ಬೆಂಗಳೂರು: ಪೋಸ್ಟ್ ಕಾರ್ಡ್ ಖ್ಯಾತಿಯ ಮಹೇಶ್ ವಿಕ್ರಮ ಹೆಗ್ಡೆ ಸಾರಥ್ಯದಲ್ಲಿ ನೂತನ ಯೂಟ್ಯೂಬ್ ವಾಹಿನಿ TV ವಿಕ್ರಮ ಇಂದು ಶುಭಾರಂಭಗೊಂಡಿದೆ.
ವಿನೂತನ ಪ್ರಯತ್ನಗಳ ಜೊತೆಗೆ ಈ ಡಿಜಿಟಲ್ ವಾಹಿನಿಯನ್ನು ಆರಂಭಿಸಲಾಗಿದ್ದು, ರಾಷ್ಟ್ರೀಯತೆಯ ವಿಚಾರಧಾರೆಗಳ ಕುರಿತು ಕಾರ್ಯಕ್ರಮಗಳನ್ನು ಇದರಲ್ಲಿ ನೋಡಬಹುದಾಗಿದೆ. ದೇಶ ಸೇವೆ, ಧರ್ಮ ಸೇವೆ, ಸಮಾಜ ಸೇವೆಗಳಿಗೆ ಸಂಬಂಧಿಸಿದಂತೆ ವಿಕ್ರಮ ವಾಹಿನಿ ಕಾರ್ಯಕ್ರಮಗಳನ್ನು ಸಾದರಪಡಿಸಲಿದೆ.
ಚಾಲಕರು ನಿದ್ದೆ ಮಂಪರಿಗೆ ಜಾರಿ ಅಪಘಾತವಾಗುವದನ್ನು ತಡೆಗಟ್ಟಲು ಇಬ್ಬರು ಹೈ ಸ್ಕೂಲ್ ವಿದ್ಯಾರ್ಥಿಗಳು ತಯಾರಿಸಿದರು ವಿಶಿಷ್ಟ ಸಾಧನ -2 ಸೆಕೆಂಡ್ಸ್ ಗಿಂತ ಹೆಚ್ಚು ಅವಧಿಗೆ ಕಣ್ಣು ರೆಪ್ಪೆ ಮುಚ್ಚಿದರೆ ಎಚ್ಚರಿಸುತ್ತೆ ಈ ಉಪಕರಣ ನಿತ್ಯ ನೋಡುವ ಹೆದ್ದಾರಿ ಅಪಘಾತವೇ ಉಪಕರಣ ತಯಾರಿಸಲು ಪ್ರೇರಣೆ:
ಖ್ಯಾತ ನಿರೂಪಕರು ಈ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ. ಬೆಳಗ್ಗೆ ಪೇಜಾವರ ಮಠದ ವಿದ್ವಾನ್ ಕೃಷ್ಣರಾಜ ಕುತ್ಪಾಡಿ ಅವರಿಂದ ಭಗವದ್ಗೀತೆ, ರಾಮಕೃಷ್ಣ ಮಿಷನ್‌ನ ಸ್ವಾಮಿ ತ್ಯಾಗೀಶ್ವರಾನಂದ ಅವರಿಂದ ವಿವೇಕ ವಾಣಿ, ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಅವರಿಂದ ಲೈಫ್ ಈಸ್ ಬ್ಯೂಟಿಫುಲ್, ಸಂಸ್ಕೃತ – ಸಂಗೀತ ವಿದುಷಿ ವಿ. ಬಿ. ಆರತಿ ಅವರಿಂದ ಸಮ್ಯಕ್ ಸಂವಾದ, ಮುಮ್ತಾಸ್ ಅವರಿಂದ ಮಜ್ಬೂತ್ ಭಾರತ, ನಿರೂಪಕಿ ಸೋನಿಯಾ ಅವರಿಂದ ಇತಿಹಾಸ, ವಿಶೇಷ ಸಂದರ್ಶನ, ಲೇಖಕ, ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಂದ ಯೋಧ, ಖ್ಯಾತ ನಿರೂಪಕ ರಾಘವ ಸೂರ್ಯ ಅವರಿಂದ ದೇಶದ ಕಥೆ, ಕಿರಿಕ್ ಕೀರ್ತಿ ಅವರಿಂದ ಅಂತರಂಗ ಸುದ್ದಿ ಕಾರ್ಯಕ್ರಮಗಳು ನಡೆಯಲಿವೆ. ಜೊತೆಗೆ ಆ ದಿನದ ಪ್ರಮುಖ ಸುದ್ದಿಯೂ TV ವಿಕ್ರಮದಲ್ಲಿ ಪ್ರಸಾರವಾಗಲಿದೆ.