Ad Widget

ಬೆಳ್ತಂಗಡಿ: ಇಂದಬೆಟ್ಟುವಿನ ಮನೆಯ ಬೀರುವಿನಲ್ಲಿಟ್ಟಿದ್ದ 12 ಲ.ರೂ. ಮೌಲ್ಯದ ಚಿನ್ನಾಭರಣ ಹಾಡುಹಗಲೇ ಕಳ್ಳತನ – ವೈಜ್ನಾನಿಕ ಮಾದರಿ ತನಿಖೆಯಿಂದ ಬಯಲಾಯ್ತು ಸುಳಿವೇ ಇಲ್ಲದ ಪ್ರಕರಣ – ಮೂವರ ಬಂಧನ

WhatsApp-Image-2021-11-13-at-10.01.57-2
Ad Widget

Ad Widget

Ad Widget

ಬೆಳ್ತಂಗಡಿ: ಮನೆ ಯಜಮಾನ ಕೆಲಸಕ್ಕೆ ತೋಟಕ್ಕೆ ಹೋಗಿದ್ದಾಗ ಹಾಗೂ ಮನೆಯೊಡತಿ ಮತ್ತು ಮಕ್ಕಳು ಸಮಾರಂಭವೊಂದರಲ್ಲಿ ಭಾಗವಹಿಸಲು ತೆರಳಿದ್ದ ವೇಳೆ ಮನೆಯ ಬೀರುವಿನಲ್ಲಿದ್ದ ಹನ್ನೆರಡು ಲಕ್ಷ ರೂಪಾಯಿಗೂ ಮಿಕ್ಕಿ ಮೌಲ್ಯದ ಚಿನ್ನಾಭರಣ ಹಾಗೂ ಐದು ಸಾವಿರ ರೂಪಾಯಿ ನಗದು ಅ.31 ರಂದು ಕಳ್ಳತನವಾಗಿತ್ತು.  ಈ ಪ್ರಕರಣದ ತನಿಖೆ ಕೈಗೆತ್ತಿಗೊಂಡ ಪೊಲೀಸರಿಗೆ ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ಪೂರಕ ಸಾಕ್ಷ್ಯ ದೊರಕದಿದ್ದರು, ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಿ ಹಾಗೂ ಅದನ್ನು ವೈಜ್ನಾನಿಕ ಮಾದರಿಯಲ್ಲಿ ವಿಶ್ಲೇಷಿಸಿ  ಬೆಳ್ತಂಗಡಿ ಪೊಲೀಸರ ತಂಡ ಬೇಧಿಸಿದೆ.

Ad Widget

Ad Widget

Ad Widget

Ad Widget

Ad Widget

ಕೃತ್ಯ ಎಸಗಿದ ಮೂವರು ಆರೋಪಿಗಳನ್ನು ಹಾಗೂ ಕದ್ದ ಸಂಪೂರ್ಣ ಸೊತ್ತುಗಳನ್ನು ತನಿಖಾ ತಂಡವೂ ನ .12 ರಂದು ವಶಪಡಿಸಿಕೊಂಡಿದೆ  ಬಂಧಿತ ಮೂವರು ಬೆಳ್ತಂಗಡಿ ತಾಲೂಕಿನ ನಿವಾಸಿಗಳು.  ನಾವೂರು ಗ್ರಾಮದ ಮಹಮ್ಮದ್ ಸ್ವಾಲಿ (26), ಬಿನಾವೂರು ಗ್ರಾಮದ ಎಚ್ ನೌಫಲ್ (27)  ಮತ್ತು  ಲಾಯಿಲಾ ಗ್ರಾಮದ ಯಾಹ್ಯಾ (32) ಬಂಧಿತರು.

Ad Widget

Ad Widget

Ad Widget

Ad Widget

Ad Widget

ಬಂಧಿತರಿಂದ 13 ಪವನಿನ ಚಿನ್ನದ ನೆಕ್ಲೀಸ್ 01 , ಒಂದು ಪವನಿನ ಚಿನ್ನದ ಚೈನ್ – 01 , ಒಂದು ಪವನಿನ ಚಿನ್ನದ ಸಣ್ಣ ಚೈನ್ – 01 , ಒಂದೂವರೆ ವವನಿನ ಚಿನ್ನದ ಮಕ್ಕಳ ಚೈನ್ – 02 , ತಲಾ ಒಂದು ಒಂದು ಪವನಿನ ಚಿನ್ನದ ಕಾಯಿನ್ಸ್ – 04 , ತಲಾ ನಾಲ್ಕು ಪವನಿನ ಚಿನ್ನದ ಬಿಸ್ಕೆಟ್ – 04 – ಎರಡು ಪವನಿನ ಚಿನ್ನದ ಗಟ್ಟಿ – 01 ಅರ್ಧ ಪವನಿನ ಚಿನ್ನದ ಬ್ರಾಸ್ ಲೈಟ್ – 01 : ಅರ್ಧ ಪವನಿನ ಚಿನ್ನದ ತುಂಡಾದ ಬಳೆ ಹಾಗೂ ಪೆಂಡೆಂಟ್ – 01 , ಅರ್ಧ ಪವನಿನ ಚಿನ್ನದ ಮಗುವಿನ ಕಿವಿ ಓಲೆ -01 ಜೊತೆ , ಸೇರಿದಂತೆ  ಸುಮಾರು 12,05,200 ರೂಪಾಯಿ ಮೌಲ್ಯದ ವಿವಿಧ ರೀತಿಯ 40 ಪವನ್ ಚಿನ್ನಾಭರಣಗಳು ಮತ್ತು ನಗದು ಹಣ 5200 ರೂಪಾಯಿಯನ್ನು ವಶಪಡಿಸಿಕೊಳ್ಳಲಾಗಿದೆ.

ಇಂದಬೆಟ್ಟು ಗ್ರಾಮದ ಬಂಗಾಡಿ ದೇರಾಜೆ ಮನೆ ನಿವಾಸಿ ಕೃಷಿಕ ಹಾಗೂ ಅಡಿಕೆ ವ್ಯಾಪರಿ ಮಹಮ್ಮದ್ ಎಂಬವರ ಮನೆಯಲ್ಲಿ ಇಷ್ಟು ಅಗಾಧ ಪ್ರಮಾಣದ ಕಳ್ಳತನ ಅ .31 ರಂದು ನಡೆದಿತ್ತು.  ಕಳವುಗೈದ ಸೊತ್ತುಗಳ ಜತೆಗೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಕಾರು , ಪಲ್ಸರ್ ಎನ್ ಎಸ್ ಮೋಟಾರು ಸೈಕಲ್ , ನಾಲ್ಕು ಮೊಬೈಲ್ ಹ್ಯಾಂಡ್ ಸೆಟ್ (ಇವುಗಳ ಒಟ್ಟು ಮೌಲ್ಯ 1,69,500 ರೂಗಳು) ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆ.

Ad Widget

Ad Widget

Ad Widget

Ad Widget

 ಏನಿದು ಪ್ರಕರಣ ?

ಅ. 31 ರಂದು ಬೆಳಗ್ಗೆ ಮಹಮ್ಮದ್‌ರವರ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ, ಅವರ ತಮ್ಮ ಸಪ್ವಾನ್ ಎಂವರ ಮದುವೆ ನಿಶ್ಚಿತಾರ್ಥಕ್ಕಾಗಿ  ಬಂಟ್ವಾಳ ತಾಲೂಕಿನ ಉಳಿ ಗ್ರಾಮಕ್ಕೆ ತೆರಳಿದ್ದರು. ಬೆಳಿಗ್ಗೆಯಿಂದ ಮಹಮ್ಮದ್ ರವರು ಮನೆಯಲ್ಲೆ ಇದ್ದು ಸಂಜೆ ವೇಳೆ ಅಡಿಕೆ ತೋಟದಲ್ಲಿ ಹುಲ್ಲು ತೆಗೆಯಲು ಹೋಗಿದ್ದರು.

ಬಂಟ್ವಾಳದ ಉಳಿಗೆ ನಿಶ್ಚಿತಾರ್ಥಕ್ಕೆ ಹೋಗಿದ್ದ ಪತ್ನಿ ಮತ್ತು ಮಕ್ಕಳು ಸಂಜೆ ವಾಪಾಸ್ಸು ಬಂದಿದ್ದು ಈ ವೇಳೆ ಕೃತ್ಯ ಗಮನಕ್ಕೆ ಬಂದಿದೆ. ಸಂಜೆ ಮನೆಯೊಳಗೆ ಪ್ರವೇಶಿಸುತ್ತಲೇ ಮನೆಯೊಳಗಿನ ದೃಶ್ಯಗಳು ಸಂಶಯಾಸ್ಪದವಾಗಿ ಕಂಡ ಹಿನ್ನಲೆಯಲ್ಲಿ  ಪತ್ನಿಯೂ ತೋಟದಲ್ಲಿದ್ದ ಪತಿ ಮಹಮ್ಮದ್‌ರನ್ನು ಕರೆದು ಮನೆಯಿಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯ ಗೋದ್ರೇಜ್‌ನ ಬಾಗಿಲು ಸ್ವಲ್ಪ ತೆರೆದಿದ್ದು ಕಂಡು ಬಂದಿದೆ. ಹೀಗಾಗಿ ಅದನ್ನು ತೆರೆದು ನೋಡಿದಾಗ ಗಾಡ್ರೇಜ್‌ನ ಒಂದು ಲಾಕರ್‌ನಲ್ಲಿ ಇರಿಸಿದ್ದ ವ್ಯಾನಿಟಿ ಬ್ಯಾಗ್‌ನಲ್ಲಿದ್ದ ನಗದು ಸಹಿತ ಚಿನ್ನಾಭರಣ ಕಳವು ಆಗಿರುವುದು  ಬೆಳಕಿಗೆ ಬಂದಿದೆ. ಈ ಬಗ್ಗೆ ಮಹಮ್ಮದ್‌ ರವರು ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ತನಿಖೆ ಹೀಗೆ ಸಾಗಿತ್ತು...

 ಕೃತ್ಯ ನಡೆದ ದಿನ ಇಂದಬೆಟ್ಟು ಪ್ರದೇಶಕ್ಕೆ ಅಪರಿಚಿತರು ಬೇಟಿ ನೀಡಿದ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕಿದ್ದು ಈ ವೇಳೆ  ಬೈಕ್‌ ಒಂದರಲ್ಲಿ ಇಬ್ಬರು ಹೆಲ್ಮೇಟ್‌ ಧರಿಸಿಕೊಂಡು ಬಂದಿರುವ ಮಾಹಿತಿ ಲಭಿಸಿದೆ. ಇದನ್ನು ಅಧಾರವಾಗಿಟ್ಟುಕೊಂಡು  ಸಿಸಿಟಿವಿ ಹಾಗೂ ಮೊಬೈಲ್‌ ಟವರ್‌ ಲೊಕೇಷನ್‌ ನನ್ನು ವೈಜ್ನಾನಿಕ ಮಾದರಿಯಲ್ಲಿ ಕಲೆ ಹಾಕಿ ಕೃತ್ಯ ಎಸಗಿರಬಹುದಾದ ಶಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚಿದ್ದಾರೆ.

 ಬಳಿಕ ಈ ಶಂಕಿತ ವ್ಯಕ್ತಿಗಳನ್ನು ಕೇಂದ್ರಿಕರಿಸಿ ತನಿಖೆಯನ್ನು ಇನ್ನಷ್ಡು ಚುರುಕುಗೊಳಿಸಿದ್ದು ಈ ವೇಳೆ ಆರೋಪಿಗಳು ಕದ್ದ ಚಿನ್ನಾಭರಣಗಳ್ನು ಮಾರಾಟ ಮಾಡಲು ತೆಗೆದುಕೊಂಡು ಹೋಗುವ ಖಚಿತ ಮಾಹಿತಿ ಲಭಿಸಿದೆ. ಕದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬೈಕ್‌ ನಲ್ಲಿ ತಗೆದುಕೊಂಡು ಹೋಗುತ್ತಿದ್ದ ಇಬ್ಬರನ್ನು ಪೊಲೀಸರ ತಂಡ ದಾರಿ ಮಧ್ಯೆ ತಡೆದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರ . ಈ ಆರೋಪಿಗಳು ನೀಡಿದ ಮಾಹಿತಿಯನ್ನಾಧರಿಸಿ  ಕೃತ್ಯದಲ್ಲಿ ಭಾಗಿಯಾದ ಮತ್ತೊಬ್ಬ ಆರೋಪಿಯನ್ನು ಬಂಧಿಸಿ ಉಳಿದ ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.

 

 ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಸೋನಾವಣೆ ಋಷಿಕೇಶ್ ಭಗವಾನ್, ಹೆಚ್ಚುವರಿ ಅಧೀಕ್ಷಕ ಶಿವಕುಮಾರ್ ಗುಣಾರೆ, ನಿರ್ದೇಶನದಂತೆ ಎಎಸ್ಪಿ ಶಿವಾಂಶು ರಜಪೂತ್ ಸೂಚನೆಯಂತೆ ಈ ಪ್ರಕರಣದ ತನಿಖಾಧಿಕಾರಿಯಾದ ಬೆಳ್ತಂಗಡಿ ವೃತ್ತ ನಿರೀಕ್ಷಕರಾದ ಶಿವಕುಮಾರ ಬಿ, ಬೆಳ್ತಂಗಡಿ ಪೊಲೀಸ್ ಠಾಣಾ ಪಿ.ಎಸ್.ಐ ನಂದಕುಮಾರ್, ಪ್ರೊಬೆಷನರಿ.ಪಿಎಸ್‌ಐ ಮೂರ್ತಿ, ಎಎಸೈ ದೇವಪ್ಪ, ಸಿಬ್ಬಂದಿಗಳಾದ ಲಾರೆನ್ಸ್ ರಾಜೇಶ್ ಎನ್ , ವೃಷಭ , ಪ್ರಮೋದ್ ನಾಯ್ಕ , ಇಬ್ರಾಹಿಂ ಗರ್ಡಾಡಿ , ಲತೀಫ್ , ವಿಜಯ ಕುಮಾರ್ ರೈ , ವೆಂಕಟೇಶ್ , ಬಸವರಾಜ್ , ಚರಣ್ , ಅವಿನಾಶ್, ವಾಹನ ಚಾಲಕರಾದ ಮಹಮ್ಮದ್ ಆಸೀಫ್ , ಸತೀಶ್, ತಾಂತ್ರಿಕ ಸಿಬ್ಬಂದಿಗಳಾದ ದಿವಾಕರ, ಸಂಪತ್ ಕುಮಾರ್ ಸಹಾಯದಿಂದ ಆರೋಪಿಗಳನ್ನು ಪತ್ತೆ ಮಾಡಲಾಯಿತು.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: