ಬಂಟ್ವಾಳ: ಇತಿಹಾಸ ಪ್ರಸಿದ್ಧ ಶಿವ ಕ್ಷೇತ್ರ ಮಹಾತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಅನ್ಯಮತೀಯ ಯುವಕರು ಚಪ್ಪಲಿ ಧರಿಸಿ ಪ್ರವೇಶಿಸಿ ದೇವಸ್ಥಾನ ಪಾವಿತ್ರ್ಯತೆಗೆ ಅಪವಿತ್ರವೆಸಗಿದವರ ಬಂಧನವಾಗಿದೆ.
ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂಗಳ ಪವಿತ್ರ ಕ್ಷೇತ್ರ ಕಾರಿಂಜೇಶ್ವರ ದೇವಾಲಯದೊಳಗೆ ಮುಸ್ಲಿಂ ಯುವಕರ ತಂಡವೊಂದು ಚಪ್ಪಲಿ ಹಾಕಿಕೊಂಡು ಒಳಪ್ರವೇಶಿಸಿ, ಅಲ್ಲಿ ಕೆಲ ಅಸಹ್ಯ ರೀತಿಯಲ್ಲಿ ವರ್ತಿಸಿ ವಿಡಿಯೋ ಮಾಡಿ ಹರಿದುಬಿಟ್ಟಿದ್ದಾರೆ.
4 ಜನ ಯುವಕರು ಹೊಂಡಾ ಕಾರೊಂದರಲ್ಲಿ ಕಾರಿಂಜಕ್ಕೆ ಬಂದಿದ್ದು ಅಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ದೇವಸ್ಥಾನದ ಒಳಗೆ, ಹೊರಾಂಗಣದಲ್ಲಿ ಚಪ್ಪಲಿ ಧರಿಸಿಕೊಂಡೇ ತಿರುಗಾಡಿದ್ದಾರೆ. ಇದನ್ನೆಲ್ಲ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟಿದ್ದರು. ಭಾರಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಪುಂಜಾಲಕಟ್ಟೆ ಎಸ್ಐ ಸೌಮ್ಯ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬುಶೇರ್ ರೆಹಮಾನ (20) ತಂದೆ U K ಬಶೀರ್ ಮಾಸ್ತಿಕಟ್ಟೆ ಉಲ್ಲಾಳ ಮಂಗಳೂರು, ಇಸ್ಮಾಯಿಲ್ ಅರ್ಹ ಮಾಜ್ (22) ತಂದೆ :ಅಬ್ದುಲ್ ಖಾದರ್ ಮುಕ್ಕಚ್ಚೇರಿ ಮನೆ ಉಳ್ಳಾಲ ಮಂಗಳೂರು, ಮಹಮ್ಮದ್ ತಾನಿಶ್ (19) ತಂದೆ:ಉಮ್ಮರ್ ಫಾರೂಖ್ ಹಳೆಕೋಟೆ ಮನೆ ಉಲ್ಲಾಳ ಮಂಗಳೂರು, ಮೊಹಮ್ಮದ್ ರಶಾದ್(19) ತಂದೆ : ಬದ್ರುದ್ದೀನ್ ತನ್ವೀರ್ ಕ್ವಾಟೇಜ್ ಬಬ್ಬುಕಟ್ಟೆ ಪೆರ್ಮನ್ನೂರು ಮಂಗಳೂರು.
ಆರೋಪಿಗಳನ್ನು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ಧು ನ್ಯಾಯಾಂಗ ಬಂಧನವನ್ನು ವಿಧಿಸಿದ್ದಾರೆ.