ಬಂಟ್ವಾಳ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪಿಕಪ್ ವಾಹನ ಅಪಘಾತ ನಡೆದು ಉಪ್ಪಿನಂಗಡಿಯ ಇಬ್ಬರು ಯುವಕರು ಮೃತಪಟ್ಟ ಧಾರುಣ ಘಟನೆ ಇಂದು ನಡೆದಿದೆ.
ಇದರಲ್ಲಿ ಮೃತಪಟ್ಟ ಓರ್ವ ಯುವಕ ತಾಯಿಗೆ ಏಕೈಕ ಪುತ್ರನಾಗಿದ್ದು ತಂದೆಯನ್ನು ಕಳೆದುಕೊಂಡಿದ್ದ.
ಹೆದ್ದಾರಿಯ ತುಂಬೆ ರಾಮಲಕಟ್ಟೆಯ ಬಳಿ ಕ್ಯಾಟರಿಂಗ್ ಆಹಾರ ಸಾಗಾಟದ ಪಿಕ್ ಅಪ್ ವಾಹನ ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಿದೆ.

ಪಿಕಪ್ ನಲ್ಲಿದ್ದ ಉಪ್ಪಿನಂಗಡಿ ಚೇತನ್(25) ಹಾಗೂ ಆಶಿತ್ (21) ಮೃತಪಟ್ಟಿದ್ದಾರೆ. ಸಿಂಚನ್ ಹಾಗೂ ಸುದೀಪ್ ಗಾಯಗೊಂಡಿದ್ದಾರೆ.
ಮಂಗಳೂರಿನ ಕಾರ್ಯಕ್ರಮಕ್ಕೆ ಆಹಾರ ಸಾಗಾಟ ಮಾಡಿ ಹಿಂದಿರುಗುತಿದ್ದ ವೇಳೆ ಅಪಘಾತ ಸಂಭವಿಸಿದೆ.
ಘಟನೆ ನಡೆದ ಕೂಡಲೇ ಗಂಭೀರ ಗಾಯಗೊಂಡಿದ್ದ ನಾಲ್ವರನ್ನು ತುಂಬೆ ಆಸ್ಪತ್ರೆಗೆ ಸಾಗಿಸಲಾಯಿತ್ತಾದರೂ, ಇಬ್ಬರು ಆಸ್ಪತ್ರೆ ತಲುಪುವ ವೇಳೆ ಮೃತಪಟ್ಟಿದ್ದಾರೆ.
ಗಂಭಿರ ಗಾಯಗೊಂಡ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತ ಸಂದರ್ಭ ಪಿಕಪ್ ನಲ್ಲಿ ಇವರು ನಾಲ್ವರು ಹಿಂಬದಿ ಕುಳಿತುಕೊಂಡಿದ್ದರು ಎಂದು ತಿಳಿದುಬಂದಿದೆ.
ಮೃತಪಟ್ಟ ಚೇತನ್ ತಂದೆಯನ್ನು ಕೆಳ ವರ್ಷಗಳ ಹಿಂದೆ ಕಳೆದುಕೊಂಡಿದ್ದ, ತಾಯಿಗೆ ಏಕೈಕ ಪುತ್ರನಾಗಿದ್ದ. ಡಿಪ್ಲೋಮಾ ವಿದ್ಯಾಭ್ಯಾಸದ ನಡುವೆ ವಿದ್ಯಾಭ್ಯಾಸದ ಖರ್ಚಿಗಾಗಿ ಕ್ಯಾಟರಿಂಗ್ ಕೆಲಸಕ್ಕೆ ತೆರಳುತ್ತಿದ್ದ ಶ್ರಮಜೀವಿಯಾಗಿದ್ಧ ಎನ್ನುತ್ತಾರೆ ಸ್ಥಳೀಯರು.
ಈತನ ವಿದ್ಯಾಭ್ಯಾಸದ ಖರ್ಚನ್ನು ಸಹಕಾರಿ ಸಂಸ್ಥೆಯೊಂದು ಭರಿಸಿತ್ತು ಎಂದು ತಿಳಿದುಬಂದಿದೆ.