Ad Widget

‍Big Breaking : ಪೆರ್ಲದಲ್ಲಿ ಭಾರೀ ಸ್ಪೋಟ

Ad Widget

Ad Widget

ಕಾಸರಗೋಡು ಜಿಲ್ಲೆಯ ಪೆರ್ಲ ಸಮೀಪದ ಬಜಕೂಡ್ಲು ಎಂಬಲ್ಲಿ ಬುಧವಾರ (ನ. 9) ಮಧ್ಯಾಹ್ನ ದೊಡ್ಡ ಸ್ಪೋಟ ಸಂಭವಿಸಿದ ಬಗ್ಗೆ ವರದಿಯಾಗಿದೆ.

Ad Widget

Ad Widget

Ad Widget

Ad Widget

ಬಜಕೂಡ್ಲು ಸಮೀಪದದ ಕುರಡ್ಕ ಬಳಿ ಚಪ್ಪಲಿ ಮ್ಯಾನುಪ್ಯಾಕ್ಚರಿಂಗ್ ಘಟಕದಲ್ಲಿ ಈ ಸ್ಪೋಟ ಸಂಭವಿಸಿದೆ. ಈ ಸಂದರ್ಭ ಪ್ಯಾಕ್ಟರಿಯಲ್ಲಿ 30 ರಷ್ಟು ಮಂದಿ ಕೆಲಸಗಾರರು ಕೆಲಸ ಮಾಡುತಿದ್ದರು.

Ad Widget

Ad Widget

Ad Widget

Ad Widget

ಅದರೇ ಸ್ಪೋಟದ ವೇಳೆ ಯಾರಿಗೂ ಯಾವುದೇ ತೊಂದರೆ ಸಂಭವಿಸಿಲ್ಲ. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಬುಧವಾರ ಮದ್ಯಾಹ್ನ ಒಂದು ಘಂಟೆ ವೇಳೆ ಕುರಡ್ಕ ಪರಿಸರದಲ್ಲಿ ಭಾರೀ ಸದ್ದು ಕೇಳಿ ಬಂದಿದ್ದು, ಇದು ಸ್ಥಳೀಯ ಪರಿಸರದಲ್ಲಿ ಭಯದ ವಾತಾವರಣ ಕ್ಕೆ ಕಾರಣವಾಯಿತು.
ತಯಾರಿಕಾ ಘಟಕದಲ್ಲಿ ಬಳಸ್ಪಳಡುವ ರಾಸಾಯನಿಕ ದಿಂದ ಈ ಸ್ಪೋಟ ಉಂಟಾಗಿದೆ ಎಂದು ಶಂಕಿಸಲಾಗಿದೆ.

Ad Widget

Ad Widget

ತಯಾರಿಕ ಘಟಕದಲ್ಲಿದ್ದ ಪ್ಲಾಸ್ಟಿಕ್ ಡ್ರಮ್ ಇದ್ದಕ್ಕಿದ್ದಂತೆ ಸಿಡಿದು ಪ್ಯಾಕ್ಟರಿಯ ಮೇಲ್ಚಾವಣಿಗೆ ಹಾಸಲಾದ ತಗಡು ಶೀಟ್ ಗೆ ಬಡಿದು, ಅದನ್ನು ಛಿದ್ರಗೊಳಿಸಿ ಮತ್ತೂ ಹಲವು ಮೀಟರ್ ಎತ್ತರಕ್ಕೆ ಚಿಮ್ಮಿದೆ. ಬಳಿಕ ಪ್ಯಾಕ್ಟರಿಯಿಂದ 100 ಮೀ ದೂರದ ಖಾಸಗಿ ವ್ಯಕ್ತಿಗೆ ಸೇರಿದ ಭೂಮಿಗೆ ಹೋಗಿ ಬಿದ್ದಿದೆ. ಘಟನೆಯಲ್ಲಿ ಮೇಲ್ಛಾವಣಿ ಸಂಪೂರ್ಣವಾಗಿ ಹಾನಿಯಾಗಿದೆ.

ಪ್ಲಾಸ್ಡಿಕ್ ಡ್ರಮ್ ಮೇಲ್ಛಾವಣಿಯ ನ್ನು ಸೀಳಿ ಭಾನೆತ್ತರಕ್ಕೆ ಸಿಡಿಯಲು ಅದರಲ್ಲಿ ಬಳಸಿದ ರಾಸಾಯನಿಕ ವೇ ಕಾರಣ ಎಂದು ಕಂಡು ಕೊಂಡಿರು ಸಾರ್ವಜನಿಕರು ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ಯಾಕ್ಟರಿಯ ಆರಂಭದ ವೇಳೆ ಇದರಲ್ಲಿ ರಾಸಾಯನಿಕ ಬಳಸಲಾಗುತ್ತದೆ ಎಂಬ ಕಾರಣಕ್ಕೆ ಇದರ ಸ್ಥಾಪನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ ಎದುರಾಗಿತ್ತು. ಈ ವೇಳೆ ರಾಸಾಯನಿಕ ಬಳಸಲಾಗುವುದಿಲ್ಲ ಎಂಬ ಅಶ್ವಾಸನೆಯನ್ನು ಪ್ಯಾಕ್ಟರಿಯ ಅಡಳಿತ ಮಂಡಳಿ ನೀಡಿತ್ತು ಎನ್ನಲಾಗಿದೆ.

ಆದರೇ ಇದೀಗ ಉತ್ತರ ಭಾರತೀಯ ಮೂಲದ ಕೆಲಸಗಾರರನ್ನು ಬಳಸಿಕೊಂಡು ಗುಪ್ತವಾಗಿ ರಾಸಾಯನಿಕ ಬಳಸುತಿದ್ದಾರೆ. ಇದು ಇದೇ ರೀತಿಯ ಅನಾಹುತಗಳಿಗೆ ಕಾರಣವಾಗಬಹುದು ಎಂಬ ಅತಂಕ ವ್ಯಕ್ತಪಡಿಸಿ ಪ್ರತಿಭಟನೆಯ ಎಚ್ಚರಿಕೆಯನ್ನು ಸ್ಥಳೀಯರು ನೀಡಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: