ಮಂಗಳೂರು, ನ 04 : ಸಿಟಿ ಬಸ್‌ನಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದವನಿಗೆ ಸಹಪ್ರಯಾಣಿಕರು ತಳಿಸಿ ಕಂಕನಾಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಪೊಲೀಸರು ವಶಕ್ಕೆ ಪಡೆದ ವ್ಯಕ್ತಿಯನ್ನು ಮಡಿಕೇರಿಯ ಯೂಸುಫ್(40)ಎಂದು ಗುರುತಿಸಲಾಗಿದೆ.


ಬುಧವಾರ ಸಂಜೆ ತಲಪಾಡಿಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಬಸ್ ಗೆ ತೊಕ್ಕೊಟ್ಟಿನಲ್ಲಿ ಬಸ್ ಏರಿದ ಯೂಸುಫ್ ಮೊಬೈಲ್‌ನಲ್ಲಿ ಮಹಿಳೆಯರ ವೀಡಿಯೊ ಚಿತ್ರೀಕರಣ ಮಾಡುತ್ತಿದ್ದ ಎಂದು ಹೇಳಲಾಗುತ್ತಿದ್ದು, ಇದನ್ನು ಪ್ರಯಾಣಿಕರೋರ್ವರು ಗಮನಿಸಿದ್ದಾರೆ, ಬಸ್‌ನಲ್ಲಿದ್ದ ಪ್ರಯಾಣಿಕರು ಯೂಸುಫ್ ಗೆ ಥಳಿಸಿದ್ದಾರೆ ಎಂದು ತಿಳಿದುಬಂದಿದೆ.
ನಂತರ ಈ ಬಗ್ಗೆ ಬಸ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕಂಕನಾಡಿ ನಗರ ಠಾಣೆ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ.
