ಕಾಟುಕುಕ್ಕೆ ದೇವಳದಲ್ಲಿ ನಾಳೆ (ನ .14) ಒಡಿಯೂರು ಸ್ವಾಮೀಜಿಗೆ ಗುರು ವಂದನೆ; ಜಿಲ್ಲೆಯ ಪ್ರಸಿದ್ಧ ನಾಟಿ ವೈದ್ಯರುಗಳಿಂದ ಸಂವಾದ

odiyoorsri
Ad Widget

Ad Widget

Ad Widget

ಪೆರ್ಲ: ದಕ್ಷಿಣ ಗಾಣಗಾಪುರ, ಒಡಿಯೂರು ದತ್ತಾಂಜನೇಯ‌ ಶ್ರೀ ಗುರುದೇವಾನಂದ ಸ್ವಾಮಿಗಳ ಷಷ್ಠ್ಯಬ್ದ ಸಂಭ್ರಮದ ಅಂಗವಾಗಿ ಷಷ್ಠ್ಯಬ್ದ ಸಮಿತಿ ಕಾಟುಕುಕ್ಕೆ ಘಟಕದ ವತಿಯಿಂದ ನ.14ರಂದು ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಗುರು ವಂದನೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

Ad Widget

ದೇವಳದ ಪ್ರಧಾನ ಅರ್ಚಕ ಮಧುಸೂದನ ಪುಣಿಂಚತ್ತಾಯ ಮಧ್ಯಾಹ್ನ 2 ಗಂಟೆಗೆ ದೀಪ ಪ್ರಜ್ವಲನೆ ನಡೆಸಾಲಿದ್ದಾರೆ.ಮಧ್ವಾಧೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಮತ್ತು ಶಿಷ್ಯವೃಂದದವರು ಧನ್ವಂತರಿ ಸ್ತೋತ್ರ ಪಠಣ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.

Ad Widget

Ad Widget

Ad Widget

ಸಂಜೆ 3ಕ್ಕೆ ನಾಟಿ ವೈದ್ಯ- ‘ಪುಲಮರ್ದ್ ಪರಿಪು-ಪೋಪು’ ಕಾಸರಗೋಡು ಜಿಲ್ಲೆಯ ಪ್ರಸಿದ್ಧ ನಾಟಿ ವೈದ್ಯರುಗಳಿಂದ ಸಂವಾದ ನಡೆಯಲಿದೆ.ನಾಟಿ ವೈದ್ಯರಾದ ಪದ್ಮನಾಭ ಶೆಟ್ಟಿ ಪೆರ್ಲ, ಶಂಕರ ರೈ ಮಾಸ್ಟರ್ ಮಂಟಪ್ಪಾಡಿ, ರವಿ ಕಾನ, ಬಾಬು ಪೂಜಾರಿ ಕಾನ, ಶ್ರೀನಿವಾಸ ಆಳ್ವ ಕಳತ್ತೂರು, ನಳಿನಾಕ್ಷಿ ಕುಂಭತ್ತೊಟ್ಟಿ ಸಂವಾದದಲ್ಲಿ ಭಾಗವಹಿಸುವರು.

Ad Widget

3.30ಕ್ಕೆ ಒಡಿಯೂರು ಸ್ವಾಮೀಜಿ ಮತ್ತು ಸಾಧ್ವಿ ಶ್ರೀ ಮಾತಾನಂದಮಯೀ ಅವರ ಆಗಮನ, ಶ್ರೀ ಸುಬ್ರಹ್ಮಣ್ಯೇಶ್ವರ ಮಹಿಳಾ ಮಂಡಳಿಯ ಸದಸ್ಯರಿಂದ ಪೂರ್ಣಕುಂಭ ಸ್ವಾಗತ, 4ಕ್ಕೆ ದೇವಳದ ಆಡಳಿತ ಮಂಡಳಿ ಅಧ್ಯಕ್ಷ, ಸಮಿತಿ ಗೌರವಾಧ್ಯಕ್ಷ ನಾರಾಯಣನ್ ಕೆ. ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಸಾಧ್ವಿ ಶ್ರೀ ಮಾತಾನಂದಮಯೀ ಅವರು ಉದ್ಘಾಟಿಸಿ ಶ್ರೀ ಹನುಮಾನ್ ಚಾಲೀಸಾ ಪಠಣ ನಡೆಸುವರು.ಷಷ್ಟ್ಯಬ್ದ ಸಮಿತಿಯ ಪರವಾಗಿ ಸ್ವಾಮೀಜಿಯವರಿಗೆ ಗುರು ವಂದನೆ‌ ಕಾರ್ಯಕ್ರಮ ನಡೆಯಲಿದೆ.ಒಡಿಯೂರು ಸ್ವಾಮೀಜಿ ಆಶೀರ್ವಚನ‌ ನೀಡುವರು.

Ad Widget

Ad Widget

ಹಿರಿಯ ಸಾಮಾಜಿಕ,ಧಾರ್ಮಿಕ, ಶೈಕ್ಷಣಿಕ, ಸಹಕಾರಿ ಹಾಗೂ ರಾಜಕೀಯ ಮುಖಂಡ ಸಿ.ಸಂಜೀವ ರೈ ಅವರಿಗೆ ಅಭಿನಂದನೆ, ತುಳು ಲಿಪಿ ಪರೀಕ್ಷೆಯಲ್ಲಿ ಭಾಗವಹಿಸಿದವರಿಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯ ಪ್ರಮಾಣ ಪತ್ರ ವಿತರಣೆ, ಸಾಧಕರಿಗೆ ಸನ್ಮಾನ, ಜನಪದ ಕ್ರೀಡಾಕೂಟದ ಬಹುಮಾನ ವಿತರಣೆ‌ ನಡೆಯಲಿದೆ.ಎಣ್ಮಕಜೆ ಗ್ರಾ.ಪಂ.ಆಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಸದಸ್ಯ ಶಶಿಧರ್ ಕುಮರ್ ಪಿ.ಶುಭ ಹಾರೈಸುವರು.

ಷಷ್ಠ್ಯಬ್ದ ಸಮಿತಿ ಸಮಿತಿ ಅಧ್ಯಕ್ಷ ತಾರಾನಾಥ ರೈ, ಕಾರ್ಯದರ್ಶಿ ಹರಿಪ್ರಸಾದ್ ಶೆಟ್ಟಿ ಮಾಯಿಲಂಗಿ, ಕಾಟುಕುಕ್ಕೆ ಶಾಲೆ ನಿವೃತ್ತ ಶಿಕ್ಷಕ ಲೋಕನಾಥ ಶೆಟ್ಟಿ ಮಾಯಿಲೆಂಗಿ ಉಪಸ್ಥಿತರಿರುವರು

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: