ಹಾಸನ: ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಹಾಸನ ಬೈಪಾಸ್ ರಸ್ತೆಯಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಬಸ್ ಗಳನ್ನು ತಡೆದು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಬಸ್ ನೊಳಗೆ ಹತ್ತಲು ಪ್ರಯತ್ನಪಟ್ಟ ಘಟನೆ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ಸನ್ನು ರಾತ್ರಿ 2 ಗಂಟೆಯ ಸಮಯದಲ್ಲಿ ಬೈಕ್ ನಲ್ಲಿ ಬಂದು ತಡೆದು ನಿಲ್ಲಿಸಿ ಬಸ್ಸಿನ ಡೋರನ್ನು ತೆಗೆಯುವಂತೆ ಚಾಲಕನನ್ನು ಒತ್ತಾಯಿಸಿ, ಚಾಲಕನು ಡೋರನ್ನು ತೆಗೆಯದಿದ್ದಾಗ ದೊಣ್ಣೆಯಿಂದ ಚಾಲಕನ ಮೇಲೆ ಹಲ್ಲೆ ಮಾಡಲು ಯತ್ನಿಸಿದ್ದಾರೆ.
Video:
ಆಗ ಅದೇ ಮಾರ್ಗದಲ್ಲಿ ಹಿಂದೆ ಬಂದ ಮತ್ತೊಂದು ಖಾಸಗಿ ಬಸ್ಸನ್ನು ತಡೆಯಲು ಯತ್ನಿಸಿದಾಗ ಈ ಬಸ್ಸಿನ ಚಾಲಕ ಬಸ್ಸನ್ನು ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದಾನೆ.
ಈ ಎಲ್ಲಾ ದೃಶ್ಯಗಳು ಮೊಬೈಲ್ ನಲ್ಲಿ ಬಸ್ ನಲ್ಲಿದ್ದ ಪ್ರಯಾಣಿಕರು ಸೆರೆ ಹಿಡಿದಿದ್ದು ಈ ದೃಶ್ಯಗಳು ವೈರಲ್ ಆಗಿವೆ.
ಬೆಂಗಳೂರಿನಿಂದ ಮಂಗಳೂರು, ಧರ್ಮಸ್ಥಳ, ಚಿಕ್ಕಮಗಳೂರುಗಳ ಕಡೆ ಬಸ್ಸು ಮತ್ತು ಕಾರಿನಲ್ಲಿ ರಾತ್ರಿ ವೇಳೆಯಲ್ಲಿ ಸಂಚರಿಸುವ ಪ್ರಯಾಣಿಕರುಗಳು ತುಂಬಾ ಎಚ್ಚರಿಕೆಯಿಂದ ಪ್ರಯಾಣಿಸಬೇಕೆಂಬ ಮೆಸೆಜುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿಟುತ್ತಿವೆ.