ನದಿಗೆ ಮೀನು ಹಿಡಿಯಲು ಹೋದ ವೇಳೆ ವಿದ್ಯುತ್ ಶಾಕ್ ತಗುಲಿ ಯುವಕನೊಬ್ಬ ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದಲ್ಲಿ ನ.5 ರಂದು ರಾತ್ರಿ ನಡೆದಿದೆ.
ದೇವಚಳ್ಳ ಗ್ರಾಮದ ಕರಂಗಲ್ಲಿನ ದಿ. ಕೇಶವ ಗೌಡರವರ ಪುತ್ರ ಪ್ರಕಾಶ್ (37) ಮೃತಪಟ್ಟ ಯುವಕ. . ಮೃತರು ತಾಯಿ ಭುವನೇಶ್ವರಿ, ಪತ್ನಿ ದಿವ್ಯ ಹಾಗೂ ಪುತ್ರಿ ಹಿತಾಶ್ರೀ ಯನ್ನು ಅಗಲಿದ್ದಾರೆ.
ಮನೆ ಸಮೀಪದ ಮಾಡಬಾಕಿಲು ಭಾಗದ ನದಿಗೆ ಸ್ನೇಹಿತರ ಜತೆ ಮೀನು ಹಿಡಿಯಲು ತೆರಳಿದಾಗ ದುರ್ಘಟನೆ ಸಂಭವಿಸಿದೆ ನದಿಯಲ್ಲಿ ಇನ್ವರ್ಟರ್ ಬ್ಯಾಟರಿ ಬ್ಯಾ ಬಳಸಿ ಮೀನು ಹಿಡಿಯುತಿದ್ದ ಸಂದರ್ಭ ಬ್ಯಾಟರಿಯ ವಿದ್ಯುತ್ ಪ್ರವಹಿಸಿ ಪ್ರಕಾಶ್ ಮೃತರಾಗಿರುವುದಾಗಿ ತಿಳಿದು ಬಂದಿದೆ.

ಘಟನೆಯೂ ಸುಬ್ರಹ್ಮಣ್ಯಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಅಲ್ಲಿನ ಎಸ್ ಐ ಜಂಬೂರಾಜ್ ಮಾಹಜನ್ ರವರು ಸ್ಥಳಕ್ಕೆ ತೆರಳಿ ತನಿಖೆ ನಡೆಸಿರುವುದಾಗಿ ತಿಳಿದು ಬಂದಿದೆ.