ಮಡಿಕೇರಿ : ಸೋಮವಾರಪೇಟೆ ಖಾಸಗಿ ಬಸ್ ನಿಲ್ದಾಣದಲ್ಲಿ ಹೈಮಾಸ್ಕ್ ವಿದ್ಯುತ್ ಕಂಬದ ಬುಡದಲ್ಲಿ ವಿದ್ಯುತ್ ಸ್ಪರ್ಶಿಸಿ ಯುವಕನೋರ್ವ ದಾರುಣವಾಗಿ ಮೃತಪಟ್ಟಿದ್ದಾನೆ.
ಸೋಮವಾರಪೇಟೆಯ ಪುಟ್ಟಪ್ಪ ವೃತ್ತದಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ.
ಪಟ್ಟಣ ರೇಂಜರ್ಸ್ ಬ್ಲಾಕ್ ನಿವಾಸಿ ಲಕ್ಷ್ಮಣ ಎಂಬವರ ಪುತ್ರ ಮಂಜು(28) ಮೃತ ದುರ್ಧೈವಿ.
ಸ್ಥಳಕ್ಕೆ ಸೆಸ್ಕ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹೈಮಾಸ್ಕ್ ವಿದ್ಯುತ್ ಕಂಬ ಅತೀ ಅಪಾಯಕಾರಿ ಎಂದು ಈ ಹಿಂದೆಯೇ ಇಲಾಖೆ ತಿಳಿಸಿದೆ.