ಪುತ್ತೂರು: ಪುತ್ತೂರಿನ ಪರ್ಲಡ್ಕದ ಎಸ್‌ಡಿಪಿ ರೆಮಿಡೀಸ್ & ರಿಸರ್ಚ್ ಸೆಂಟರ್ ನ ಡಾ| ಹರಿಕೃಷ್ಣ ಪಾಣಾಜೆಯವರಿಗೆ ಬೆಸ್ಟ್ ಎಂಟರ್ ಪ್ರೈನರ್ ಪ್ರಶಸ್ತಿ ಲಭಿಸಿದೆ. ಇವರ ಮಾಲಕತ್ವದ ಎಸ್‌ಡಿಪಿ ರೆಮೇಡಿಸ್ ಕಳೆದ 30 ವರ್ಷಗಳಿಂದ ಉತ್ತಮ ಆಯುರ್ವೇದ ಔಷಧಗಳನ್ನು ತಯಾರಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ.
2019 ರಲ್ಲಿ ಅತ್ಯಾದುನಿಕ ತಂತ್ರಜ್ಞಾನ ಅಳವಡಿಸಿ ಪುತ್ತೂರಿನ ಮುಂಡೂರಿನಲ್ಲಿ ನೂತನ ಫಾರ್ಮಸಿಯನ್ನು ಪ್ರಾರಂಭಿಸಲಾಯಿತು.
ಸಂಸ್ಥೆಯ ವ್ಯವಹಾರ ಮತ್ತು ಗುಣಮಟ್ಟವನ್ನು ಗುರುತಿಸಿ ಕೆಎಸ್‌ಏಫ್‌ಸಿ 2020 ರ ಅವಾರ್ಡ್ ನ್ನು ಕೋಸಿಡಿಸಿ ನ್ಯಾಷನಲ್ ಅವಾರ್ಡ್ ಕಾರ್ಯಕ್ರಮ ಬೆಂಗಳೂರಿನಲ್ಲಿ ಕೊಡಬೇಕಿತ್ತು.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣ ಕಾರ್ಯಕ್ರಮ ನಡೆಯದೆ ಪ್ರಶಸ್ತಿಯನ್ನು ಕೆಎಸ್‌ಏಫ್‌ಸಿ ಜನರಲ್ ಮ್ಯಾನೇಜರ್ ಶ್ರೀ ಅರವಿಂದ ಅವರು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಡಾ| ಹರಿಕೃಷ್ಣ ಪಾಣಾಜೆಯವರಿಗೆ ಹಸ್ತಾಂತರಿಸಿದರು.