ಭಾರತೀಯ ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್ʼಗೆ ಆಡುವುದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ ʼ- ಟಿ20 ಕ್ರಿಕೆಟ್ ವಿಶ್ವಕಪ್ ನಲ್ಲಿ ಭಾರತ ತಂಡ ಸೆಮೀಸ್ ರೇಸ್ ನಿಂದ ಹೊರಬಿದ್ದ ಬಳಿಕ ತೀಕ್ಷ್ಣವಾಗಿ ಪ್ರತಿಕ್ರಿಸಿದ ಕ್ರಿಕೆಟ್ ದಂತಕಥೆ ಕಪಿಲ್ ದೇವ್

WhatsApp-Image-2021-11-08-at-16.59.55
Ad Widget

Ad Widget

Ad Widget

ನವದೆಹಲಿ: ಭಾರತ ತಂಡದ ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್‌ ಪ್ರಾಂಚೈಸಿ ಪರವಾಗಿ ಆಡಲು ಹೆಚ್ಚು ಆದ್ಯತೆ ನೀಡುತ್ತಾರೆ ಎಂದು ಭಾರತ ತಂಡದ ಮಾಜಿ ನಾಯಕ  ಕಪಿಲ್ ದೇವ್ ತಿಳಿಸಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ಮೊದಲ ಬಾರಿ 1983ರಲ್ಲಿ ಏಕದಿನ ಮಾದರಿಯಲ್ಲಿ ವಿಶ್ವಕಪ್‌ ಗೆದ್ದಿತ್ತು.

Ad Widget

ಮಾಧ್ಯಮ ಪ್ರತಿನಿಧಿಗಳು ಭಾರತ ಸದ್ಯ ನಡೆಯುತ್ತಿರುವ ಟಿ-20 ವಿಶ್ವಕಪ್‌ ಪಂದ್ಯಾಕೂಟದಲ್ಲಿ ಉಪಾಂತ್ಯ ಪ್ರವೇಶಿಸದೇ ಹೊರಬಿದ್ದಿರುವ ಬಗ್ಗೆ ಪ್ರಶ್ನಿಸಿದಾಗ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅವರು   ‘ಆಟಗಾರರು ದೇಶಕ್ಕಾಗಿ ಆಡುವುದಕ್ಕಿಂತ ಐಪಿಎಲ್‌ಗೆ ಆದ್ಯತೆ ನೀಡಿದಾಗ ನಾವೇನು ಹೇಳಬಲ್ಲೆವು? ದೇಶಕ್ಕಾಗಿ ಆಡುವುದಕ್ಕಾಗಿ ಆಟಗಾರರು ಹೆಮ್ಮೆಪಟ್ಟುಕೊಳ್ಳಬೇಕು ಎಂದು ಹೇಳಿದರು.

Ad Widget

Ad Widget

‘ದೇಶಕ್ಕೆ ಮೊದಲ ಆದ್ಯತೆ ನೀಡಬೇಕು. ಬಳಿಕವಷ್ಟೇ ಫ್ರಾಂಚೈಸಿ ತಂಡ ಎಂದು ನಾನು ಭಾವಿಸುತ್ತೇನೆ. ಐಪಿಎಲ್‌ನಲ್ಲಿ ಆಡಬೇಡಿ ಎಂದು ನಾನು ಹೇಳುತ್ತಿಲ್ಲ. ಆದರೆ ತನ್ನ ಕ್ರಿಕೆಟ್ ಅನ್ನು ಉತ್ತಮವಾಗಿ ಯೋಜಿಸುವ ಜವಾಬ್ದಾರಿ ಬಿಸಿಸಿಐ ಮೇಲಿದೆ’ ಎಂದು ಹೇಳಿದರು.

Ad Widget

 ಈ ಜಂಜಡವನ್ನು ತಪ್ಪಿಸಲು  ವೇಳಾಪಟ್ಟಿಯನ್ನು  ಬಿಸಿಸಿಐ ಸರಿಯಾಗಿ ರೂಪಿಸಬೇಕಿದೆ. ‘ಇದು ನಮಗೆ ದೊಡ್ಡ ಕಲಿಕೆಯಾಗಿದ್ದು, ಈ ಟೂರ್ನಿಯಲ್ಲಿ ಮಾಡಿದ ತಪ್ಪುಗಳನ್ನು ಪುನರಾವರ್ತಿಸಬಾರದು’ ಎಂದು ಕಪಿಲ್ ದೇವ್ ಸಲಹೆ ನೀಡಿದರು.

Ad Widget

Ad Widget

‘ಈಗ ಭವಿಷ್ಯದತ್ತ ದೃಷ್ಟಿ ಹಾಯಿಸಬೇಕಿದೆ. ಈಗಿನಿಂದಲೇ ಯೋಜನೆ ಸಿದ್ಧಗೊಳಿಸಬೇಕು. ವಿಶ್ವಕಪ್‌ನೊಂದಿಗೆ ಭಾರತದ ಇಡೀ ಕ್ರಿಕೆಟ್ ಮುಗಿದಿದೆ ಎಂಬುದಲ್ಲ. ಹೋಗಿ ಯೋಜನೆ ರೂಪಿಸಿಕೊಳ್ಳಿ! ಐಪಿಎಲ್ ಹಾಗೂ ವಿಶ್ವಕಪ್ ನಡುವೆ ಅಂತರ ಇರಬೇಕು ಎಂಬುದು ನನ್ನ ಅನಿಸಿಕೆಯಾಗಿದೆ. ಎಲ್ಲರೂ ಸೋಲಿನ ಹೊಣೆ ಹೊತ್ತುಕೊಳ್ಳಬೇಕು’ ಎಂದು ಕಪಿಲ್ ಹೇಳಿದರು.

ಇದಕ್ಕೂ ಮೊದಲು ಬಯೋಬಬಲ್ ಹಾಗೂ ಮಾನಸಿಕ ದಣಿವಿನ ಬಗ್ಗೆ ಬಲಗೈ ವೇಗದ ಬೌಲರ್ ಜಸ್‌ಪ್ರೀತ್ ಬೂಮ್ರಾ ಹಾಗೂ ಬೌಲಿಂಗ್ ಕೋಚ್ ಭರತ್ ಅರುಣ್ ಉಲ್ಲೇಖ ಮಾಡಿದ್ದರು. ಐಪಿಎಲ್ ಹಾಗೂ ವಿಶ್ವಕಪ್ ನಡುವೆ ವಿರಾಮ ಬೇಕಿತ್ತು ಎಂದು ಭರತ್ ಅರುಣ್ ಪ್ರತಿಪಾದಿಸಿದ್ದರು.

Leave a Reply

Recent Posts

error: Content is protected !!
%d bloggers like this: