ಪುತ್ತೂರು: ರಸ್ತೆ ದುರಸ್ತಿಗಾಗಿ ಪುತ್ತೂರು ಶಾಸಕ ಸಂಜೀವ ಮಠಂದೂರು ಕಾರು ತಡೆದು ನಂತರ ಬಂಧನಕ್ಕೊಳಗಾಗಿ ರದ್ದಾಂತ ನಡೆದ ಪ್ರದೇಶದ ಹಲವರು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಕೇಪುಲು -ಸಿದ್ಯಾಳ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಸುಮಾರು 20ಕ್ಕೂ ಅಧಿಕ ಮಂದಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.

ಶ್ರೀಮತಿ ಹೇಮಾ ಕೇಪುಳು,ರವೀಂದ್ರ ಸಿದ್ಯಾಳ, ಸುಂದರ ಸಿದ್ನಾಳ, ಇಂದಿರಾ ತಾರಿಗುಡ್ಡೆ,ಪ್ರಖ್ಯಾತ ತಾರಿಗುಡ್ಡೆ,ಮನೀಶ್ ತಾರಿಗುಡ್ಡೆ, ಸುದೀಪ್ ತಾರಿಗುಡ್ಡೆ,ಮಂಜುನಾಥ ತಾರಿಗುಡ್ಡೆ, ಪ್ರಭಾಕರ ತಾರಿಗುಡ್ಡೆ, ಹೇಮಚಂದ್ರ ಕೇಪುಳು,ಯೋಗೀಶ್ ಕೇಪುಳು, ಸುರೇಶ್ ಶೆಟ್ಟಿ ಅಂಜನಕೋಡಿ,ಮಂಜು ಸಿದ್ಯಾಳ,ಕಿಶೋರ್ ತಾರಿಗುಡ್ಡೆ,ನವೀನ ತಾರಿಗುಡ್ಡೆ, ದಿವ್ಯ ಕೇಪುಳು,ಸವಿತಾ ಸಿದ್ಯಾಳ,ಸತೀಶ ಸಿದ್ನಾಳ, ಗೋಪಾಲಕೃಷ್ಣ ನಾಯಕ ತಾರಿಗುಡ್ಡೆ,ವಿಲಿಯಮ್ಸ್ ತಾರಿಗುಡ್ಡೆ, ಮೊದಲಾದವರು ಬಿಜೆಪಿ ಮತ್ತು ಜೆಡಿಎಸ್ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ,ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಆಲಿ ಯವರು ಕಾಂಗ್ರೆಸ್ ಪಕ್ಷದ ಶಾಲುಗಳನ್ನು ಹಾಕಿ ಕಾಂಗ್ರೆಸ್ ಧ್ವಜವನ್ನು ನೀಡುವುದರ ಮೂಲಕ ಇವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಗೊಳಿಸಿದರು.
ಪುತ್ತೂರು ಶಾಸಕರು ಹೇಳುವುದೇ ಸುಳ್ಳು..! ನ್ಯಾಯ ಕೇಳಿದರನ್ನು ಬಂಧಿಸುವುದು ಯಾವಾ ನ್ಯಾಯ? 30 ವರ್ಷ ಬಿಜೆಪಿಯಲ್ಲಿದ್ದವಳು ನಾನು – ಹೋರಾಟ ಎಂದರೇ ಏನಂತ ಮಠಂದೂರಿಗೆ ತೋರಿಸುತ್ತೇನೆ : ಶಕುಂತಲ ಶೆಟ್ಟಿ
ಈ ಸಂದರ್ಭದಲ್ಲಿ ಮಾತನಾಡಿದ ಶಕುಂತಲಾ ಶೆಟ್ಟಿ ಶೆಟ್ಟಿಯವರು ಬಿಜೆಪಿಯ ದುರಾಡಳಿತದ ವಿರುದ್ಧ ಜನರು ತೀವ್ರ ಅಸಮಾಧಾನಗೊಂಡಿದ್ದಾರೆ,ಆದರೆ ಕೇಪುಳು ತಾರಿಗುಡ್ಡೆ ಪ್ರದೇಶದ ನಾಗರಿಕರು ತಮ್ಮ ರಸ್ತೆಯ ದುರವಸ್ಥೆಯನ್ನು ತಿಳಿಸಲು ಶಾಸಕರ ಕಾರನ್ನು ತಡೆದು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿರುತ್ತದೆ. ಕೇಪುಳು ತಾರಿಗುಡ್ಡೆ ಜನರಿಂದ ಪ್ರಾರಂಭವಾದ ಈ ಪ್ರತಿಭಟನೆಯು ಇನ್ನು ಮುಂದೆ ಇಡೀ ಕ್ಷೇತ್ರದಲ್ಲಿ ಬಿಜೆಪಿಯ ದುರಾಡಳಿತವನ್ನು ಪ್ರಶ್ನಿಸಲು ಜನರಿಗೆ ಪ್ರೇರಣೆ ನೀಡಿದಂತಾಗಿದೆ,
ಈ ಘಟನೆಯು ಜನರ ಮತವನ್ನು ಪಡೆದು ಜನರ ಸಮಸ್ಯೆಯನ್ನು ಪರಿಹರಿಸಲು ನಿರಾಸಕ್ತಿ ತೋರಿಸುವವರಿಗೆ ಒಂದು ಎಚ್ಚರಿಕೆ ಗಂಟೆಯಾಗಿರುತ್ತದೆ ಹಾಗೂ ಜನರು ಸಂಚರಿಸುವ ರಸ್ತೆಯನ್ನು ಅಭಿವೃದ್ಧಿಪಡಿಸದೆ ನಿರ್ಲಕ್ಷ ವಹಿಸಿರುವ ಶಾಸಕರಿಗೆ ಇಲ್ಲಿಯ ಜನ ತಕ್ಕ ಪಾಠ ಕಲಿಸಿರುತ್ತಾರೆ ಎಂದು ಹೇಳಿದರು.
ಅಭಿವೃದ್ಧಿಯ ಬಗ್ಗೆ ನಿರ್ಲಕ್ಷ ವಹಿಸಿರುವ ಶಾಸಕರು ತಮ್ಮ ಪಕ್ಷದ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಪಡಿಸಲು 10-20 ಜನ ಬ್ಯಾಂಡು ವಾಲಗಗಳ ಮೂಲಕ ಆಗಮಿಸುವುದಕ್ಕಿಂತ, ಹಾರೆ ಗುದ್ದಲಿ ತೆಗೆದುಕೊಂಡುಹೋಗಿ ರಸ್ತೆಯ ಗುಂಡಿಗೆ ಮಣ್ಣು ಹಾಕಿರುತ್ತಿದ್ದರೆ ಈ ಗಲಾಟೆ ಗೊಂದಲಗಳು ಉದ್ಭವ ಆಗುತ್ತಿರಲಿಲ್ಲ ಎಂದು ಹೇಳಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಪುತ್ತೂರಿನ ಶಾಸಕರು ಹಾಗೂ ನಗರಸಭೆಯ ಬಿಜೆಪಿ ಆಡಳಿತ ಜನರ ತೆರಿಗೆಯ ಹಣವನ್ನು ದುರುಪಯೋಗ ಪಡಿಸುವುದರಲ್ಲಿ ನಿರತರಾಗಿರುತ್ತಾರೆ.
ಜನಪರವಾದ ಯಾವುದೇ ಕೆಲಸಗಳನ್ನು ಇವರು ಮಾಡುತ್ತಿಲ್ಲ,ಕೆಲವೇ ಕೆಲವರ ಹಿತಾಸಕ್ತಿಗಾಗಿ ಇವರು ಕೆಲಸವನ್ನು ಮಾಡುತ್ತಿದ್ದಾರೆ,
ಇವರ ಕಾರ್ಯವೈಖರಿ ವಿರುದ್ಧ ಕೇಪುಳು ತಾರಿಗುಡ್ಡೆಯ ಜನರಂತೆ ಎಲ್ಲರೂ ತಮ್ಮ ತಮ್ಮ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವ ಕೆಲಸ ಮಾಡಬೇಕು ಎಂದು ಹೇಳಿದರು.
ಘಟನೆ ಖಂಡಿಸಿ ಕಾಂಗ್ರೇಸ್ ನಾಯಕ ಅಮಲ ರಾಮಚಂದ್ರ ಪತ್ರಿಕಾಗೋಷ್ಠಿ

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರು ಮಾತನಾಡಿ ಬ್ಲಾಕ್ ಕಾಂಗ್ರೆಸ್ ಮತ್ತು ನಗರ ಕಾಂಗ್ರೆಸ್ ಸಮಿತಿಯು ಕಾರ್ಯಕರ್ತರ ಧ್ವನಿಯಾಗಿ ಕೆಲಸ ಮಾಡಲಿದೆ,ಪಕ್ಷದಲ್ಲಿ ಕಾರ್ಯಕರ್ತರೇ ದೊಡ್ಡ ಶಕ್ತಿ ಹೊರತು, ಬೇರೆ ಯಾರೂ ಅಲ್ಲ, ಸಂಘಟನೆಯಲ್ಲಿ ತೊಡಗಿಸಿಕೊಳ್ಳದೆ,ಪಕ್ಷದ ಕೆಲಸವನ್ನು ಮಾಡದೆ ಇರುವವರಿಗೆ ಇನ್ನು ಮುಂದೆ ಪಕ್ಷದಲ್ಲಿ ಯಾವುದೇ ಮಾನ್ಯತೆ ನೀಡಲಾಗುವುದಿಲ್ಲ,
ಪಕ್ಷದಲ್ಲಿ ಕಾರ್ಯಕರ್ತರು ದೊಡ್ಡವರು ಹೊರತು ಯಾವುದೇ ಒಬ್ಬ ವ್ಯಕ್ತಿ ದೊಡ್ಡವನಲ್ಲ ಎಂದು ಹೇಳಿದ ಅವರು ಕಾರ್ಯ ಕರ್ತರೊಂದಿಗೆ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಇಂದಿನ ಈ ಸಭೆಯಲ್ಲಿ ಹೆಚ್ಚಿನ ಕಾರ್ಯಕರ್ತರು ಸೇರಿದ್ದು, ಈ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ,ಸ್ಥಳೀಯ ಪಕ್ಷದ ಮುಖಂಡರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.
ಕಾರ್ಯ ಕರ್ತರ ಸಭೆಯನ್ನುದ್ದೇಶಿಸಿ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷರಾದ ನೂರುದ್ದೀನ್ ಸಾಲ್ಮರ, ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ವಿ ಎಚ್ ಎ ಶಕೂರ್ ಹಾಜಿ ಮಾತನಾಡಿದರು.
ಈ ಸಭೆಯಲ್ಲಿ ಜಿಲ್ಲಾ ಸೇವಾದಳದ ಅಧ್ಯಕ್ಷ ಜೋಕಿಂ ಡಿ ಸೋಜಾ,ಬ್ಲಾಕ್ ಪ್ರದಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ,ಬ್ಲಾಕ್ ಎಸ್ಸಿ ಘಟಕದ ಅಧ್ಯಕ್ಷರಾದ ಕೇಶವ ಪಡೀಲ್,ಬ್ಲಾಕ್ ಕಾರ್ಮಿಕ ಅಧ್ಯಕ್ಷರಾದ ಶರನ್ ಸಿಕ್ವೇರಾ,ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷರಾದ ಸಂತೋಷ್ ಭಂಡಾರಿ ಚಿಲ್ಮೆತ್ತಾರ್,ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಶಾರದಾ ಅರಸ್,ಮಾಜಿ ಅಧ್ಯಕ್ಷರಾದ ಶ್ರೀಮತಿ ವಿಶಾಲಾಕ್ಷಿ ಬನ್ನೂರು,ನಗರ ಕಾಂಗ್ರೆಸ್ಸಿನ ಉಪಾಧ್ಯಕ್ಷರಾದ ವೇಣುಗೋಪಾಲ ಮಣಿಯಾಣಿ, ಮಂಜು ಕೆಮ್ಮಾಯಿ, ವರ್ಗೀಸ್ ಡಯಾಸ್ ಮುದ್ದೋಡಿ,ನಾರಾಯಣ ಕುಡ್ವ, ಪ್ರಧಾನ ಕಾರ್ಯದರ್ಶಿಗಳಾದ ದಾಮೋದರ್ ಬಂಡಾರ್ಕರ್,ಅಬ್ದುಲ್ ರಶೀದ್ ಮುರ,ಸಂಘಟನ ಕಾರ್ಯದರ್ಶಿ ಸಂತು ಲಾರೆನ್ಸ್, ಮಾಜಿ ಪುರಸಭಾ ಸದಸ್ಯ ಇಸ್ಮಾಯಿಲ್ ಸಾಲ್ಮರ,ಜಿಲ್ಲಾ ಸೇವಾದಳದ ಸಿದ್ದಿಕ್ ಸುಲ್ತಾನ್ ಸ್ಥಳೀಯ ಮುಖಂಡರಾದ ಹರೀಶ್ ಪಕ್ಕಳ, ರಾಧಾಕೃಷ್ಣ ಶೆಟ್ಟಿ, ಶಿವಾನಂದ ಶೆಟ್ಟಿ ಅಂಜನಕೋಡಿ, ಯುವ ಕಾಂಗ್ರೆಸ್ ನ ತವೀದ್ ತಾರಿಗುಡ್ಡೆ, ಮಮ್ಮುಟ್ಟಿ ತಾರಿಗುಡ್ಡೆ, ಬಷೀರ್ ಜನತಾ, ಫಾರುಕ್ ಜನತಾ, ಅಬ್ದುಲ್ ರಹಿಮಾನ್ ತಾರಿಗುಡ್ಡೆ, ಇಬ್ರಾಹಿಂ ಶಾಂತಿನಗರ, ಆಸಿಫ್ ತಾರಿಗುಡ್ಡೆ, ಮುನ್ನ ಸಾಲ್ಮರ,ಮೋಹಿನಿ ಶೆಟ್ಟಿ ತಾರಿಗುಡ್ಡೆ, ಮುಂಡಪ್ಪ ಜಿಡೆಕಲ್ಲು, ನಿಶಿತಾ ಶೆಟ್ಟಿ, ಭವಿತ್ ಶೆಟ್ಟಿ, ಅವಿನಾಶ್ ಶೆಟ್ಟಿ, ಪ್ರಜ್ವಲ್ ರೈ, ಪ್ರದೀಪ್ ಕೇಪುಳು, ರಾಮ್ಸನ್, ರವಿ ಕೇಪುಳು ಮೊದಲಾದವರು ಉಪಸ್ಥಿತರಿದ್ದರು.
ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಯೂಸುಫ್ ಸಾಲ್ಮರ ಸ್ವಾಗತಿಸಿದರು, ನಗರ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಶರತ್ ಕೇಪುಳು ವಂದಿಸಿದರು, ಇಲ್ಯಾಸ್ ನೆಲ್ಯಾಡಿ ಕಾರ್ಯಕ್ರಮ ನಿರೂಪಣೆ ಮಾಡಿದರು.