ಪುತ್ತೂರು, ನ. 3: ಮೆಕಾಲೆ ಶಿಕ್ಷಣ ಪದ್ಧತಿ ಬದಲಾಯಿಸಿ ಗುರುಕುಲ ವ್ಯವಸ್ಥೆಯ ಕಾಲದಲ್ಲಿ ದೊರಕುತ್ತಿದ್ದ ಸಂಸ್ಕಾರ, ಸಂಸ್ಕೃತಿ, ರಾಷ್ಟ್ರಪ್ರೇಮ ಉದ್ದೀ ಪನದ ಶಿಕ್ಷಣವನ್ನು ನೀಡುವಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕಾರಣವಾಗಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು.
ಪುತ್ತೂರು ವಿವೇಕಾನಂದ ವಿದ್ಯಾ ವರ್ಧಕ ಸಂಘ ಇದರ ಆಶ್ರಯದಲ್ಲಿ ವಿವೇಕಾನಂದ ಅ.ಮಾ. ಶಾಲೆ (ಸಿಬಿಎಸ್‌ಇ) ಯ ಕಟ್ಟಡ, ವಿಜ್ಞಾನ ದೀಪಿಕಾ 3ಡಿ ವಿಜ್ಞಾನ ಉದ್ಯಾನವನ ಉದ್ಘಾಟಿಸಿ ಅವರು ಮಾತನಾಡಿದರು.
ಹೊಸದಾಗಿ ಜಾರಿಯಾಗುತ್ತಿರುವ ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಭವಿಷ್ಯಕ್ಕೆ ಹೊಸ ದಿಕ್ಕು ಕಲ್ಪಿಸಲಿದೆ. ಮೋದಿ ಪ್ರಧಾನಿಯಾಗುತ್ತಲೇ,ಇದರ ಜಾರಿಗೆ ಮುನ್ನಡಿ ಬರೆಯಲಾಯಿತು. ಕಾರ್ಯಪಡೆ ರಚಿಸಿ ನೂತನ ನೀತಿಯ ಕರಡು ರಚಿಸಿ 2 ವರ್ಷಗಳ ಕಾಲ ಸಾರ್ವಜನಿಕರಿಗೆ ಅಭಿಪ್ರಾಯ ಮಂಡಿಸಲು ಅವಕಾಶ ಕಲ್ಪಿಸಲಾಯಿತು ಎಂದು ಇಡೀ ಪ್ರಕ್ರಿಯೆಯನ್ನು ವಿವರಿಸಿದರು.
ಕಲ್ಪನಾ ಚಾವ್ಹಾ ವಿಜ್ಞಾನ ಪ್ರಯೋಗಾ ಲಯವನ್ನು ಸಂಸದ ನಳಿನ್ ಕುಮಾರ್ ಕಟೀಲು ಉದ್ಘಾಟಿಸಿ ಮಾತನಾಡಿ, 10 ಮೆಡಿಕಲ್ ಕಾಲೇಜ್, 5 ಡೀಮ್ಡ್ ವಿವಿ, 1 ಎನ್‌ಐಟಿಕೆ ಇರುವ ದಕ್ಷಿಣ ಕನ್ನಡ ಶಿಕ್ಷಣದ ಕಾಶಿಯಾಗಿದೆ. ಇದಕ್ಕೆಲ್ಲ ಕಿರೀಟ ಪ್ರಾಯ ಪುತ್ತೂರನ್ನು ಕೇಂದ್ರೀಕರಿಸಿ ನಡೆಯುತ್ತಿರುವ ವಿವೇಕಾನಂದ ವಿದ್ಯಾ ವರ್ಧಕ ಸಂಘ. ಇದು ಶಿಕ್ಷಣವನ್ನು ವ್ಯಾಪಾರೀಕರಣ ಗೊಳಿಸದೆ ಒಂದು ಸಿದ್ಧಾಂತವನ್ನಿರಿಸಿಕೊಂಡು ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ ಎಂದರು.

ಬಯಲು ರಂಗಮಂದಿರವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸಂಜೀವ ಮಠಂದೂರು ಸಂಸ್ಥೆಯ ಶ್ರೆಯೋಭಿವೃದ್ದಿಗೆ ಹಾರೈಸಿದರು
ನೂತನ ಕಟ್ಟಡಕ್ಕೆʼ ದೇವದೀಪ್ತಿ ʼ ಎಂದು ನಾಮಕರಣ
ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಎಲ್ಲರಿಗೂ ಶಿಕ್ಷಣ ಎನ್ನುವ ಸಮಷ್ಟಿ ಶಿಕ್ಷಣದ ಪರಿಕಲ್ಪನೆಯನ್ನು ವಿಶ್ವಕ್ಕೆ ಕೊಟ್ಟಿರುವುದು ಭಾರತ. ನಮ್ಮಧರ್ಮ-ಸಂಸ್ಕೃತಿಯನ್ನು ಆಧರಿಸಿದ ಶಿಕ್ಷಣವನ್ನು ನಾವು ಕೊಡಬೇಕು. ಶಿಕ್ಷಣವನ್ನೂ ದಂಧೆಯಾಗಿಸಿಕೊಂಡವರ ನಡುವೆ ವಿವೇಕಾನಂದ ವಿದ್ಯಾಸಂಸ್ಥೆಗಳು ಪ್ರತ್ಯೇಕವಾಗಿ ನಿಲ್ಲುತ್ತವೆ, ರಾಷ್ಟ್ರಹಿತ, ರಾಷ್ಟ್ರಭಕ್ತಿಯನ್ನು ಶಿಕ್ಷಣದ ಮೂಲಕ ನೀಡುವ ಉದ್ದೇಶವನ್ನಿರಿಸಿಕೊಂಡ ವಿವೇಕಾನಂದ, ರಾಷ್ಟ್ರಚಿಂತನೆಯ ವಿದ್ಯಾ ಸಂಸ್ಥೆಯಾಗಿದೆ ಎಂದರು. ಸ್ವಾಮೀಜಿಯವರು ನೂತನ ಕಟ್ಟಡಕ್ಕೆ ʼದೇವದೀಪ್ತಿʼ ಎಂದು ನಾಮಕರಣ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಕಲ್ಲಡ್ಕ ಪ್ರಭಾಕರ್ ಭಟ್ ಮಾತನಾಡಿ, ಧರ್ಮಕೇಂದ್ರಿತ ಶಿಕ್ಷಣ ವ್ಯವಸ್ಥೆಯ ಅಗತ್ಯವಿದೆ ಎಂದು ಹೇಳಿದರು. ಚಿಣ್ಣರ ಚಿಲುಮೆಯನ್ನು ನಗರಸಭೆಯ ಅಧ್ಯಕ್ಷ ಜೀವಂಧರ್ ಜೈನ್, ಸಿ.ಬಿ.ಎಸ್.ಇ. ಸ್ಕೂಲ್ ಆ್ಯಪನ್ನು ಮಂಗಳೂರಿನ ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ಜನರಲ್ ಮ್ಯಾನೇಜರ್ ಯೋಗೀಶ್ ಆಚಾರ್ಯ ಅನಾವರಣಗೊಳಿಸಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ| ಕೆ.ಎಂ ಕೃಷ್ಣ ಭಟ್, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ(ಸಿಬಿಎಸ್‌ಸಿ)ಯ ಮುಖ್ಯ ಶಿಕ್ಷಕಿ ಸಿಂಧು ಉಪಸ್ಥಿತರಿದ್ದರು. ವಿವೇಕಾ ನಂದ ಪಾಲಿಟೆಕ್ನಿಕ್ ಪ್ರಾಚಾರ್ಯ ಗೋಪಿನಾಥ್ ಶೆಟ್ಟಿ ಸಿವಿಲ್ ಕನ್‌ಸ್ಪೆಕ್ಟರ್ ಗೋಪಾಲ್ ಮೂಲ್ಯ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿನಿ ಸಿಂಚನಾ ಲಕ್ಷ್ಮಿ ಅವರನ್ನು ಗೌರವಿಸ ಲಾಯಿತು. ಅಂತರ್ ಶಾಲಾ ವಿದ್ಯಾರ್ಥಿ ಗಳಿಗೆ ಆಯೋಜಿಸಿದ್ದ ವಿಜ್ಞಾನ ಮಾದರಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿ ಸಂಚಾಲಕ ಭರತ್ ಪೈ ಸ್ವಾಗತಿಸಿ, ಅಧ್ಯಕ್ಷೆ ವಸಂತಿ ಕೆದಿಲ ವಂದಿಸಿದರು. ನರೇಂದ್ರ ಪ.ಪೂ. ಕಾಲೇಜಿನ ಉಪನ್ಯಾಸಕ ವಿಶ್ಲೇಶ್ ಕಾರ್ಯಕ್ರಮ ನಿರೂಪಿಸಿದರು