ಸುಬ್ರಹ್ಮಣ್ಯ : ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ಕಳೆದ ವಾರ ಹಣ್ಣಡಿಕೆ ಕದ್ದ ಆರೋಪದಲ್ಲಿ ಬಾಲಕನಿಗೆ ಹಲ್ಲೆ ನಡೆಸಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿದ್ದು ಹಲ್ಲೆ ನಡೆಸಿದ 10 ಮಂದಿ ಮೇಲೆ ಎಫ್ ಐ ಆರ್ ದಾಖಲಾಗಿದೆ.
ಚಾಲಕರು ನಿದ್ದೆ ಮಂಪರಿಗೆ ಜಾರಿ ಅಪಘಾತವಾಗುವದನ್ನು ತಡೆಗಟ್ಟಲು ಇಬ್ಬರು ಹೈ ಸ್ಕೂಲ್ ವಿದ್ಯಾರ್ಥಿಗಳು ತಯಾರಿಸಿದರು ವಿಶಿಷ್ಟ ಸಾಧನ -2 ಸೆಕೆಂಡ್ಸ್ ಗಿಂತ ಹೆಚ್ಚು ಅವಧಿಗೆ ಕಣ್ಣು ರೆಪ್ಪೆ ಮುಚ್ಚಿದರೆ ಎಚ್ಚರಿಸುತ್ತೆ ಈ ಉಪಕರಣ ನಿತ್ಯ ನೋಡುವ ಹೆದ್ದಾರಿ ಅಪಘಾತವೇ ಉಪಕರಣ ತಯಾರಿಸಲು ಪ್ರೇರಣೆ:
ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಹಲ್ಲೆ ಮಾಡಲಾಗಿತ್ತೆನ್ನಲಾಗಿದೆ. ಹಲ್ಲೆ ನಡೆಸಿದ ವಿಡಿಯೋ ಕೂಡ ಗ್ರೂಪ್ ಗಳಲ್ಲಿ ಹರಿಯಬಿಡಲಾಗಿತ್ತು ಇದು ಪೊಲೀಸರಿಗೆ ಹಾಗೂ ಮೇಲಾಧಿಕಾರಿಗಳಿಗೆ ದೊರೆತಿದ್ದು ಇದರ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.

ಗುತ್ತಿಗಾರು ಪರಿಸರದ ಜೀವನ್, ವರ್ಷಿತ್, ಸಚಿನ್, ಮೋಕ್ಷಿತ್, ಸನತ್, ಮುರಳಿ, ದಿನೇಶ್, ಈಶ್ವರ್, ಚಂದ್ರ, ಚೇತನ್ ಎಂಬವರ ಮೇಲೆ ಎಫ್ ಐ ಆರ್ ದಾಖಲಾಗಿರುವುದಾಗಿ ತಿಳಿದುಬಂದಿದೆ.
ವಿಡಿಯೋ ವೈರಲ್ ಆಗಿ ಪ್ರಕರಣ ದಾಖಲಾಗ್ತುತಿದ್ದಂತೆ ಹಲ್ಲೆ ನಡೆಸಿದವರು ನಾಪತ್ತೆಯಾಗಿದ್ದರೆ. ಪೊಲೀಸರು ಪ್ರಕರಣ ದಾಖಲಾದವರ ಹುಡುಕಾಟ ಆರಂಭಿಸಿದ್ದಾರೆ ಎಂದು ಸುಬ್ರಹ್ಮಣ್ಯ ಠಾಣಾ ಎಸ್ಐ ಜಂಬುರಾಜ್ ತಿಳಿಸಿದ್ದಾರೆ.


One Response
Paapa huduga maneyalli kashta ithhu enu papa .goondagalukanninalli raktha illadavaru .