Connect with us

ವರದಿಗಳು

ಕೊಡವ ಮದುವೆಯಲ್ಲಿ ಶಾಂಪೇನ್, ಕೇಕ್, ಮದುಮಗ ಗಡ್ಡ ಬಿಡುವುದು ನಿಷೇಧ – ಹಲವು ಆಚರಣೆಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಕೈಗೊಂಡ ಕೊಡವ ಸಮಾಜ

Ad Widget

ಮಡಿಕೇರಿ: ಮದುವೆ ಸಮಾರಂಭ ಹಾಗೂ ಇತರೆ ಆಚರಣೆಗಳ ಸಂದರ್ಭದಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಸೇವನೆಯನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಕೊಡವ ಸಮಾಜ ನಿಷೇಧಿಸಿದೆ. ಈ ಪದ್ಧತಿಗಳು ಕೊಡವ ಸಂಸ್ಕೃತಿಯ ಸಂಪ್ರದಾಯವಲ್ಲ ಎಂದು ಅದು ಹೇಳಿದೆ.
ಮದುವೆಯ ಗಂಡುಗಳು ಗಡ್ಡ ಬಿಡುವಂತಿಲ್ಲ. ಮದುವೆ ಹಾಗೂ ಸಮುದಾಯದ ಇತರೆ ಕಾರ್ಯಕ್ರಮಗಳಲ್ಲಿ ಸಂಪ್ರದಾಯವಲ್ಲದ ಆಚರಣೆಗಳನ್ನು ಇನ್ನು ಮುಂದೆ ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗಿದೆ ಎಂದು ಕೂಡ ಕೊಡವ ಸಮಾಜ ಹೇಳಿದೆ.

Ad Widget

Ad Widget

Ad Widget

Ad Widget


ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಮದುವೆ ಹಾಗೂ ಇತರೆ ಸಮಾರಂಭಗಳನ್ನು ರಾತ್ರಿ 10 ಗಂಟೆಯ ಒಳಗೆ ಮುಗಿಸಬೇಕು ಎಂದು ಭಾನುವಾರ ನಡೆದ ತನ್ನ 99ನೇ ಸಾಮಾನ್ಯ ಸಭೆಯ ವೇಳೆ ಕೊಡವ ಸಮಾಜವು ಸಂಬಂಧಿತ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಅಧ್ಯಕ್ಷ ವಂಚಿರ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 15 ಮಂದಿ ನಿರ್ದೇಶಕರು ಮತ್ತು 357 ಮಂದಿ ಸದಸ್ಯರು ಭಾಗವಹಿಸಿದ್ದರು.

Ad Widget

Ad Widget

ನಿಯಮಗಳು ಹೀಗಿವೆ:

Ad Widget

Ad Widget

ಮದುಮಗ ತನ್ನ ಗಡ್ಡವನ್ನು ಸಂಪೂರ್ಣವಾಗಿ ಶೇವ್ ಮಾಡಿರಬೇಕು. ನವ ವಿವಾಹಿತೆಯು ತನ್ನ ತಲೆಗೂದಲನ್ನು ಸಡಿಲವಾಗಿ ಬಿಡಬಾರದು. ಗಂಗಾ ಪೂಜೆ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಶಾಂಪೇನ್ ಬಾಟಲಿಗಳನ್ನು ತೆರೆಯಬಾರದು. ಕೇಕ್ ಕತ್ತರಿಸಬಾರದು. ಹೂವಿನ ದಳಗಳನ್ನು ಸುರಿಸುವುದನ್ನು ಮಾಡಬಾರದು. ನಾದಸ್ವರ ಮೇಳಗಳಲ್ಲಿನ ವಾದಕರು ‘ದೇವತಾ’ ಸ್ವರವನ್ನು ನುಡಿಸಬಾರದು.

Ad Widget

Ad Widget

ಕೊಡವ ಸಮುದಾಯದ ಯುವತಿಯರು ಬೇರೆ ಸಮುದಾಯದ ಯುವಕರನ್ನು ಮದುವೆಯಾದರೆ, ಅವರು ನಂತರ ಕೊಡವ ದಿರಿಸು ತೊಡಲು ಅವಕಾಶ ನೀಡುವಂತಿಲ್ಲ ಮತ್ತು ವಧುವಿನ ತಾಯಂದಿರು ಪತ್ತಾಕ್ ಆಭರಣವನ್ನು ಅವರಿಗೆ ತೊಡಿಸಬಾರದು ಎಂದೂ ಈ ಸಭೆಯಲ್ಲಿ ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.

‘ಕೊಡವರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ ಹೊಂದಿದ್ದಾರೆ. ನಮ್ಮ ಸಂಸ್ಕೃತಿ ಉಳಿದರೆ ಮಾತ್ರವೇ ನಾವೂ ಉಳಿಯುತ್ತೇವೆ. ಮದುವೆ ಸಮಾರಂಭಗಳಲ್ಲಿ ಕೇಕ್ ಕತ್ತರಿಸುವುದು ಮತ್ತು ಶಾಂಪೇನ್ ಹಂಚಿಕೊಳ್ಳುವುದು ನಮ್ಮ ಸಂಸ್ಕೃತಿ ಅಲ್ಲ. ಹೀಗಾಗಿ ಈ ಸಂಬಂಧ ವಾರ್ಷಿಕ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ’ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟಕ್ಮಾಡ ರಾಜೀವ್ ಬೋಪಯ್ಯ ಹೇಳಿದ್ದಾರೆ.

Click to comment

Leave a Reply

ಅಂತರ ರಾಜ್ಯ

Google Ad-ಗೂಗಲ್ ಆಡ್ ಗೆ 3 ತಿಂಗಳಿನಲ್ಲಿ 39 ಕೋಟಿ ರೂ. ಖರ್ಚು ಮಾಡಿದ ಬಿಜೆಪಿ

Ad Widget

ಹೊಸದಿಲ್ಲಿ : ಶೋಧ ಜಾಲತಾಣ ಗೂಗಲ್ ನಲ್ಲಿ ಈ ವರ್ಷದ ಜನವರಿ 1ರಿಂದೀಚೆಗೆ ಜೆಪಿಯು ತನ್ನ 81,874 ರಾಜಕೀಯ ಜಾಹೀರಾತುಗಳಿಗಾಗಿ 39 ಕೋಟಿ ರೂ. ವೆಚ್ಚ ಮಾಡಿದೆ ಎಂದು ಗೂಗಲ್ ನ ಜಾಹೀರಾತು ಪಾರದರ್ಶಕತಾ ಕೇಂದ್ರದ ದತ್ತಾಂಶಗಳು ಪ್ರದರ್ಶಿಸಿವೆ.

Ad Widget

Ad Widget

Ad Widget

Ad Widget

ಭಾರತದಲ್ಲಿ ರಾಜಕೀಯ ಜಾಹೀರಾತುಗಳಿಗಾಗಿ ಈ ವರ್ಷ ಒಟ್ಟು ನಿಧಿಯ ಶೇ.32.8ರಷ್ಟನ್ನು ಮಿಸಲಿಟ್ಟಿದ್ದು, ಈ ವರ್ಷ ರಾಜಕೀಯ ಜಾಹೀರಾತುಗಳಿಗಾಗಿ ಕೇಂದ್ರ ಸರಕಾರದ ನೋಡಲ್‌ ಜಾಹೀರಾತು ಏಜೆನ್ಸಿಯಾದ ಕೇಂದ್ರೀಯ ಸಂವಹನ ಇಲಾಖೆಯು 32 ಕೋಟಿ ರೂ. ವ್ಯಯಿಸಿದೆ.

Ad Widget

Ad Widget

ಭಾರತೀಯ ರಾಜಕೀಯ ಕ್ರಿಯಾ ಸಮಿತಿ ಸಂಸ್ಥೆಯ ರಾಜಕೀಯ ಕಾರ್ಯತಂತ್ರ ನಿರ್ವಹಣಾ ಕಂಪೆನಿಯಾದ ಇಂಡಿಯನ್ ಪಿಎಸಿ ಕನ್ಸಲಿಂಗ್ ಪ್ರೈ. ಲಿಮಿಟೆಡ್ 7.25 ಕೋಟಿ ರೂ. ವೆಚ್ಚ ಮಾಡಿರುವುದಾಗಿ ದತ್ತಾಂಶಗಳು ಪ್ರದರ್ಶಿಸಿವೆ. ಈ ಕಂಪೆನಿಯು ಪಶ್ಚಿಮಬಂಗಾಳದಲ್ಲಿ ಟಿಎಂಸಿಗಾಗಿ ಹಾಗೂ ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ ಕಾಂಗ್ರೆಸ್ ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದಾಗಿ ಇಕನಾಮಿಕ್ ಟೈಸ್ ವರದಿ ತಿಳಿಸಿದೆ.

Ad Widget

Ad Widget

ಜನವರಿ 1ರಿಂದೀಚೆಗೆ ಬಿಜು ಜನತಾದಳವು 24 ಕೋಟಿ ರೂಪಾಯಿನ್ನು 144 ಜಾಹೀರಾತುಗಳಿಗಾಗಿ ವ್ಯಯಿಸಿದೆ. ಗೂಗಲ್‌ನಲ್ಲಿ ಜಾಹೀರಾತುಗಳಿಗಾಗಿ ಬಿಜೆಪಿಯು ಬಹುತೇಕ ವೆಚ್ಚವನ್ನು ಫೆಬ್ರವರಿ ಹಾಗೂ ಮಾರ್ಚ್‌ನಲ್ಲಿ ನಡೆಸಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ ತನ್ನ ಬಹುತೇಕ ಹಣವನ್ನು ಎಪ್ರಿಲ್ ನಲ್ಲಿ ಜಾಹೀರಾತುಗಳಿಗಾಗಿ ವ್ಯಯಿಸಿದೆ.

Ad Widget

Ad Widget

ಬಿಜೆಪಿಯು ಬಹುತೇಕ ಹಣವನ್ನು ಒಡಿಶಾ , ಉತ್ತರಪ್ರದೇಶ, ಹಾಗೂ ಬಿಹಾರದಲ್ಲಿ ಖರ್ಚು ಮಾಡಿದರೆ, ಮಹಾರಾಷ್ಟ್ರ, ಬಿಹಾರ ಹಾಗೂ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವು ಹೆಚ್ಚಿನ ವೆಚ್ಚ ಮಾಡಿದೆ ಎಂದು ಇಕನಾಮಿಕ್ ಟೈಸ್ ವರದಿ ತಿಳಿಸಿದೆ.

Continue Reading

ಅಂತರ ರಾಜ್ಯ

Maruti Suzuki-ಭಾರತೀಯರ ಬಹು ಬೇಡಿಕೆಯ ಮಾಡೆಲ್ ಗಳಾದ ಮಾರುತಿ ಸುಜುಕಿ ಸ್ವಿಫ್ಟ್, ಗ್ರ್ಯಾಂಡ್ ವಿಟಾರಾ ಕಾರುಗಳ ಬೆಲೆ ಹೆಚ್ಚಳ

Ad Widget

ಮುಂಬೈ: ಭಾರತದ ಅತಿದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ತನ್ನ ಜನಪ್ರಿಯ ಮಾದರಿಗಳಾದ ಸ್ವಿಫ್ಟ್ ಮತ್ತು ಗ್ರ್ಯಾಂಡ್ ವಿಟಾರಾದ ಆಯ್ದ ಮಾಡಲ್ ಗಳ ಬೆಲೆ ಏರಿಕೆ ಮಾಡಿದ್ದು, ನೂತನ ದರಗಳು ತಕ್ಷಣವೇ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ.

Ad Widget

Ad Widget

Ad Widget

Ad Widget

2024 ರ ಜನವರಿಯಲ್ಲಿ ಕಂಪನಿಯು ತನ್ನ ಮಾದರಿ ಶ್ರೇಣಿಯಾದ್ಯಂತ ಬೆಲೆಗಳನ್ನು ಹೆಚ್ಚಿಸಿತ್ತು. ಇದೀಗ ಕೆಲವೇ ತಿಂಗಳುಗಳ ಅಂತರದಲ್ಲಿ ಮತ್ತೆ ದರ ಏರಿಕೆ ಮಾಡಿದೆ. ಹೆಚ್ಚುತ್ತಿರುವ ಹಣದುಬ್ಬರದ ಒತ್ತಡಗಳು ಮತ್ತು ಹೆಚ್ಚಿದ ನಿರ್ಮಾಣ ವೆಚ್ಚಗಳನ್ನು ಉಲ್ಲೇಖಿಸಿ ಸಂಸ್ಥೆ ಈ ದರ ಏರಿಕೆ ಮಾಡಿದೆ ಎಂದು ಹೇಳಲಾಗಿದೆ.

Ad Widget

Ad Widget

ಸಂಸ್ಥೆಯ ಮೂಲಗಳ ಪ್ರಕಾರ ಮಾರುತಿ ಸುಜುಕಿ ಸಂಸ್ಥೆಯ ಜನಪ್ರಿಯ ಮಾದರಿಗಳಲ್ಲಿ ಪ್ರಮುಖವಾದ ಸ್ವಿಫ್ಟ್ ಕಾರುಗಳ ಬೆಲೆಗಳನ್ನು 25,000 ರೂ.ವರೆಗೆ ಹೆಚ್ಚಿಸಲಾಗಿದ್ದು, ಗ್ರಾಂಡ್ ವಿಟಾರಾ ಸಿಗ್ಮಾ ಮಾಡೆಲ್ ನ ಬೆಲೆಯಲ್ಲಿ 19,000 ರೂ ಏರಿಕೆಯಾಗಿದೆ ಎಂದು ಹೇಳಲಾಗಿದೆ.

Ad Widget

Ad Widget

ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸ್ಥೆ, ‘ನಾವು ಸ್ವಲ್ಪ ಸಮಯದವರೆಗೆ ಹೆಚ್ಚಿದ ಇನ್‌ಪುಟ್ ಮತ್ತು ನಿರ್ಮಾಣ ವೆಚ್ಚವನ್ನು ಸರಿದೂಗಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಗಳು ನಮ್ಮ ಗ್ರಾಹಕರಿಗೆ ಕೆಲವು ಬೆಲೆ ಏರಿಕೆ ಹೇರಲು ಒತ್ತಾಯಿಸಿದೆ. ಬೆಲೆ ಹೆಚ್ಚಳವು ಕೆಲವು ಮಾದರಿಗಳಲ್ಲಿ ಗಣನೀಯವಾಗಿರುತ್ತದೆ ಎಂದು ಹೇಳಿದೆ.

Ad Widget

Ad Widget

ಸ್ವಿಫ್ಟ್, ಕಾರುಗಳ ಬೆಲೆ ಏರಿಕೆಯಿಂದಾಗಿ ಅದರ ಮಾರಾಟದ ಮೇಲೆ ಗಮನಾರ್ಹ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಇದು ಒಂದಾಗಿದೆ. ಕಾಂಪ್ಯಾಕ್ಟ್ SUV ವಿಭಾಗದಲ್ಲಿ ತುಲನಾತ್ಮಕವಾಗಿ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಿದ್ದ ಗ್ರಾಂಡ್ ವಿಟಾರಾ, ಹೆಚ್ಚಿದ ಬೆಲೆಗಳೊಂದಿಗೆ ಖರೀದಿದಾರರನ್ನು ಆಕರ್ಷಿಸುವಲ್ಲಿ ಸವಾಲುಗಳನ್ನು ಎದುರಿಸಬಹುದು.

ಮುಖ್ಯವಾಗಿ ಕಚ್ಚಾ ವಸ್ತುಗಳ ಬೆಲೆ ಏರಿಕೆ, ಜಾಗತಿಕ ಪೂರೈಕೆ ಸರಪಳಿ ಅಡೆತಡೆಗಳು ಸೇರಿದಂತೆ ಒಟ್ಟಾರೆ ಆರ್ಥಿಕ ಮಂದಗತಿ ಸೇರಿದಂತೆ ವಿವಿಧ ಅಂಶಗಳ ಪರಿಣಾಮವಾಗಿ ಬೆಲೆ ಏರಿಕೆಯಾಗಬಹುದು. ಭಾರತೀಯ ಆಟೋಮೊಬೈಲ್ ಉದ್ಯಮವು ಕೆಲವು ಸಮಯದಿಂದ ಈ ಸಮಸ್ಯೆಗಳನ್ನು ಎದುರಿಸುತ್ತಿದೆ. ಮಾರುತಿ ಸುಜುಕಿಯ ಇತ್ತೀಚಿನ ಬೆಲೆ ಏರಿಕೆ ಕ್ರಮವು ಸವಾಲಿನ ಮಾರುಕಟ್ಟೆ ಪರಿಸ್ಥಿತಿಗಳ ಪ್ರತಿಬಿಂಬವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಂಸ್ಥೆಯು ಈ ಮಾದರಿಯ ಕಾರುಗಳ ದರ ಏರಿಕೆಗೆ ಏಕೆ ಮುಂದಾಗಿದೆ ಎಂಬುದು ಸ್ಪಷ್ಟವಾಗಿಲ್ಲ, ಆದರೆ ಹ್ಯಾಚ್‌ಬ್ಯಾಕ್ ವಿಭಾಗ (ಸ್ವಿಫ್ಟ್) ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗ (ಗ್ರ್ಯಾಂಡ್ ವಿಟಾರಾ) ವಿಶಿಷ್ಟ ಸವಾಲುಗಳನ್ನು ಎದುರಿಸುತ್ತಿದೆ, ಉದಾಹರಣೆಗೆ ಹೆಚ್ಚಿದ ಸ್ಪರ್ಧೆ ಅಥವಾ ಗ್ರಾಹಕರ ಆದ್ಯತೆಗಳನ್ನು ಬದಲಾಯಿಸುವುದು, ಈ ನಿರ್ದಿಷ್ಟ ಮಾದರಿಗಳಿಗೆ ಬೆಲೆಗಳನ್ನು ಹೆಚ್ಚಿಸುವ ನಿರ್ಧಾರದ ಮೇಲೆ ಪ್ರಭಾವ ಬೀರಬಹುದು ಎಂದು ಹೇಳಲಾಗಿದೆ.

Continue Reading

ಅಂತರ ರಾಜ್ಯ

Rahul Gandhi-ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೇ ಪ.ಜಾ., ಪ.ಪಂ. ಹಾಗೂ ಹಿಂದುಳಿದ ವರ್ಗದ ಮಹಿಳೆಯರ ಖಾತೆಗೆ ವಾರ್ಷಿಕ 1 ಲಕ್ಷ ರೂ. ವರ್ಗಾವಣೆ : ರಾಹುಲ್ ಗಾಂಧಿ ಘೋಷಣೆ

Ad Widget

ಸಿಯೋನಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತನ್ನ ಪಕ್ಷ ಜಯ ಗಳಿಸುವ ಆತ್ಮವಿಶ್ವಾಸವನ್ನು ಸೋಮವಾರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೂತನ ಸರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಮಹಿಳೆಯರ ಖಾತೆಗಳಿಗೆ ವಾರ್ಷಿಕ 1 ಲಕ್ಷ ರೂ. ವರ್ಗಾಯಿಸಲಿದೆ ಎಂದು ಹೇಳಿದ್ದಾರೆ.

Ad Widget

Ad Widget

Ad Widget

Ad Widget

ಮಂದ್ಲಾ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಸಿಯೋನಿ ಜಿಲ್ಲೆಯ ಧನೋರಾದಲ್ಲಿ Rallyಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ನಿರುದ್ಯೋಗಿ ಯುವ ಜನರಿಗೆ ಖಾತರಿಪಡಿಸಿದ ಶಿಷ್ಯ ವೃತ್ತಿ ಒದಗಿಸುವ ಭರವಸೆ ನೀಡಿದರು.

Ad Widget

Ad Widget

ಮೂರರಿಂದ ನಾಲ್ಕು ಕ್ರಾಂತಿಕಾರಿ ಹೆಜ್ಜೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಬಡ ಕುಟುಂಬಗಳ ಮಹಿಳೆಯರ ಬ್ಯಾಂಕ್‌ಖಾತೆಗಳಿಗೆ 1 ಲಕ್ಷ ರೂ. ವರ್ಗಾಯಿಸುತ್ತೇವೆ. ಈ ಮೂಲಕ ನಾವು ಪ್ರತಿ ತಿಂಗಳು ಅವರ ಖಾತೆಗಳಿಗೆ ಸಾವಿರಾರು ರೂಪಾಯಿ ವರ್ಗಾಯಿಸಲಿದ್ದೇವೆ” ಎಂದು ಅವರು ಹೇಳಿದ್ದಾರೆ.

Ad Widget

Ad Widget

“ಕೇಂದ್ರದಲ್ಲಿ ಸರಕಾರ ರೂಪಿಸಿದ ಬಳಿಕ ನಾವು ಉದ್ಯೋಗದಲ್ಲಿ ಗುತ್ತಿಗೆ ವ್ಯವಸ್ಥೆಯನ್ನು ರದ್ದುಗೊಳಿಸಲಿದ್ದೇವೆ. ಸಾರ್ವಜನಿಕ ವಲಯದಲ್ಲಿ 30 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಿದ್ದೇವೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೆ ಕಾನೂನು ರೂಪಿಸಲಿದ್ದೇವೆ” ಎಂದು ಅವರು ತಿಳಿಸಿದರು.

Ad Widget

Ad Widget

ಸರಕಾರಿ ಹಾಗೂ ಖಾಸಗಿ ವಲಯದಲ್ಲಿ ದೇಶದ ನಿರುದ್ಯೋಗಿ ಯುವ ಜನರಿಗೆ ಒಂದು ವರ್ಷ ಶಿಷ್ಯ ವೃತ್ತಿ ಹಾಗೂ ಈ ಅವಧಿಯಲ್ಲಿ 1 ಲಕ್ಷ ರೂ. ಭತ್ತೆಯ ಖಾತರಿ ನೀಡುವ ನೂತನ ಕಾನೂನನ್ನು ನಾವು ಜಾರಿಗೆ ತರಲಿದ್ದೇವೆ” ಎಂದು ರಾಹುಲ್ ಗಾಂಧಿ ಹೇಳಿದರು.

ಬುಡಕಟ್ಟು ಜನರನ್ನು ಆದಿವಾಸಿ ಎಂದು ಕರೆಯುವ ಬದಲು ಬಿಜೆಪಿ ಉದ್ದೇಶಪೂರ್ವಕವಾಗಿ ‘ವನವಾಸಿ’ ಎಂದು ಕರೆಯುತ್ತಿದೆ. ಅವರನ್ನು ಭೂಮಿಯಿಂದ ಪ್ರತ್ಯೇಕಿಸಲು ಹಾಗೂ ನೀರು, ಅರಣ್ಯ ಭೂಮಿಯ ಮೇಲಿನ ಅವರ ಹಕ್ಕನ್ನು ಕಿತ್ತುಕೊಳ್ಳುಲು ಬಿಜೆಪಿ ಅವರನ್ನು ವನವಾಸಿ ಎಂದು ಕರೆಯುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು.

Continue Reading

Trending

error: Content is protected !!

Discover more from Nikhara News

Subscribe now to keep reading and get access to the full archive.

Continue reading

Discover more from Nikhara News

Subscribe now to keep reading and get access to the full archive.

Continue reading