ಹೊಸದಿಲ್ಲಿ: 2022ರ ಪಂಚ ರಾಜ್ಯಗಳ ಚುನಾವಣೆಯ ಎಬಿಪಿ-ಸಿವೋಟರ್ ಸಮೀಕ್ಷೆ ಹೊರಬಿದ್ದಿದ್ದು, ಸಮೀಕ್ಷೆ ಪ್ರಕಾರ ಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಬಹುದಾದರೂ ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳಿಗೆ ಜಯದ ಹಾದಿ ಅಷ್ಟೊಂದೇನೂ ಸುಲಭವಾಗಿರುವುದಿಲ್ಲ ಎಂದು ಅಂದಾಜಿಸಿದೆಯಲ್ಲದೆ ಪಕ್ಷ ಕಳೆದ ಬಾರಿ ಗೆದ್ದಿದ್ದ 100ಕ್ಕೂ ಅಧಿಕ ಸ್ಥಾನಗಳಲ್ಲಿ ಸೋಲು ಅನುಭವಿಸಲಿದೆ ಎಂದು ಸಮೀಕ್ಷೆ ಹೇಳಿದೆ.
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಸುಮಾರು 108 ಸ್ಥಾನಗಳನ್ನು ಕಳೆದುಕೊಳ್ಳಬಹುದು ಹಾಗೂ ಸುಮಾರು 217 ಸ್ಥಾನಗಳಲ್ಲಿ ಗೆಲ್ಲಬಹುದು, ಸಮಾಜವಾದಿ ಪಕ್ಷಕ್ಕೆ 156 ಸ್ಥಾನಗಳು, ಬಿಎಸ್‍ಪಿ ಗೆ 18 ಹಾಗೂ ಕಾಂಗ್ರೆಸ್ ಪಕ್ಷಕ್ಕೆ 8 ಸ್ಥಾನಗಳು ದೊರೆಯಬಹುದೆಂದು ಸಮೀಕ್ಷೆ ಅಂದಾಜಿಸಿದೆ.
ಪಂಜಾಬ್‍ನಲ್ಲಿ ಬಿಜೆಪಿಗೆ ಯಾವುದೇ ಸ್ಥಾನ ದೊರೆಯುವುದಿಲ್ಲ, ಕಾಂಗ್ರೆಸ್ ಪಕ್ಷಕ್ಕೆ 46 ಸ್ಥಾನಗಳು, ಶಿರೋಮಣಿ ಅಕಾಲಿ ದಳಕ್ಕೆ 20 ಹಾಗೂ ಆಪ್ ಗೆ 51 ಸ್ಥಾನಗಳು ದೊರೆಯಲಿದೆ ಎಂದು ಸಮೀಕ್ಷೆ ಅಂದಾಜಿಸಿದೆ.
ಗೋವಾ ರಾಜ್ಯದಲ್ಲಿ ಬಿಜೆಪಿಗೆ 21 ಸ್ಥಾನಗಳಲ್ಲಿ ಗೆಲುವು ದೊರೆಯಲಿದ್ದರೆ ಆಪ್ ಗೆ 5 ಮತ್ತು ಕಾಂಗ್ರೆಸ್ ಪಕ್ಷಕ್ಕೆ 4 ಸ್ಥಾನಗಳು ದೊರೆಯಬಹುದೆಂದು ಸಮೀಕ್ಷೆ ಅಂದಾಜಿಸಿದೆ.
ಮಣಿಪುರದಲ್ಲಿ ಬಿಜೆಪಿ 25ರಿಂದ 29 ಸ್ಥಾನಗಳು, ಕಾಂಗ್ರೆಸ್ ಪಕ್ಷ 20 ರಿಂದ 24 ಸ್ಥಾನಗಳು, ನಾಗಾ ಪೀಪಲ್ಸ್ ಫ್ರಂಟ್ 4ರಿಂದ 8 ಸ್ಥಾನಗಳು ಹಾಗೂ ಇತರ ಪಕ್ಷಗಳಿಗೆ 3ರಿಂದ 7 ಸ್ಥಾನಗಳು ದೊರೆಯಬಹುದೆಂದು ಸಮೀಕ್ಷೆ ಅಂದಾಜಿಸಿದೆ.