಿಲ,
ಸುಳ್ಯ – ಶಶಿಕುಮಾರ್ ರೈ,
ಉಡುಪಿ- ಅಶೋಕ್ ಕುಮಾರ್ ಕರ್ಚೆ, ಪರೀಶ್‌ಕಿಣಿ, ಎನ್. ರಮೇಶ್ ಶೆಟ್ಟಿ, ಸದಾಶಿವ ಕರ್ಕೇರ,
ಮೂಡುಬಿದಿರೆ- ಭಾಸ್ಕರ್ ಎಸ್.ಕೋಟ್ಯಾನ್, ಪ್ರವೀಣ್, ಸುಚರಿತ ಶೆಟ್ಟಿ,
ಉಳ್ಳಾಲ- ವೈಭವ ಶೆಟ್ಟಿ, ಕೃಷ್ಣ ಶೆಟ್ಟಿ,
ಸುರತ್ಕಲ್- ಏನಯ್ ಕುಮಾರ್ ಸೂರಿಂಜೆ, ಮೋನಪ್ಪ ಶೆಟ್ಟಿ