ಮಂಗಳೂರು, ನ.13: ನಗರದಲ್ಲಿ ಓಡಾಟ ನಡೆಸುವ ಖಾಸಗಿ ಸಿಟಿ ಬಸ್ಸೊಂದಕ್ಕೆ ಕಲ್ಲೆಸೆದು ಹಾನಿಗೊಳಿಸಿದ ಘಟನೆ ನ .13 ರಂದು ಮಧ್ಯಾಹ್ನ ನಡೆದಿದೆ. ನಗರ ಹೊರವಲಯದ ಬಂಗ್ರ ಕೂಳೂರು ಸಮೀಪದ ಕರಾವಳಿ ಕಾಲೇಜು ಬಳಿ ಕೃತ್ಯ ಎಸಗಲಾಗಿದೆ
ಕಾಟಿಪಳ್ಳ ಕೈಕಂಬ-ಮಂಗಳಾದೇವಿ ಮಧ್ಯೆ ಚಲಿಸುವ ರೂಟ್ ನಂಬ್ರ 15ಎ (ಎಸ್‌ಎಂ ಟ್ರಾವೆಲ್ಸ್) ಬಸ್ಸಿಗೆ ಕಲ್ಲೆ ಎಸೆಯಲಾಗಿದೆ. ಕರಾವಳಿ ಕಾಲೇಜು ಬಳಿ ಪ್ರಯಾಣಿಕರನ್ನು ಹತ್ತಿಸಲು ಬಸ್ಸನ್ನು ನಿಲ್ಲಿಸಿದ್ದ ವೇಳೆ ದ್ವಿಚಕ್ರ ವಾಹನ ಡಿಯೋದಲ್ಲಿ ಬಂದ ಇಬ್ಬರು ಕಲ್ಲೆಸೆದು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ
ದುಷ್ಕರ್ಮಿಗಳ ಕೃತ್ಯದಿಂದ ಬಸ್ಸಿನ ಮುಂಭಾಗದ ಗಾಜು ಪುಡಿ ಪುಡಿಯಾಗಿದೆ. ಬಸ್ಸಿನಲ್ಲಿ ಪ್ರಯಾಣಿಸುತಿದ್ದ ಪ್ರಯಾಣಿಕರಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ ಎಂದು ವರದಿ ತಿಳಿಸಿದೆ.

ಕಲ್ಲೆಸೆದ ವ್ಯಕ್ತಿಗಳನ್ನು ಸ್ಥಳೀಯರು ಬೆನ್ನಟ್ಟಿ ಹೋಗಿದ್ದು ,ಆದರೇ ಅವರು ತಪ್ಪಿಸಿಕೊಂಡು ಓಡಿ ಹೋಗುವಲ್ಲಿ ಸಫಲರಾಗಿದ್ದಾರೆ ಎನ್ನಲಾಗಿದೆ. ದ್ವಿ ಚಕ್ರ ವಾಹನದ ನಂಬರ್ ಪ್ಲೇಟ್ ಕೂಡ ಮಸುಕಾಗಿದ್ದು ಹೀಗಾಗಿ ವಾಹನದ ನೋಂದಣಿ ಸಂಖ್ಯೆ ಕೂಡ ಗಮನಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿದೆ