Ad Widget

1947ರಲ್ಲಿ ಯಾವ ಯುದ್ಧ ನಡೆದಿದೆ ಎಂದು ನನಗೆ ಗೊತ್ತಿಲ್ಲ, ಸ್ವಾತಂತ್ರ್ಯ ಸಿಕ್ಕಾಗ ಏನೂ ನಡೆಯಿತು ಎಂದು ಜ್ಞಾನೋದಯ ಮಾಡಿಸಿದರೆ ‘ಪದ್ಮಶ್ರೀ’ ಪ್ರಶಸ್ತಿ ವಾಪಸ್ ಮಾಡುತ್ತೇನೆ : ಕಂಗನಾ ರನೌತ್

WhatsApp-Image-2021-11-13-at-19.57.08
Ad Widget

Ad Widget

Ad Widget

ಸ್ವಾತಂತ್ರ್ಯದ ಕುರಿತು ತಾವು ನೀಡಿರುವ ಹೇಳಿಕೆಯನ್ನು ತಪ್ಪು ಎಂದು ಸಾಬೀತು ಮಾಡಿದರೆ ‘ಪದ್ಮಶ್ರೀ’ ಪ್ರಶಸ್ತಿ ವಾಪಸ್ ಮಾಡುವುದಾಗಿ ಬಾಲಿವುಡ್ ನಟಿ ಕಂಗನಾ ರನೌತ್ ಹೇಳಿದ್ದಾರೆ. ಈ ಮೂಲಕ ಆಕೆ ಭಾರತದ  ಸ್ವಾತಂತ್ರ್ಯದ  ಕುರಿತಾಗಿ ತಾನೂ ನೀಡಿರುವ  ವಿವಾದಿತ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

Ad Widget

Ad Widget

Ad Widget

Ad Widget

ಹಿಂದೆ ಕಂಗನಾ ಸಂದರ್ಶನವೊಂದರಲ್ಲಿ ಭಾರತಕ್ಕೆ 1947ರಲ್ಲಿ ದೊರಕಿದ್ದು ಭಿಕ್ಷೆ, ಸ್ವಾತಂತ್ರ್ಯವಲ್ಲ. ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಲಭಿಸಿದ್ದು, 2014ರಲ್ಲಿ ಎಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಯ್ಕೆಯನ್ನು ಉಲ್ಲೇಖಿಸಿ ಅವರು ಹೇಳಿಕೆ ನೀಡಿದ್ದರು.

Ad Widget

Ad Widget

Ad Widget

Ad Widget

ಅವರ ಹೇಳಿಕೆಗೆ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಕಾಂಗ್ರೆಸ್ ಇತ್ತೀಚೆಗಷ್ಟೇ ಕಂಗನಾ ಸ್ವೀಕರಿಸಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿತ್ತು . ಇದಕ್ಕೆ  ಪ್ರತಿಕ್ರಿಯಿಸಲು ಇನ್ಸ್ಟಾಗ್ರಾಂ ಮೊರೆ ಹೋಗಿರುವ ಬಾಲಿವುಡ್‌ ನಟಿ ಇಂದು ತಮ್ಮ ಖಾತೆಯಲ್ಲಿ ಸಾಲು ಸಾಲು ಸ್ಟೋರಿ ಹಂಚಿಕೊಂಡು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

1947ರಲ್ಲಿ ಯಾವ ಯುದ್ಧ ನಡೆದಿದೆ ಎಂದು ನನಗೆ ತಿಳಿದಿಲ್ಲ ಯಾರಾದರೂ 1947ರಲ್ಲಿ ಏನು ನಡೆಯುತು ಎಂಬುದನ್ನು ಜ್ಞಾನೋದಯ ಮಾಡಿಸಿದರೆ ಹಾಗೂ ವಿವಾದಿತ   ಸಂದರ್ಶನದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿರುವುದನ್ನು ತೋರಿಸಿದರೂ ತಾನು ಇತ್ತೀಚೆಗೆ ಸ್ವೀಕರಿಸಿದ ಪಧ್ಮ ಶ್ರೀ ಪ್ರಶಸ್ತಿ ಹಿಂತುರುಗಿಸುವುದಾಗಿ ತಿಳಿಸಿದರು.

Ad Widget

Ad Widget

  ‘‘1857ರಲ್ಲಿ ಮೊದಲ ಸ್ವಾತಂತ್ರ್ಯ ಸಂಗ್ರಾಮ ನಡೆಯಿತು. ಸುಭಾಷ್ ಚಂದ್ರ ಬೋಸ್, ರಾಣಿ ಲಕ್ಷ್ಮೀಬಾಯಿ, ವೀರ ಸಾವರ್ಕರ್ ಜೀ ಮೊದಲಾದವರು ತ್ಯಾಗ ಮಾಡಿದರು. 1857ರ ಸಂಗ್ರಾಮ ನನಗೆ ತಿಳಿದಿದೆ. ಆದರೆ 1947ರಲ್ಲಿ ಯಾವ ಯುದ್ಧ ನಡೆದಿದೆ ಎಂದು ನನಗೆ ತಿಳಿದಿಲ್ಲ. ಯಾರಾದರೂ ಈ ಕುರಿತು ನನಗೆ ಜ್ಞಾನೋದಯ ಮಾಡಿಸಿದರೆ ನನ್ನ ಪದ್ಮಶ್ರೀಯನ್ನು ಮರಳಿಸಿ ಕ್ಷಮೆ ಕೇಳುತ್ತೇನೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ’’ ಎಂದು ಕಂಗನಾ ವ್ಯಂಗ್ಯವಾಗಿ ಬರೆದಿದ್ದಾರೆ.

, ‘ನಾನು ರಾಣಿ ಲಕ್ಷ್ಮಿ ಬಾಯಿಯ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಅದಕ್ಕಾಗಿ 1857ರ ಸಂಗ್ರಾಮದ ಕುರಿತು ಬಹಳ ಅಧ್ಯಯನವನ್ನೂ ನಡೆಸಿದ್ದೇನೆ. ಆ ಸಮಯದಲ್ಲಿ (1857) ರಾಷ್ಟ್ರೀಯತೆ ಹುಟ್ಟಿಕೊಂಡಿತು. ಅದರೊಂದಿಗೆ ಬಲಪಂಥೀಯವಾದವೂ ಹುಟ್ಟಿಕೊಂಡಿತು. ಆದರೆ ಅದೇಕೆ ತಕ್ಷಣ ಮರೆಯಾಯಿತು? ಏಕೆ ಗಾಂಧೀಜಿ ಭಗತ್​ ಸಿಂಗ್​ರನ್ನು ಗಲ್ಲಿಗೇರಿಸಲು ಬಿಟ್ಟರು? ನೇತಾಜಿ ಯಾಕೆ ಸತ್ತರು ಮತ್ತು ಏಕೆ ಗಾಂಧಿಯವರ ಬೆಂಬಲ ಅವರಿಗೆ ಸಿಗಲಿಲ್ಲ? ಏಕೆ ಬಿಳಿಯರು (ಇಂಗ್ಲೀಷರು) ಭಾರತವನ್ನು ವಿಭಜಿಸಿದರು? ಸ್ವಾತಂತ್ರ್ಯವನ್ನು ಸಂಭ್ರಮಿಸುವ ಬದಲಾಗಿ ಏಕೆ ಭಾರತೀಯರು ಒಬ್ಬರಿಗೊಬ್ಬರನ್ನು ಸಾಯಿಸಿಕೊಂಡರು? ಈ ಎಲ್ಲಾ ಪ್ರಶ್ನೆಗಳಿಗೆ ನಾನು ಉತ್ತರ ಹುಡುಕುತ್ತಿದ್ದೇನೆ. ಯಾರಾದರೂ ಸಹಾಯ ಮಾಡಿ’ ಎಂದು ಕಂಗನಾ ಬರೆದಿದ್ದಾರೆ.  

ಯಾವುದೇ ಪರಿಸ್ಥಿತಿಯನ್ನು ಎದುರಿಸಲು ತಾನು ಸಿದ್ಧ ‘‘ಸ್ವಾತಂತ್ರ್ಯ 2014ರಲ್ಲಿ ಸಿಕ್ಕಿದೆ ಎಂದು ನಾನು ಹೇಳಿದಾಗ, ಭಾರತಕ್ಕೆ ಬಾಹ್ಯವಾಗಿ ಸ್ವಾತಂತ್ರ್ಯ ಲಭಿಸಿರಬಹುದು. ಆದರೆ ಮಾನಸಿಕವಾಗಿ ಸ್ವಾತಂತ್ರ್ಯ ಲಭಿಸಿದ್ದು, 2014ರಲ್ಲಿ ಎಂದು ಹೇಳಿದ್ದೇನೆ ಎಂದು ಬರೆದುಕೊಂಡಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: