ಪುತ್ತೂರು: ಇಲ್ಲಿನ ಹೊರವಲಯ ಮೊಟ್ಟೆತ್ತಡ್ಕದ ಸಮೀಪ ಎನ್ ಅರ್ ಸಿಸಿ ಬಳಿ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ದ್ವಿ ಚಕ್ರ ವಾಹನದ ಸಹ ಸವಾರ ಚಿಕಿತ್ಸೆ ಫಲಕಾರಿಯಾಗದೆ ನ. 9 ರಂದು ಮೃತಪಟ್ಟಿದ್ದಾರೆ.
ಕುರಿಯ ನಿವಾಸಿ ವಸಂತ ರೈ ಬಳ್ಳಮಜಲು ಅವರು ಮೃತಪಟ್ಟ ಗಾಯಾಳು. ನಿನ್ನೆ ಸಂಜೆ ಮೊಟ್ಟೆತ್ತಡ್ಕ ಸಮೀಪ ಎನ್ಅರ್ ಸಿಸಿ ಹೆಲಿಪ್ಯಾಡ್ ಬಳಿ ಅಕ್ಟಿವಾ ಹಾಗೂ ಟಿಪ್ಪರ್ ಲಾರಿ ನಡುವೆ ಅಪಘಾತ ಸಂಭವಿಸಿತ್ತು.
ಪುತ್ತೂರನಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ಕುರಿಯ ನಿವಾಸಿ ನಾರಾಯಣ ನಾಯ್ಕ ಬಳ್ಳಮಜಲು ಹಾಗೂ ವಸಂತ್ ರೈ ಯವರು ಹೊಂಡಾ ಆಕ್ಟಿವಾದಲ್ಲಿ ಮನೆ ಕಡೆಗೆ ತೆರಳುತಿದ್ದಾಗ ಅಪಘಾತ ಸಂಭವಿಸಿದೆ. ನಾರಾಯಣ ನಾಯ್ಕರವರು ಚಲಾಯಿಸುತ್ತಿದ್ದ ಆಕ್ಟಿವಾ ಮೊಟ್ಟೆತ್ತಡ್ಕ ತಲುಪುತ್ತಿದ್ದಂತೆ ವಿರುದ್ಧ ಧಿಕ್ಕಿನಿಂದ ಬಂದ ಲಾರಿ ನಡುವೆ ಡಿಕ್ಕಿ ಸಂಭವಿಸಿತ್ತು. ಈ ವೇಳೆ ಸ್ಕೂಟರ್ ಸವಾರ ನಾರಾಯಣ ನಾಯ್ಕ ಮತ್ತು ಸಹಸವಾರ ಕುರಿಯ ಬಳ್ಳಮಜಲು ನಿವಾಸಿ ವಸಂತ ರೈ ಅವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದರು.
ಡಿಕ್ಕಿಯ ರಭಸಕ್ಕೆ ನಾರಾಯಣ ನಾಯ್ಕ ಮತ್ತು ವಸಂತ ರೈ ಅವರು ಧರಿಸಿದ್ದ ಹೆಲ್ಮೆಟ್ ಹುಡಿಯಾಗಿದ್ದು, ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಅಲ್ಲದೇ ಲಾರಿ ಅವರಿಬ್ಬರ ದೇಹದ ಮೇಲೆ ಹರಿದು ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತೀವ್ರ ಗಾಯಗೊಂಡಿದ್ದ ಗಾಯಾಳುಗಳಿಬ್ಬರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಹ ಸವಾರ ವಸಂತ ರೈ ಚಿಕಿತ್ಸೆಗೆ ನಿನ್ನೆ ರಾತ್ರಿ ಸ್ಪಂಧಿಸದೆ ಮೃತಪಟ್ಟಿದ್ದಾರೆ.
