ಪುತ್ತೂರು: ಪುತ್ತೂರಿನ ಎಪಿಎಂಸಿ ರೈಲ್ವೇ ಗೇಟ್ ನ್ನು ಅರ್ಧ ಗಂಟೆಗೂ ಹೆಚ್ಚು ಕಾಲ ಹಾಕಿ ನೂರಾರು ಪ್ರಯಾಣಿಕರು ಪರದಾಡುವಂತ ಪರಿಸ್ಥಿತಿ ನ.11ರಂದು ನಿರ್ಮಾಣವಾಗಿತ್ತು. ಕಳೆದ 3 ವರ್ಷಗಳ ಹಿಂದೆಯೇ ಇಲ್ಲಿಗೆ ರೈಲ್ವೇ ಅಂಡರ್ ಪಾಸ್ ಆಗಿದೆ ಇನ್ನೇನು ಕೆಲವೇ ದಿನಗಳಲ್ಲಿ ಕೆಲಸ ಪ್ರಾರಂಭವಾಗುತ್ತದೆ ಎಂದು ಪ್ರಚಾರ ನಡೆದಿತ್ತು. ಆದರೇ ಈಗಲೂ ಜನ ಅದೇ ರೀತಿ ಸಮಸ್ಯೆ ಅನುಭವಿಸುತ್ತಿರುವುದಕ್ಕೆ ಇಂದಿನ ಘಟನೆಯೇ ಸಾಕ್ಷಿ
ರಾತ್ರಿ 9.15ರ ಸಮಯಕ್ಕೆ ಎಪಿಎಂಸಿ ರಸ್ತೆಯ ಸಾಲ್ಮರ ರೈಲ್ವೇ ಗೇಟ್ ಹಾಕಲಾಗಿದೆ. ಒಂದು ಗೂಡ್ಸ್ ರೈಲು ಸಂಚಾರವಾಗಿ ಹಲವು ಸಮಯ ಕಳೆದರೂ ಗೇಟ್ ತೆರೆದಿರಲಿಲ್ಲ.
ಆಗಲೇ ನೂರಾರು ವಾಹನಗಳು ಎರಡೂ ಕಡೆಗಳಲ್ಲಿ ಸೇರಿದ್ದವು. ಪುತ್ತೂರು ಪೇಟೆಯಲ್ಲಿ ಮನೆ ಸೇರುವ ತವಕದಲ್ಲಿದ್ದ ನೂರಾರು ಜನ ಆಕ್ರೋಶಗೊಂಡಿದ್ದರು.
ಸಾವಿರಾರು ಜನ ಎರಡೂ ಕಡೆಗಳಲ್ಲಿ ಟ್ರಾಫಿಕ್ ನಲ್ಲಿ ಜಾಮ್ ಆಗಿದ್ದರು. ಪುತ್ತೂರು ಪೇಟೆಗೆ ಆಸ್ಪತ್ರೆಗೆ ಬಂದವರು, ವ್ಯಾಪಾರ, ಉದ್ಯೋಗಕ್ಕೆ ಬಂದವರ ಸಾಲೇ ಎಪಿಎಂಸಿ ರಸ್ತೆಯ ಪುತ್ತೂರು ಭಾಗದಿಂದ ತುಂಬಿತ್ತು. ಬ್ಲಾಕ್ ನಡುವೆ ಹಲವು ಮಂದಿ ವಿಡಿಯೋಗಳನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದರು.
ನಿನ್ನೆ ರಾತ್ರಿಯ ದೃಶ್ಯ
ಕೊನೆಗೂ 9.45 ಆಗುವಾಗ ಗೇಟ್ ತೆರೆಯಲಾಯಿತು ಎನ್ನುತ್ತಾರೆ ಪ್ರಯಾಣಿಕರೊಬ್ಬರು.
ಈ ರೈಲ್ವೇ ರಸ್ತೆ ಅಂಡರ್ ಮಂಜೂರೂ ಆಗಿದೆ ಎಂದು ಕಳೆದ 3 ವರ್ಷಗಳಿಂದ ಹೇಳಿಕೊಂಡಿದ್ದರೂ ಇನ್ನೂ ಕೂಡ ಜನತೆಯ ಕಷ್ಟಕ್ಕೆ ಪರಿಹಾರ ಸಿಕ್ಕಿಲ್ಲ.
ದಿನಂಪ್ರತಿ ಇದೇ ಸಮಸ್ಯೆ: ಹಲವಾರು ವರ್ಷದಿಂದ 10-15 ನಿಮಿಷ ಕಾಯುವುದು ಪ್ರಯಾಣಿಕರಿಗೆ ಮಾಮೂಲಿಯಾಗಿತ್ತು. ಇದೀಗ ಅರ್ಧ ಮುಕ್ಕಾಲು ಗಂಟೆಗೆ ಈ ಸ್ಥಿತಿ ತಲುಪಿದೆ.
2019 ರಿಂದ ಅದೇ ಹಾಡು ಅದೇ ರಾಗ: 2019ರ ಸೆಪ್ಟೆಂಬರ್ 13ರಂದು ಮಂಗಳೂರಿನಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ರೈಲ್ವೆ ಅಭಿವೃದ್ಧಿ ಸಭೆಯಲ್ಲಿ ರೈಲ್ವೇ ಅಧಿಕಾರಿಗಳು 12.7 ಕೋಟಿ ವೆಚ್ಚದಲ್ಲಿ 2019ರ ಮಳೆಗಾಲ ಕಳೆದು ಪುತ್ತೂರು ಎಪಿಎಂಸಿ ರಸ್ತೆಯ ಕೆಳಸೇತುವೆ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದಿದ್ದರು. ಇದನ್ನು ಪಕ್ಷದ ಸಾಮಾಜಿಕ ಜಾಲತಾಣದ ಕೆಲ ನಾಯಕರು ತಮ್ಮ ಖಾತೆಯಲ್ಲಿ ಪ್ರಕಟಿಸಿದ್ದರು.

ಪುತ್ತೂರಿನ ಬಹುದಿನದ ಬೇಡಿಕೆಯಾದ ಪುತ್ತೂರು ಎ.ಪಿ.ಎಂ.ಸಿ.ಯಿಂದ ಆದರ್ಶ ಆಸ್ಪತ್ರೆ ಕಡೆಯಿಂದ ಪುತ್ತೂರು ಸಂಪರ್ಕಿಸುವ ರಸ್ತೆಗೆ ಅಡ್ಡಲಾಗಿರುವ ರೈಲ್ವೇ ಗೇಟ್ 11.72 ಕೋಟಿಯ ಅಂಡರ್ ಪಾಸ್ 50:50 ಅನುಪಾತದಲ್ಲಿ ರೈಲ್ವೇ ಹಾಗೂ ಎ.ಪಿ.ಎಂ.ಸಿ. ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿದೆ. 2020 ಎಪ್ರಿಲ್ ಬಜೆಟ್ ನಲ್ಲಿ ಹಣ ಒದಗಿಸುವ ಒಪ್ಪಂದದ ಮೇರೆಗೆ ಅಂಡರ್ ಪಾಸ್ ಪ್ರಕ್ರಿಯೆ ಅರಂಭಗೊಳ್ಳಲಿದೆ ಎಂದು 2019ರಲ್ಲಿ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಹೇಳಲಾಗಿತ್ತು.
2021ರ ಮಾರ್ಚ್ ತಿಂಗಳಿನಲ್ಲಿ ಮತ್ತೇ ಹಲವಾರು ರಾಜಕಾರಣಿಗಳಿಗೆ ಎಪಿಎಂಸಿ ರಸ್ತೆ ಅಂಡರ್ ಪಾಸ್ ಮಾಡಿದ್ದಕ್ಕೆ ಅಭಿನಂದನೆಗಳು ಹಾಕಲಾಗಿತ್ತು. ತಿಂಗಳು 7 ಆದರೂ ಇನ್ನೂ ಕೂಡ ಆ ರಸ್ತೆಗೆ ಅಂಡರ್ ಪಾಸ್ ಭಾಗ್ಯ ಒದಗಿ ಬಂದಿಲ್ಲ. ಆದಷ್ಟು ಬೇಗ ಆ ಸಮಸ್ಯೆ ಪರಿಹಾರ ಆಗಲಿ ಎನ್ನುವುದೇ ನಮ್ಮ ಆಶಯ.