
ಮಂಗಳೂರು: DCSI ಸರ್ವೆಯಲ್ಲಿ ಗ್ರಾಹಕ ಸೇವೆಯಲ್ಲಿ ರಾಜ್ಯದಲ್ಲೇ ನಂ.1 ಹೊಂಡಾ ಡೀಲರ್ ಎಂದೇ ಖ್ಯಾತವಾದ ಕರಾವಳಿಯಾದ್ಯಂತ ಹಲವು ವರ್ಷಗಳಿಂದ ವಾಹನ ಮಾರಾಟ ಹಾಗೂ ಸೇವೆಯಲ್ಲಿ ಅಗ್ರ ಸ್ಥಾನದಲ್ಲಿದ್ದು ಗ್ರಾಹಕರಿಗೆ ಸೇವೆಯನ್ನು ನೀಡುತ್ತಿರುವ ಹಾಗೂ ಅಪಾರ ಅನುಭವ ಹೊಂದಿರುವ ಕಾಂಚನ ಮೋಟಾರ್ಸ್‍ನ ಅಂಗ ಸಂಸ್ಥೆ ಕಾಂಚನ ಹೋಂಡಾವು ದ.ಕ ಜಿಲ್ಲೆಯಲ್ಲಿ ಅತೀ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಡೀಲರ್ ಆಗಿದೆ.
ಇದೀಗ ದೀಪಾವಳಿ ಪ್ರಯುಕ್ತ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ಪ್ರಪ್ರಥಮ ಬಾರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ನೀಡಲಿದ್ದಾರೆ. ಈ ಕೊಡುಗೆಯ ಪ್ರಕಾರ ಗ್ರಾಹಕರು ಕೇವಲ ರೂ.1 ಮುಂಗಡ ಪಾವತಿ ಮಾಡಿ ತಮ್ಮ ನೆಚ್ಚಿನ ಹೋಂಡಾ ಸ್ಕೂಟರನ್ನು ಮನೆಗೊಯ್ಯಬಹುದು.

ಗ್ರಾಹಕರು ತಮ್ಮ ಯಾವುದೇ ಹಳೇ ದ್ವಿಚಕ್ರ ವಾಹನವನ್ನು ಹೋಂಡಾ ದ್ವಿಚಕ್ರ ವಾಹನದೊಂದಿಗೆ ವಿನಿಮಯಿಸಿ ತಮ್ಮ ಹಳೇ ದ್ವಿಚಕ್ರ ವಾಹನಕ್ಕೆ ಮಾರುಕಟ್ಟೆಗಿಂತ ಹೆಚ್ಚಿನ ಮೌಲ್ಯವನ್ನು ಪಡೆಯಬಹುದು. ಇದೇ ಮೊದಲ ಬಾರಿಗೆ ಗ್ರಾಹಕರ ಬೇಡಿಕೆಯ ಮೇರೆಗೆ 0% ವಿಶೇಷ ರಿಯಾಯತಿಯ ಬಡ್ಡಿದರದಲ್ಲಿ ಸಾಲ ಮಂಜೂರಾತಿ ಮಾಡಿ ಕೊಡಲಾಗುವುದು.
ಅತೀ ಕಡಿಮೆ ದಾಖಲಾತಿಗಳೊಂದಿಗೆ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಿ ಕೊಡಲಾಗುವುದು. ಹೋಂಡಾ ದ್ವಿಚಕ್ರ ವಾಹನಗಳನ್ನು ಖರೀದಿಸಿದ ಎಲ್ಲಾ ಗ್ರಾಹಕರಿಗೆ ಖಚಿತವಾದ ಉಡುಗೊರೆಯಾಗಿ ಹೋಂಡಾ ಹೆಲ್ಮೆಟ್, ರೈನ್ ಕೋಟ್, ಹೊಂಡಾ ಮಗ್, ಹೊಂಡಾ ಟೀಶರ್ಟ್ ಹಾಗೂ 15 ಲಕ್ಷ ರೈಡರ್ ಇನ್ಸೂರೆನ್ಸ್ ಇನ್ನಿತರ ಉಡುಗೊರೆಗಳನ್ನು ನೀಡಲಾಗುವುದು. ಈ ಕೊಡುಗೆಗಳು ಬಿಎಸ್-6 ಶ್ರೇಣಿಯ ಹೋಂಡಾ ಆಕ್ವೀವಾ 6ಜಿ, ಡಿಯೋ, ಆಕ್ವೀವಾ 125, ಗ್ರಾಸಿಯ 125, ಯುನಿಕಾರ್ನ್, ಶೈನ್, ಸಿಡಿ110 ಹಾಗೂ ಎಸ್‍ಪಿ 125ಯ ವಿವಿಧ ಮೋಡೆಲ್‍ಗಳಿಗೆ ಲಭ್ಯವಿದೆ.
ಶಾಖೆಗಳು: ಗ್ರಾಹಕರು ಹೋಂಡಾ ದ್ವಿಚಕ್ರ ವಾಹನಗಳ ಆಫರ್ ಹಾಗೂ ಟೆಸ್ಟ್ ರೈಡ್‍ಗಾಗಿ ಜಿಲ್ಲೆಯ ಮಂಗಳೂರು, ಕಾವೂರು, ತೊಕ್ಕೊಟ್ಟು, ಬಿ.ಸಿ. ರೋಡ್, ಸಿದ್ಧಕಟ್ಟೆ, ವಿಟ್ಲ ಹಾಗೂ ಮಾಣಿ ಶಾಖೆಗಳನ್ನು ಸಂಪರ್ಕಿಸಬಹುದು ಅಥವಾ 9945564997ಗೆ ಕರೆ ಮಾಡಿ.


