ಪುತ್ತೂರು : ನ 11 : ಕಳೆದ ಕೆಲ ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ 21 ಹರೆಯದ ಪುತ್ತೂರು ತಾಲೂಕಿನ ಅರ್ಯಾಪು ಗ್ರಾಮದ ಯುವತಿಯೊಬ್ಬಳು ಮಂಗಳೂರಿನ ಖಾಸಗಿ ಆಸ್ಫತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ನ .9 ರಂದು ಮೃತಪಟ್ಟಿದ್ದಾರೆ.
ಅರ್ಯಾಪು ಗ್ರಾಮದ ಸಂಟ್ಯಾರು ಬಳಿಯ ಕಾಯರಪ್ಪು ನಿವಾಸಿ ಯಶಸ್ವಿನಿ ಮೃತಪಟ್ಟ ವಿದ್ಯಾರ್ಥಿನಿ. ಈಕೆ ದಿ. ತಿಮ್ಮಣ್ಣ ಹಾಗೂ ವೇದಾವತಿ ದಂಪತಿಗಳ ಏಕೈಕ ಪುತ್ರಿ. ಈಕೆ ಇತ್ತಿಚೆಗಷ್ಟೆ ಪದವಿ ಶಿಕ್ಷಣ ಮುಗಿಸಿದ್ದಳು
ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಈಕೆಗೆ ಮೊದಲು ಪುತ್ತೂರಿನ ಖಾಸಗಿ ಆಸ್ಫತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆಕೆ ಅಗ ಒಂದಷ್ಟು ಚೇತರಿಸಿಕೊಂಡಿದ್ದಳು ಎನ್ನಲಾಗಿದೆ. ಬಳಿಕ ಕೆಲ ದಿನಗಳ ಬಳಿಕ ಮತ್ತೆ ರೋಗ ಉಲ್ಭಣಿಸಿದ್ದು ಮಂಗಳವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾಳೆ.

