ಕಡಬ: ಕೋಳಿಯನ್ನು ಬೆನ್ನಟ್ಟಿ ಬಂದ ಚಿರತೆಯೊಂದು ನೀರು ತುಂಬಿದ ಬಾವಿಗೆ ಬಿದ್ದ ಘಟನೆ ರವಿವಾರ( ನ 7. ರಂದು ) ಮುಂಜಾನೆ ಕಡಬ ಸಮೀಪ ನಡೆದಿದ್ದೂ ಬಳಿಕ ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ ಚಿರತೆಗೆ ಜೀವದಾನ ನೀಡಿದೆ.
ಕಡಬದ ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಅವರ ಮನೆ ಬಳಿಯ ಬಾವಿಯ ದಂಡೆಯ ಮೇಲೆ ಕೂತಿದ್ದ ಕೋಳಿಯ ಚಿರತೆಯೂ ದಾಳಿ ಮಾಡಿದ್ದು ಈ ವೇಳೆ ಅದು ಬಾವಿಗೆ ಬಿದ್ದಿದೆ. ಈ ಬಗ್ಗೆ ಮಾಹಿತಿ ತಿಳಿಯುತ್ತಲೇ ಸುಳ್ಯ ಎಸಿಎಫ್ ಪ್ರವೀಣ್ ಶೆಟ್ಟಿ ನೇತ್ರತ್ವದ ತಂಡ ಅಲ್ಲಿಗೆ ಆಗಮಿಸಿದೆ
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂಧನ ಹಾಗೂ ಸುಬ್ರಹ್ಮಣ್ಯ, ಪಂಜ ಹಾಗೂ ಸುಳ್ಯ ವಲಯದ ಅರಣ್ಯ ಇಲಾಖೆ ಸಿಬ್ಬಂದಿಗಳು ಸತತ ಮೂರು ಗಂಟೆ ಕಾರ್ಯಚರಣೆ ನಡೆಸಿ ಕೊನೆಗೂ ಸುರಕ್ಷಿತವಾಗಿ ಚಿರತೆಯನ್ನು ಹೊರ ತೆಗೆಯುವಲ್ಲಿ ಯಶ್ವಸಿಯಾದರು.

ಮೊದಲು ಬಾವಿಗೆ ಏಣಿ ಇಳಿಸಿದ ಸಿಬಂದಿಗಳು ಚಿರತೆ ಮೇಲೆ ಬರುವುದಕ್ಕಾಗಿ ಕಾದು ಕೂತಿದ್ದಾರೆ. ಅರ್ಧ ಗಂಟೆ ಕಾದ ಬಳಿಕ ಚಿರತೆ ಮೆಲ್ಲನೆ ಏಣಿ ಏರಿ ಮೇಲೆ ಬಂದಿದೆ. ಈ ವೇಳೆ ಹೊಂಚು ಹಾಕಿ ಕೂತಿದ್ದ ಸಿಬಂದಿಗಳು ಚಿರತೆ ತಪ್ಪಿಸದಂತೆ ಬಲೆ ಹರವಿ ಹಿಡಿದಿದ್ದಾರೆ. ಬಳಿಕ ಅದನ್ನೂ ಜಾಗೂರುಕತೆಯಿಂದ ಮೊದಲೇ ಇರಿಸಿದ ಬೋನಿನೊಳಗೆ ಹಾಕಲಾಯಿತು
ವನ್ಯಜೀವಿ ಅಪರಾಧ ನಿಯಂತ್ರಣ ದಳದ ಭುವನ್ ಕುಕ್ಕೆ ಸಹಕರಿಸಿದರು. ಕಡಬ ಪಶು ವೈದ್ಯಾಧಿಕಾರಿ ಡಾ|ಆಜಿತ್ ಅವರು ಚಿರತೆಯ ಆರೋಗ್ಯ ತಪಾಸಣೆ ನಡೆಸಿದರು. ಚಿರತೆ ಆರೋಗ್ಯವಾಗಿದ್ದು, ಅದನ್ನು ಇಲಾಖೆಯ ಉನ್ನತ ಅಧಿಕಾರಿಗಳ ಮಾರ್ಗದರ್ಶನದಂತೆ ಸುರಕ್ಷಿತ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
watch Video :