ಉಪ್ಪಿನಂಗಡಿ : ನ 6 : ಆರು ದಿನಗಳ ವಿವಾಹವಾಗಿದ್ದ ಯುವಕನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ನ .6 ರಂದು ನಡೆದಿದೆ.
ನಾಸೀರ್ (27) ಮೃತ ಯುವಕ ಈತನ ಮೃತ ದೇಹ ಉಪ್ಪಿನಂಗಡಿ ಸಮೀಪ ಕುದ್ರಡ್ಕ ಎಂಬಲ್ಲಿ ಕಲ್ಲಿನ ಕೋರೆ ಬಳಿ ಪತ್ತೆಯಾಗಿದೆ
ಕಳೆದ ಆದಿತ್ಯವಾರವಷ್ಟೇ ನಾಸೀರ್ ವಿವಾಹವಾಗಿತ್ತು. ಹೀಗಾಗಿ ಈತನ ಸಾವಿನ ಸುತ್ತ ಹಲವು ಅನುಮಾನಗಳು ಕಾಡಿದ್ದು ಸ್ಥಳಕ್ಕೆ ಪೂಂಜಾಲಕಟ್ಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರಗಳು ಇನ್ನಷ್ಟೆ ತಿಳಿದು ಬರಬೇಕಿದೆ.
