ಕಾಸರಗೋಡು : ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ವೈದ್ಯರ ಬಳಿ ಚಿಕಿತ್ಸೆ ಕೊಡಿಸದೆ, ಮಂತ್ರವಾದ ಹಾಗೂ ವಾಮಾಚಾರ ಮಾಡಿ ಗುಣಪಡಿಸಲು ಯತ್ನಿಸಿದ ಘಟನೆ ಸುಶಿಕ್ಷಿತರ ರಾಜ್ಯ ಎನಿಸಿದ ಕೇರಳದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಂತ್ರವಾದ ಫಲಿಸದೇ ಜ್ವರದಿಂದ ಬಳಲುತಿದ್ದ 11 ವರ್ಷದ ಬಾಲಕಿ 3 ದಿನ ನರಳಿ ನರಳಿ ಮೃತಪಟ್ಟ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರು ಜಿಲ್ಲೆಯ ಕಣ್ಣೂರು ಪೇಟೆಯ ಅಬ್ದುಲ್ ಸತ್ತಾರ್ ಹಾಗೂ ಸಾಬಿಯ ದಂಪತಿಯ ಪುತ್ರಿ, ವಿದ್ಯಾರ್ಥಿನಿ ಫಾತಿಮಾ (11) ಮೃತಪಟ್ಟ ಬಾಲಕಿ. ಈಕೆಯ ತಂದೆ ಹಾಗೂ ಈಕೆಯ ಮೇಲೆ ಮಂತ್ರವಾದ ಪ್ರಯೋಗಿಸಿದ್ದಾನೆ ಎನ್ನಲಾದ ಇಮಾಂ ಕುಂಞಿಪಳ್ಳಿ ನಿವಾಸಿ ಉವೈಸ್ ಬಂಧಿತರು.
ಚಾಲಕರು ನಿದ್ದೆ ಮಂಪರಿಗೆ ಜಾರಿ ಅಪಘಾತವಾಗುವದನ್ನು ತಡೆಗಟ್ಟಲು ಇಬ್ಬರು ಹೈ ಸ್ಕೂಲ್ ವಿದ್ಯಾರ್ಥಿಗಳು ತಯಾರಿಸಿದರು ವಿಶಿಷ್ಟ ಸಾಧನ -2 ಸೆಕೆಂಡ್ಸ್ ಗಿಂತ ಹೆಚ್ಚು ಅವಧಿಗೆ ಕಣ್ಣು ರೆಪ್ಪೆ ಮುಚ್ಚಿದರೆ ಎಚ್ಚರಿಸುತ್ತೆ ಈ ಉಪಕರಣ ನಿತ್ಯ ನೋಡುವ ಹೆದ್ದಾರಿ ಅಪಘಾತವೇ ಉಪಕರಣ ತಯಾರಿಸಲು ಪ್ರೇರಣೆ
ಕೆಲ ದಿನಗಳ ಹಿಂದೆ ಫಾತಿಮಳಿಗೆ ಜ್ವರ ಕಾಣಿಸಿಕೊಂಡಿದ್ದು, ವೈದ್ಯಕೀಯ ಚಿಕಿತ್ಸೆ ಕೊಡಿಸುವ ಬದಲು ಆಕೆಯ ತಂದೆ ಅಬ್ದುಲ್ ಸತ್ತಾರ್ ಬಾಲಕಿಯನ್ನು ಆರೋಪಿ ಇಮಾಮ್ ಮನೆಗೆ ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗುತ್ತಿದೆ. ಅಲ್ಲಿ 3 ದಿನಗಳ ಕಾಲ ಬಾಲಕಿಗೆ ಚಿಕಿತ್ಸೆ ನೀಡದೆ ವಾಮಾಚಾರ, ಮಂತ್ರವಾದ ನಡೆಸಲಾಗಿದೆ ಎನ್ನಲಾಗಿದೆ. ಅದರೆ ಇದು ಯಾವುದೇ ಫಲ ನೀಡದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ಆರೋಪ ವ್ಯಕ್ತವಾಗಿದೆ.

ಚಿಕಿತ್ಸೆ ನೆಪದಲ್ಲಿ ನಡೆಸಿದ ವಾಮಾಚಾರ ಮತ್ತು ದೈಹಿಕ ದೌರ್ಜನ್ಯವೇ ಸಾವಿಗೆ ಕಾರಣವೆಂದು ಆರೋಪಿಸಿ ಬಾಲಕಿಯ ಸಂಬಂಧಿಕರು ಪೊಲೀಸರಿಗೆ ಮಾಹಿತಿ ನೀಡಿದ್ದು ಅದರಂತೆ ಪೊಲೀಸರು ತಂದೆ ಹಾಗೂ ಇಮಾಮ್ ರನ್ನು ಬಂಧಿಸಿದ್ದಾರೆ. ಇದೇ ವೇಳೆ ಮತ್ತೊಂದು ಸ್ಫೋಟಕ ಮಾಹಿತಿ ಬಹಿರಂಗವಾಗಿದ್ದು, ಈ ಕುಟುಂಬದಲ್ಲಿ ಈ ಹಿಂದೆ ನಡೆದ 3 ಅಸಹಜ ಸಾವಿಗೂ ಇದೇ ಇಮಾಂನ ಮಂತ್ರವಾದವೇ ಕಾರಣ ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.

ಇಲ್ಲಿನ ಸಿಟಿ ಆಜಾದ್ ರಸ್ತೆಯಲ್ಲಿರುವ ಪಡಿಕ್ಕಲ್ ಸಫಿಯಾ (70) ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಕಾಯಿಲೆಗಳಿಗೆ ಈ ಮಂತ್ರವಾದಿಯನ್ನು ಅವಲಂಬಿಸಿದ್ದಳೆನ್ನಲಾಗಿದೆ. ಆಕೆಯ ಪುತ್ರ ಅಶ್ರಫ್, ಸಹೋದರಿ ನಫೀಸು ಅವರ ಸಾವಿಗೂ ಇದೆ ಮಂತ್ರವಾದಿ ಕಾರಣ ಎಂದು ಸಫಿಯಾರ ಪುತ್ರ ಕಾರಣ ಎಂದು ಆರೋಪಿಸಿರುವುದಾಗಿ ವರದಿಯಾಗಿದೆ. ಕುರುವ ನಿವಾಸಿಯಾದ ಇಂಚಿಕಲ್ ಅನ್ವರ್ ಸಾವಿಗೂ ವಾಮಾಚಾರವೇ ಕಾರಣವೆನ್ನಲಾಗಿದೆ.
ಫಾತಿಮಾ ಸಾವಿನ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರು ತನಿಖೆಯ ವ್ಯಾಪ್ತಿಯನ್ನು ಹಿಗ್ಗಿಸಿ ಈ ಕುಟುಂಬದಲ್ಲಿ ಈ ಹಿಂದೆ ನಡೆದ 3ಅಸಹಜ ಸಾವಿನ ಕುರಿತು ತನಿಖೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ