ರಾಜ್ಯ ವಿಧಾನ ಪರಿಷತ್ʼ ನ 25 ಸ್ಥಾನಗಳಿಗೆ ಚುಣಾವಣೆ ಘೋಷಣೆಯಾಗಿದ್ದು, ಡಿ 10 ರಂದು ಚುಣಾವಣೆ ನಡೆಯಲಿದ್ದು ಅಭ್ಯರ್ಥಿ ಆಯ್ಕೆಯ ಕಸರತ್ತಿನಲ್ಲಿ ಎಲ್ಲ ರಾಜಕೀಯ ಪಕ್ಷಗಳು ತೊಡಗಿಸಿಕೊಂಡಿವೆ. ದ.ಕ. ಜಿಲ್ಲೆಯ ದ್ವಿ ಸದಸ್ಯತ್ವ ಕ್ಷೇತ್ರದಿಂದ ಅಭ್ಯರ್ಥಿ ಆಯ್ಕೆಗೆ ಎರಡು ಪಕ್ಷಗಳಲ್ಲಿ ಅಕಾಂಕ್ಷಿಗಳ ದೊಡ್ಡ ದಂಡು ಇದೆ. ಆದರ ಜತೆಗೆ ಸಹಕಾರಿ ರಂಗದ ದುರೀಣ, ಎಸ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರವರು ಪಕ್ಷೇತರರಾಗಿ ಸ್ಪರ್ಧಿಸಲು ಮನ ಮಾಡಿದ್ದಾರೆ ಎನ್ನಲಾಗಿದೆ. ಇದು ಎರಡು ಪಕ್ಷಗಳ ಟಿಕೆಟ್ ಅಕಾಂಕ್ಷಿಗಳ ನಿದ್ದೆಗೆಡಿಸಿದೆ.
ದಕ್ಷಿಣ ಕನ್ನಡ, ಉಡುಪಿ ಈ ಎರಡು ಜಿಲ್ಲೆಗಳ ಎಲ್ಲ ಗ್ರಾ. ಪಂ ಸದಸ್ಯರ ಸಹಿತ ಸ್ಥಳೀಯಾಡಳಿತ ಸಂಸ್ಥೆಗಳ ಚುನಾಯಿತ ಸದಸ್ಯರು ಹಾಗೂ ಜಿ.ಪಂ ಹಾಗೂ ತಾ.ಪಂ ಸದಸ್ಯರು ಈ ಎಂಎಲ್‌ಸಿ ಚುಣಾವಣೆಯ ಮತದಾರರಾಗಿದ್ದಾರೆ. ಆದರೆ, ಈ ಬಾರಿ ಜಿ.ಪಂ ಹಾಗೂ ತಾ.ಪಂ. ನ ಅವಧಿ ಪೂರ್ಣಗೊಂಡಿದ್ದು, ಆದರೇ ಅದರ ಚುಣಾವಣೆ ಕೊವೀಡ್ ಹಿನ್ನಲೆ ಮುಂದೂಡಲ್ಪಟ್ಟಿರುವುದರಿಂದ ಈ ಬಾರಿಯ ವಿಧಾನ ಪರಿಷತ್ ಚುಣಾವಣೆಯಲ್ಲಿ ಅಷ್ಟು ಮತಗಳ ಕೊರತೆ ಉಂಟಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಈ ದ್ವಿ ಸದಸ್ಯ ಕ್ಷೇತ್ರಕ್ಕೆ 6500 ಮಿಕ್ಕಿ ಮತದಾರರಿದ್ದಾರೆ ಎಂದು ಅಂದಾಜಿಸಲಾಗಿದೆ. 2015ರಲ್ಲಿ ನಡೆದ ಚುಣಾವಣೆಯಲ್ಲಿ ಒಟ್ಟು 6534 ಮತಗಳು ಚಲಾವಣೆಗೊಂಡಿದ್ದವು. ಈ ಬಾರಿ ಜಿ.ಪಂ ಹಾಗೂ ತಾ. ಪಂ ಸದಸ್ಯರು ಮತ ಚಲಾಯಿಸಲು ಸಾಧ್ಯವಿಲ್ಲವಾದುದರಿಂದ ಒಟ್ಟು ಮತಗಳ ಸಂಖ್ಯೆ ಕಳೆದ ಬಾರಿಗಿಂತ ಅಂದಾಜು 250 ಕಡಿಮೆಯಾಗಲಿದೆ.
ಲಭ್ಯ ಮಾಹಿತಿ ಪ್ರಕಾರ ಇವುಗಳ ಪೈಕಿ ಈ ಬಾರಿ ಸುಮಾರು 3600 ಮತಗಳು ಬಿಜೆಪಿ ಬೆಂಬಲಿತರದು, ಅಂ 2100 ಕಾಂಗ್ರೇಸ್ ಬೆಂಬಲಿತ ಮತಗಳು ಹಾಗೂ 550 ಮತಗಳು ಎಸ್ಡಿಪಿಐ, ಜೆಡಿಎಸ್ ಹಾಗೂ ಪಕ್ಷೇತರರ ಮತಗಳಿವೆ ಎಂದು ಅಂದಾಜಿಸಲಾಗಿದೆ.
2200 ಪ್ರಥಮ ಪ್ರಾಶಸ್ತ್ಯದ ಮತ ಪಡೆದವರು ವಿಜಯದ ನಗೆ ಬೀರಲಿದ್ದಾರೆ. ಈ ಲೆಕ್ಕಚಾರದ ಪ್ರಕಾರ ಬಿಜೆಪಿ ಕೇವಲ ಒಬ್ಬ ಅಭ್ಯರ್ಥಿಯನ್ನು ಮಾತ್ರ ಕಣಕ್ಕಿಳಿಸಿದರೆ, ತನ್ನ ಅಭ್ಯರ್ಥಿಯ ಗೆಲುವಿನ ಬಳಿಕವೂ ಅದರ ಬಳಿ ಹೆಚ್ಚುವರಿಯಾಗಿ 1400 ಮತಗಳು ಉಳಿಯಲಿವೆ. ತನ್ನ ಪ್ರಥಮ ಆಯ್ಕೆಯಾಗಿ ಅದು ಹಾಲಿ ವಿಧಾನ ಪರಿಷತ್ ಸದಸ್ಯ ಹಾಗೂ ಸಚಿವ ಕೋಟ ಶ್ರೀನಿವಾಸ ಪೂಜಾರಿಯನ್ನು ಸತತ ಮೂರನೇ ಬಾರಿ ಕಣಕ್ಕಿಳಿಸುವುದು ಬಹುತೇಕ ಖಚಿತ . ಪಕ್ಷದ ಮೂಲಗಳ ಪ್ರಕಾರ ಈ ಆಯ್ಕೆ ಖಚಿತಗೊಂಡಿದ್ದು, ಅಧಿಕೃತ ಪ್ರಕಟನೆಯಷ್ಟೆ ಬಾಕಿ ಉಳಿದಿದೆ.

ತನ್ನ ಎಲ್ಲ ಬೆಂಬಲಿಗರ ಮತವನ್ನು ಒಟ್ಟಾಗಿ ಉಳಿಸಿಕೊಳ್ಳುವಲ್ಲಿ ಕಾಂಗ್ರೇಸ್ ಪಕ್ಷ ಸಫಲವಾದಲ್ಲಿ, ಹಿರಿಯ ಕಾಂಗ್ರೇಸ್ ಮುಖಂಡ ಕುಂದಾಪುರದ ಪ್ರತಾಪ್ ಚಂದ್ರ ಶೆಟ್ಟಿಯವರು ಪ್ರತಿನಿಧಿಸಿದ ಸ್ಥಾನವನ್ನೂ ಈ ಬಾರಿಯೂ ತನ್ನ ಬಳಿಯೇ ಉಳಿಸಿಕೊಳ್ಳುವುದು ಕಾಂಗ್ರೇಸ್ ಗೆ ಸಾಧ್ಯ. ಈ ಸರ್ತಿ ಪ್ರತಾಪ್ ಚಂದ್ರ ಶೆಟ್ಟಿಯವರು ಚುಣಾವಣೆಯಲ್ಲಿ ಸ್ಫರ್ಧಿಸಲು ಹಿಂದೇಟು ಹಾಕಿದ್ದಾರೆ, ಆದರೇ ಈ ಬಾರಿ ಕಾಂಗ್ರೇಸ್ ನಲ್ಲಿ ಈ ಸ್ಥಾನಕ್ಕೆ ಸ್ಪರ್ಧಿಸ ಬಯಸಿ 11 ಮಂದಿ ಅಕಾಂಕ್ಷಿಗಳಿದ್ದಾರೆ.
ಜಿಲ್ಲೆಯ ಕಾಂಗ್ರೇಸ್ ಈ ಬಾರಿ ಎಂಎಲ್ಸಿ ಚುಣಾವಣೆಗೆ ಸ್ಪರ್ಧಿಸ ಬಯಸುವವರು ರೂಪಾಯಿ ಒಂದು ಲಕ್ಷ ಡೆಪಾಸಿಟ್ ಪಾವತಿಸಿ ಅರ್ಜಿ ಸಲ್ಲಿಸುವಂತೆ ತನ್ನ ಪಕ್ಷದ ಕಾರ್ಯಕರ್ತಗೆ ಸೂಚಿಸಿತ್ತು. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ 6 ಹಾಗೂ ಉಡುಪಿ ಜಿಲ್ಲೆಯಿಂದ 5 ಮಂದಿ ಹೀಗೆ ಒಟ್ಟು 11 ಮಂದಿ ತಲಾ 1 ಲ.ರೂ ಪಾವತಿಸಿ ಅರ್ಜಿ ಗುಜರಾಯಿಸಿದ್ದಾರೆ.
ಹೀಗಾಗಿ ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೇಸಿನಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯುವುದು ಬಹುತೇಕ ಕಷ್ಟ ಸಾಧ್ಯ ಎನ್ನಲಾಗುತ್ತಿದೆ. ಕಳೆದ ಬಾರಿ ಕಾಂಗ್ರೇಸ್ ನ ಅಧಿಕೃತ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿ ವಿರುದ್ದ ಜಯಪ್ರಕಾಶ್ ಹೆಗ್ಡೆ ಹಾಗೂ ಹರಿಕೃಷ್ಣ ಬಂಟ್ವಾಳ ಬಂಡಾಯವಾಗಿ ಸ್ಪರ್ಧಿಸಿದ್ದರು. ಈ ಬಾರಿ ಇದೇ ರೀತಿ ಪಕ್ಷದ ಅಭ್ಯರ್ಥಿ ಆಯ್ಕೆಯಲ್ಲಿ ಒಡಕು ಉಂಟಾದರೆ ಅದರ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ.

ಈ ಸಂದರ್ಭ ಅದು ಒಂದೋ ತನ್ನ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯಿದೆ ಅಥಾವ ಪಕ್ಷೇತರರಾಗಿ ಸ್ಪರ್ಧಿಸುವ ಅಭ್ಯರ್ಥಿಗೆ ತನ್ನ ಹೆಚ್ಚುವರಿ ಮತಗಳನ್ನು ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಈ ಸಾಧ್ಯತೆಯನ್ನು ಗಮನಿಸಿರುವ ಸಹಕಾರಿ ದುರೀಣ ಡಾ. ಎಂ.ಎನ್. ರಾಜೇಂದ್ರ ಕುಮಾರ್ ತನ್ನ ದಾಳ ಉರುಳಿಸಿದ್ದಾರೆ ಎನ್ನಲಾಗಿದೆ. ವಿಧಾನ ಪರಿಷತ್ತಿನ ಬಹುತೇಕ ಮತದಾರರು ಸಹಕಾರಿ ಹಿನ್ನಲೆಯವರಾಗಿರುವುದು ರಾಜೇಂದ್ರ ಕುಮಾರ್ ರವರಿಗೆ ಪ್ಲಸ್ ಪಾಯಿಂಟ್ .
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಬಹುತೇಕ ಗ್ರಾ. ಪಂ ಸದಸ್ಯರು ನವೋದಯ ಅಥಾವ ಇನ್ನಿತರ ಸಹಕಾರಿ ಸಂಘದಲ್ಲಿ ಗುರುತಿಸಿಕೊಂಡವರು. ಒಂದು ಲೆಕ್ಕಚಾರದ ಪ್ರಕಾರ ಉಭಯ ಜಿಲ್ಲೆಗಳ ಸುಮಾರು 30% ಮಹಿಳಾ ಗ್ರಾ. ಪಂ ಸದಸ್ಯರು ನವೋದಯದ ಭಾಗವಾಗಿದ್ದವರು . ಕಾಂಗ್ರೇಸ್ ಹಾಗೂ ಬಿಜೆಪಿ ಎರಡು ಪಕ್ಷದ ಬೆಂಬಲಿತರು ಇದರಲ್ಲಿ ಸೇರಿದ್ದಾರೆ. ಹಾಗಾಗಿಯೇ ರಾಜೇಂದ್ರ ಕುಮಾರ್ ಈ ಎಂಎಲ್ಸಿ ಚುಣಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕತೆ ತೋರಿದ್ದಾರೆ ಎಂದು ಹೇಳಲಾಗಿದೆ .
ಬಹುತೇಕ ಅವರು ನ . 17 ರಂದು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲಿದ್ದಾರೆ. ಅವರನ್ನು ಬಿಜೆಪಿಯ ಹೆಚ್ಚುವರಿ ಮತಗಳು ಗೆಲುವಿನ ದಡ ತಲುಪಿಸಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಬಿಜೆಪಿಯಲ್ಲಿರುವ ಹೆಚ್ಚುವರಿ 1400 ಮತಗಳು, ಕಾಂಗ್ರೇಸ್ , ಬಿಜೆಪಿಯೇತರ ಸದಸ್ಯರ ಸುಮಾರು 500 ಕ್ಕೂ ಹೆಚ್ಚು ಮತಗಳು ಹಾಗೂ ಕಾಂಗ್ರೇಸ್ ನಿಂದ ಒಂದಷ್ಟು ಮತಗಳು ಲಭಿಸಿದರೆ ಸುಲಭದಲ್ಲಿ ಅವರು ಗೆಲುವಿನತ್ತ ಹೆಜ್ಜೆ ಹಾಕಲಿದ್ದಾರೆ . ಜತೆಗೆ ಸಹಕಾರಿ ಕ್ಷೇತ್ರದ ಮತದಾರರು ದೊಡ್ಡ ಸಂಖ್ಯೆಯಲ್ಲಿ ಎಂಎನ್ ಅರ್ ಪರ ಮತ ಚಲಾಯಿಸಿದರೆ ಆಗ ದೊಡ್ಡ ಪಲ್ಲಟಗಳು ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ
2015 ರ ಮತ ವಿಭಜನೆಯ ವಿವರ :
2015ರ ಚುಣಾವಣೆಯಲ್ಲಿ ಒಟ್ಟು ಚಲಾವಣೆಯಾದ ಮತಗಳು : 6534 ಗೆಲುವು
ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ) ಪಡೆದ ಮತಗಳು : 2977 ಗೆಲುವು
ಪ್ರತಾಪ್ ಚಂದ್ರ ಶೆಟ್ಟಿ ( ಕಾಂಗ್ರೇಸ್) ಪಡೆದ ಮತಗಳು : 2237 ಸೋಲು
ಜಯಪ್ರಕಾಶ್ ಹೆಗ್ಡೆ ( ಕಾಂಗ್ರೇಸ್ ಬಂಡಾಯ ) ಪಡೆದ ಮತಗಳು : 872 ಸೋಲು
ಹರಿಕೃಷ್ಣ ಬಂಟ್ವಾಳ ( ಕಾಂಗ್ರೇಸ್ ಬಂಡಾಯ ) ಪಡೆದ ಮತಗಳು : 127 ಸೋಲು
ಪ್ರವೀಣ್ ಚಂದ್ರ ಜೈನ್ ( ಜೆಡಿಎಸ್ ) ಪಡೆದ ಮತಗಳು : 30 ಸೋಲು
ತಿರಸ್ಕೃತ ಮತಗಳು : 231
ನೋಟಾ : 02