ಮಂಗಳೂರು: ನ 8 : ಸ್ಥಳೀಯರ ಸೂಚನೆಯನ್ನು ದಿಕ್ಕರಿಸಿ, ಪಣಂಬೂರು ಬೀಚ್‌ನಲ್ಲಿ ಸಮುದ್ರಕ್ಕೆ ಇಳಿದ ತಂಡವೊಂದರ ಸದಸ್ಯನೊಬ್ಬ ಅಲೆಯ ಹೊಡೆತಕ್ಕೆ ಸಿಲುಕಿ ನೀರಿನಲ್ಲಿ ಕಣ್ಮರೆಯಾಗಿದ್ದಾನೆ.
ಬೆಂಗಳೂರು ಮೂಲದ ದಿನೇಶ್ (20) ಎಂಬಾತ ನಾಪತ್ರೆಯಾಗಿದ್ದು, ಸೋಮವಾರ ಮಧ್ಯಾಹ್ನ ಘಟನೆ ನಡೆದಿದೆ. ಬೆಂಗಳೂರು ಮೂಲದ ಒಟ್ಟು ಎಂಟು ಮಂದಿ ಸ್ನೇಹಿತರ ತಂಎ ದ.ಕ ಜಿಲ್ಲೆಯ ಪ್ರವಾಸಕ್ಕೆ ಬಂದಿದ್ದು ಅವರ ಪೈಕಿ ಈತನೂ ಒಬ್ಬ.
ಬೆಂಗಳೂರಿನಿಂದ ಬಂದಿದ್ದ ಗೆಳೆಯರಾದ ದೀಪಕ್, ಶ್ರೀನಿವಾಸ್, ಪ್ರಶಾಂತ್, ಸುನೀಲ್, ಸುದೀಪ್, ಪ್ರಜ್ವಲ್, ದಿನೇಶ್ ಹಾಗೂ ಸೀನಾ ಅವರು ಸೋಮವಾರ ಮಧ್ಯಾಹ್ನ ಪಣಂಬೂರು ಬೀಚ್‌ಗೆ ಭೇಟಿ ನೀಡಿದ್ದಾರೆ.

ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವುದರಿಂದ ಸ್ಥಳಿಯರು ನೀರಿಗೆ ಇಳಿಯದಂತೆ ಮನವಿ ಮಾಡಿದರೂ, ಕೇಳದೆ ನೀರಿಗೆ ಇಳಿದಿದ್ದಾರೆ. ಸಮುದ್ರದಲ್ಲಿ ಈಜುತ್ತಾ ದಿನೇಶ್ ಸ್ವಲ್ಪ ಮುಂದಕ್ಕೆ ಹೋಗಿದ್ದು, 1 ಗಂಟೆಯ ವೇಳೆಗೆ ಬಲವಾದ ಅಲೆಯೊಂದು ಬಂದು ಕೊಚ್ಚಿ ಹೋಗಿ ಕಾಣೆಯಾಗಿದ್ದಾರೆ.
ಸೋಮವಾರ ಸಂಜೆಯವರೆಗೂ ಹುಡುಕಾಟ ನಡೆಸಿದರೂ ಕಣ್ಮರೆಯಾದವ ಪತ್ತೆಯಾಗಿಲ್ಲ. ಘಟನೆ ಕುರಿಂತಂತೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.