ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಪುತ್ತೂರು, ಹಾಸನ, ಸುಳ್ಯ ಹಾಗೂ ಕುಶಾಲನಗರ ಮಳಿಗೆಗಳಲ್ಲಿ ಈ ಬಾರಿಯ ದೀಪಾವಳಿ ಹಬ್ಬದ ಕೊಡುಗೆಯಾಗಿ ಏರ್ಪಡಿಸಿದ್ದ ‘ಲಕ್ಕಿ ಲಕ್ಷ್ಮೀ’ ಸಾವಿರಾರು ಗ್ರಾಹಕರು ಭಾಗಿಯಾಗಿ ಮನದಿಚ್ಛೆಯ ಆಭರಣ ಖರೀದಿಯೊಂದಿಗೆ ಹಲವಾರು ಕೊಡುಗೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
‘ಲಕ್ಕಿ ಲಕ್ಷ್ಮೀ’ ಕೊಡುಗೆಯಾಗಿ ಚಿನ್ನಾಭರಣ ಖರೀದಿಗೆ ಪ್ರತಿ ಗ್ರಾಂ ಗೆ ರೂ. 75/- ರಿಂದ ರೂ. 125/- ರ ವರೆಗೆ ಲಕ್ಕಿ ಕೂಪನ್ ಮೂಲಕ ಗ್ರಾಹಕರೇ ಆಯ್ಕೆ ಮಾಡುವ ಅವಕಾಶ ನೀಡಲಾಗಿತ್ತು.


ವಜ್ರಾಭರಣ ಖರೀದಿಗೆ ಪ್ರತೀ ಕ್ಯಾರೇಟ್‌ಗೆ ರೂ. 5000/- ನೇರ ರಿಯಾಯಿತಿ ಮಾತ್ರವಲ್ಲದೆ 15 ಚಿನ್ನದ ನಾಣ್ಯಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸಲಾಗಿತ್ತು.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಕೊಡಗು, ಹಾಸನ, ಮೈಸೂರು ಮತ್ತು ಬೆಂಗಳೂರು ಭಾಗದಿಂದಲೂ ಜಿ.ಎಲ್. ಗೆ ಆಗಮಿಸಿ ದೀಪಾವಳಿ ಕೊಡುಗೆಗೆ ನಿರೀಕ್ಷೆಗೂ ಮೀರಿ ಸ್ಪಂದಿಸಿದ ಗ್ರಾಹಕರಿಗೆ ಸಂಸ್ಥೆಯ ಮುಖ್ಯಸ್ಥರಾದ ಬಲರಾಮ ಆಚಾರ್ಯ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.