Ad Widget

500 ವರ್ಷಗಳ ಇತಿಹಾಸವಿರುವ ತುಳುನಾಡಿನ ಸಾಂಪ್ರದಾಯಿಕ ‘ಕಳಿ’ ಮೂರ್ತೆದಾರರಿಲ್ಲದೆ ಅಳಿವಿನಂಚಿಗೆ – ತಾಳೆ ಶೇಂದಿಗೆ ಯುವಜನತೆ ಫಿದಾ – ಕೇರಳದ ಮೂರ್ತೆದಾರರಿಗೆ ಭರ್ಜರಿ ಡಿಮ್ಯಾಂಡ್

images (15)
Ad Widget

Ad Widget

Ad Widget

ಮಂಗಳೂರು: ಕರಾವಳಿ ಜಿಲ್ಲೆಯ ಸಾಂಪ್ರದಾಯಿಕ, ಮೂಲ ಕಸುಬುಗಳಲ್ಲಿ ಒಂದಾದ ತಾಳೆ ಮರದ ಮೂರ್ತೆದಾರಿಕೆ ಸಂಪೂರ್ಣ ಅಳಿವಿನಂಚಿನಲ್ಲಿದ್ದು, ಶೇಂದಿ ಉತ್ಪಾದನೆ ಶೇ.95ರಷ್ಟು ಕುಂಠಿತಗೊಂಡಿದೆ. ಈ ಮಧ್ಯೆ ತೆಂಗಿನ ಮರದಿಂದ ಶೇಂದಿ ತೆಗೆಯುವ ಕೇರಳ ಟ್ಯಾಪರ್ಸ್ (ಮೂರ್ತೆದಾರರಿಗೆ) ರಾಜ್ಯದಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.

Ad Widget

Ad Widget

Ad Widget

Ad Widget

Ad Widget

ಕರಾವಳಿ ಭಾಗದಲ್ಲಿ ತಾಳೆ ಮರದಿಂದ ಶೇಂದಿ ತೆಗೆಯುವ ಕಸುಬಿಗೆ 500ವರ್ಷಕ್ಕೂ ಹಿಂದಿನ ಇತಿಹಾಸವಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಶೇಂದಿ ಉತ್ಪಾದನೆಯಾಗುತ್ತಿತ್ತು.

Ad Widget

Ad Widget

Ad Widget

Ad Widget

Ad Widget

ನವೆಂಬರ್‌ನಿಂದ-ಮೇ ತಿಂಗಳ ಅವಧಿಯಲ್ಲಿ ಶೇಂದಿ ಉತ್ಪಾದನೆ ಹೆಚ್ಚಾಗಿ ನಡೆಯುತ್ತಿದ್ದು, ಸೀಸನ್‌ ಅವಧಿಯಲ್ಲಿ ಈ ಅವಳಿ ಜಿಲ್ಲೆಗಳಲ್ಲಿ ದಿನಕ್ಕೆ ಕನಿಷ್ಠ 1ಲಕ್ಷಕ್ಕೂ ಅಧಿಕ ಲೀಟರ್‌ ಶೇಂದಿ ಸಂಗ್ರಹವಾಗುತ್ತಿತ್ತು. ಅಂತಹುದರಲ್ಲಿ ಈಗ 5ಸಾವಿರ ಉತ್ಪಾದನೆಯೂ ಆಗುತ್ತಿಲ್ಲ ಎನ್ನುತ್ತಾರೆ ಮೂರ್ತೆದಾರರ ಮಹಾಮಂಡಲ ಉಪಾಧ್ಯಕ್ಷ ಶಿವಪ್ಪ ಸುವರ್ಣ ಪಕ್ಕಲಪಾದೆ.

ಬೇಡಿಕೆಯಿದೆ, ಉತ್ಪಾದನೆಯಿಲ್ಲ: ಕರಾವಳಿಯ ತಾಳೆ ಮರದ ಶೇಂದಿಗೆ ಮೊದಲಿಗಿಂತ ಈಗ ಬೇಡಿಕೆ ಹೆಚ್ಚಿದೆ. ಅದರಲ್ಲೂ ಇಂದಿನ ಯುವಸಮುದಾಯ ತಾಳೆ ಶೇಂದಿಗೆ ಹೆಚ್ಚು ಫಿದಾ ಆಗಿದೆ. ವೀಕೆಂಡ್‌ನಲ್ಲಿ ಈ ಬೇಡಿಕೆ 4ರಿಂದ 5 ಪಟು ಹೆಚ್ಚಾಗಿದೆ. ಆದರೆ ಬೇಡಿಕೆಯಷ್ಟು ಉತ್ಪಾದನೆಯಾಗದೆ ಉತ್ತಮ ದರ್ಜೆಯ ಶೇಂದಿ ದರವೂ ಲೀಟರ್‌ಗೆ 100ರೂ.ಗೆ ವಿಕ್ರಯವಾಗುತ್ತಿದೆ. ಆದರೂ ಉತ್ತಮ ದರ್ಜೆ ಶೇಂದಿ ಸಿಗುತ್ತಿಲ್ಲ ಎನ್ನುತ್ತಾರೆ ಶೇಂದಿ ಮಾರಾಟಗಾರರು.

Ad Widget

Ad Widget

Ad Widget

Ad Widget

ಕೇರಳ ಮೂರ್ತೆದಾರರಿಗೆ ಬೇಡಿಕೆ:ತಾಳೆ ಮರದ ಶೇಂದಿ ಕೊರತೆಯಾಗಿರುವ ಕಾರಣ ಕರಾವಳಿ ಭಾಗದಲ್ಲಿ ತೆಂಗಿನ ಮರದ ಶೇಂದಿಗೆ ಬೇಡಿಕೆ ಹೆಚ್ಚಾಗಿದೆ. ತೆಂಗಿನ ಮರದಲ್ಲಿ ಶೇಂದಿ ಮಾಡುವುದರಲ್ಲಿ ಕೇರಳದ ಮೂರ್ತೆದಾರರು ನಿಪುಣರಾಗಿದ್ದು, ಅವರಿಗೆ ಹೆಚ್ಚಿನ ಬೇಡಿಕೆಯಿದೆ. ಪ್ರತಿ ಲೀಟರ್‌ಗೆ ಕಮಿಷನ್‌ ಆಧಾರದಲ್ಲಿ ಇವರು ಆದಾಯ ಮಾಡಿಕೊಳ್ಳುತ್ತಿದ್ದಾರೆ. ಕರಾವಳಿ ಭಾಗದಲ್ಲಿ ತೆಂಗಿನ ಮರದ ಮೂರ್ತೆದಾರಿಕೆ ಕಲಿಯಲು ಆಸಕ್ತಿಯೂ ಕಡಿಮೆಯಾಗಿದೆ ಮತ್ತು ಕೇರಳದವರು ಕೂಡಾ ಈ ವಿದ್ಯೆಯನ್ನು ಕಲಿಸಿಕೊಡಲು ಉತ್ಸಾಹ ತೋರುತ್ತಿಲ್ಲ ಎನ್ನುತ್ತಾರೆ ಶಿವಪ್ಪ ಸುವರ್ಣ.

ಸರಕಾರದಿಂದ ಪ್ರೋತ್ಸಾಹ, ತರಬೇತಿ ಇಲ್ಲ:
ಮೂರ್ತೆದಾರಿಕೆ ಎನ್ನುವುದು ಸಾಹಸ, ಸಂಕಷ್ಟದ ಕಸುಬಾಗಿದ್ದು, ಇದರಲ್ಲಿ ತೊಡಗಿಸಿಕೊಂಡ ವ್ಯಕ್ತಿ ದಿನದ ಮೂರು ಹೊತ್ತು ತಾಳೆ ಮರಕ್ಕೆ ಹೋಗಿ ಶೇಂದಿ ಉತ್ಪಾದಿಸಬೇಕು. ಇದೊಂದು ಸಾಹಸದ ಕೆಲಸವಾದರೂ ತಾಳೆ ಮರದಿಂದ ಮೃತಪಟ್ಟು ಸತ್ತವರ ಕುಟುಂಬಕ್ಕೆ ಸರಕಾರದಿಂದ ಯಾವುದೇ ಅನುದಾನ ಮೀಸಲಿಟ್ಟಿಲ್ಲ. ಹೀಗಿರುವುದರಿಂದ ಮೂರ್ತೆದಾರರು ಕುಟುಂಬದ ಯಾವೊಬ್ಬ ಸದಸ್ಯನೂ ಈ ಉದ್ಯೋಗಕ್ಕೆ ಒಲವು ತೋರುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ತುಂಬೆಯಲ್ಲಿ ರಾಜ್ಯ ಸರಕಾರವೇ ಕೋಟ್ಯಂತರ ರೂ. ಖರ್ಚು ಮಾಡಿ ನೀರಾ ಘಟಕ ಆರಂಭಿಸಿತ್ತಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದು ಪಾಳು ಬಿದ್ದಿದೆ.

ತರಬೇತಿಯೂ ಸಿಗುತ್ತಿಲ್ಲ: ಮೂರ್ತೆದಾರಿಕೆ ಕಸುಬು ಕಲಿಯಲು ಯಾವುದೇ ತರಬೇತಿ ಶಾಲೆಗಳಿಲ್ಲ. ಒಬ್ಬರಿಂದ ಒಬ್ಬರು ಕಲಿಯಬೇಕಿದೆ. ಆದರೆ, ಈವರೆಗೆ ಮೂರ್ತೆದಾರಿಕೆ ಮಾಡಿಕೊಂಡು ಬಂದ ಹಿರಿ ಜೀವಗಳು ಈಗ ಕಸುಬು ನಿಲ್ಲಿಸಿದ್ದಾರೆ. ಹೊಸ ಪೀಳಿಗೆ ಇದಕ್ಕೆ ಆಸಕ್ತಿ ತೋರಿಸುತ್ತಿಲ್ಲ. ತರಬೇತಿ ವ್ಯವಸ್ಥೆಗಳು ಇಲ್ಲದ ಕಾರಣ ಮೂರ್ತೆದಾರಿಕೆ ಇನ್ನು ಕೆಲವೇ ವರ್ಷಗಳಲ್ಲಿ ಅಳಿವಿನಂಚಿಗೆ ತೆರಳಲಿದೆ.

ಕರಾವಳಿ ಜಿಲ್ಲೆಯಲ್ಲಿ ತಾಳೆ ಮೂರ್ತೆದಾರಿಕೆ ಬಹುತೇಕ ಅಳವಿನಂಚಿನಲ್ಲಿದ್ದು, ಹೆಚ್ಚಿನವರು ಕೇರಳದ ಮೂರ್ತೆದಾರರನ್ನು ಕರೆಯಿಸಿ ತೆಂಗಿನ ಮರದ ಮೂರ್ತೆದಾರಿಕೆ ಮಾಡಿಸುತ್ತಿದ್ದಾರೆ. ಕರಾವಳಿ ಜಿಲ್ಲೆಯಲ್ಲಿ ಅನಾದಿಕಾಲದ ಕುಲಕಸುಬು ತಾಳೆ ಮೂರ್ತೆದಾರಿಕೆ ಉಳಿಯಬೇಕಾದರೆ ಸರಕಾರದಿಂದ ಪ್ರೋತ್ಸಾಹ ಸಿಗಬೇಕು ಮತ್ತು ತರಬೇತಿ ಕೇಂದ್ರಗಳನ್ನು ತೆರೆಯಬೇಕು ಎನ್ನುತ್ತಾರೆ ಮೂರ್ತೆದಾರರ ಮಹಾಮಂಡಲ, ದಕ್ಷಿಣ ಕನ್ನಡ ಉಪಾಧ್ಯಕ್ಷರಾದ ಶಿವಪ್ಪ ಸುವರ್ಣ

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: