ಕಡಬ, ನ 10 : ನ. 9 ರಂದು ರಾತ್ರಿ ಕಡಬ ತಾಲೂಕಿನ ನೆಲ್ಯಾಡಿ ಪೇಟೆಯಲ್ಲಿ ಸರಣಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ.
ನೆಲ್ಯಾಡಿ ಪೇಟೆಯ ರಾಷ್ಟ್ರೀಯ ಹೆದ್ದಾರಿಯ ಮುಂಭಾಗದಲ್ಲಿರುವ ಎಂಟು ಅಂಗಡಿಗಳಲ್ಲಿ ಕಳ್ಳರು ತಮ್ಮ ಕೈಚಳಕವನ್ನು ಪ್ರದರ್ಶಿಸಿದ್ದಾರೆ.
ನೆಲ್ಯಾಡಿಯ ಸಾಯಿ ಮೆಡಿಕಲ್ಸ್, ಬೇಕರಿ, ಮಂಜುನಾಥ ತರಕಾರಿ ಅಂಗಡಿ, ಸೀಗಲ್ ಅಡಿಕೆ ಅಂಗಡಿ, ಆಕರ್ಶ್ ಫ್ಯಾನ್ಸಿ, ಅರುಣ್ ಸ್ವೀಟ್ಸ್ ಹಾಗೂ ಸುರಕ್ಷಾ ಫ್ಯಾನ್ಸಿ ಸ್ಟೋರ್ ಅಂಗಡಿಗಳಲ್ಲಿ ಕಳ್ಳತನ ನಡೆದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಸ್ಥಳದಲ್ಲಿನ ಸಿಸಿಟಿವಿ ಇತ್ಯಾದಿ ಪರಿಶೀಲನೆ ನಡೆಸುತ್ತಿದ್ದಾರೆ.
