ಸುಬ್ರಹ್ಮಣ್ಯ, ನ. 9 : ವೀರ್ ಸಾರ್ವಕರ್ ಸ್ಮಾರಕ ನಿರ್ಮಾಣಕ್ಕೆ ವಿರೋಧಿಸುತ್ತಾರೆ ಅಂತಾದ್ರೆ ಅವರು ದೇಶವನ್ನೆ ವಿರೋಧಿಸುತ್ತಾರೆ ಎಂದು ಗೃಹ ಸಚಿವ ಅರಗ ಜ್ನಾನೇಂದ್ರ ತಿಳಿಸಿದ್ದಾರೆ. ಅವರು ಇತಿಹಾಸ ಪ್ರಸಿದ್ದ ನಾಗ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಬೇಟಿ ನೀಡಿದ ಬಳಿಕ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು
ವೀರ್ ಸಾರ್ವಕರ್ ಬಿಜೆಪಿಯವರಲ್ಲ, ಬಿಜೆಪಿ, ಅರ್ ಎಸ್ ಎಸ್ ಹುಟ್ಟೊಕೆ ಮುಂಚೆಯೇ ಸಾರ್ವಕರ್ ದೇಶಕ್ಕಾಗಿ ಹೋರಾಡಿದ, ಕರಿ ನೀರಿನ ಶಿಕ್ಷೆ ಅನುಭವಿಸಿದ ಸ್ವಾಂತತ್ರ್ಯ ಯೋಧ. ಅಂತಹವರ ಸ್ಮಾರಕ ಕಟ್ಟಲು ವಿರೋಧ ಮಾಡ್ತಾರೆ ಅಂದ್ರೆ ಅಂತಹವರು ದೇಶವನ್ನೆ ವಿರೋಧಿಸುತ್ತಾರೆ. ದೇಶದ ವ್ಯವಸ್ಥೆಯನ್ನೆ ವಿರೋಧಿಸಿದಂತೆ ಎಂದು ಹೇಳಿದರು
ಜನರು ಪೂಜ್ಯ ಭಾವನೆಯಿಂದ ಅವರನ್ನು ನೆನಪಿಸಿಕೊಳ್ಳಲು ಸ್ಮಾರಕ ಕಟ್ಟುತ್ತಾರೆ. ಹೊಸ ಪೀಳಿಗೆಗೆ ಅವರ ನೆನಪನ್ನು ಬದುಕಿಸಿಡುವ ಕೆಲಸ ಸ್ಮಾರಕದ ಮೂಲಕ ಆಗುತ್ತದೆ.ಅದಕ್ಕೂ ಅಡ್ಡಿ ಪಡಿಸದರೆ ದೇಶ ಕಟ್ಟುವುದು ಹೇಗೆ ? ಎಂದು ಅವರು ಪ್ರಶ್ನಿಸಿದರು.

ಸಾರ್ವಕರ್ ರವರ ಅದರ್ಶಗಳನ್ನು ತಿಳಿಸಲು ಅವರಿಂದ ಸತ್ಪ್ರೇರಣೆ ಪಡೆಯಲು ಸ್ಮಾರಕ ನಿರ್ಮಿಸಲಾಗುತ್ತದೆ. ಅದನ್ನು ಕಾಂಗ್ರೇಸ್ ವಿರೋಧಿಸುತ್ತದೆ ಎಂದಾದರೇ ಜನತೆ ಕಾಂಗ್ರೇಸನ್ನು ಜನರು ವಿರೋಧಿಸಬೇಕು . ಸ್ವಾತಂತ್ರ್ಯ ಹೋರಾಟಗಾರರನ್ನ, ದೇಶ ಭಕ್ತರನ್ನ ಕಾಂಗ್ರೇಸ್ ವಿರೋಧಿಸುತ್ತದೆ ಅಂದ್ರೆ ಇದರ ಅರ್ಥ ಏನೂ ಎಂದು ಅವರು ಪ್ರಶ್ನಿಸಿದರು
ಅರಗ ಜ್ನಾನೇಂದ್ರ ಹೇಳಿಕೆಯ ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ