ಪುತ್ತೂರು: ಸ್ಪಷ್ಟ ಹಾಗೂ ಶೀಘ್ರ ಲ್ಯಾಬ್ ಟೆಸ್ಟ್ ಗಳಿಗೆ ಪ್ರಸಿದ್ದಿಯಾಗಿರುವ ‘ವಿ ಕೇರ್ ಲ್ಯಾಬೊರೇಟರೀಸ್ʼನ ಎರಡನೇ ಶಾಖೆಯನ್ನು ಪುತ್ತೂರಿನ ಕಲ್ಲಾರೆ ಮುಖ್ಯ ರಸ್ತೆಯ ಶ್ರೀನಿವಾಸ ಪ್ಲಾಝಾದಲ್ಲಿ ಸೈಯ್ಯದ್ ಅಹ್ಮದ್ ಫಕೋಯ ತಂಙಳ್ ಉದ್ಘಾಟಿಸಿದರು.
ಬಳಿಕ ಮಾತಾನಾಡಿದ ಅವರು “ ಅತ್ಯಾಧುನಿಕ ವಿದೇಶಿ ಉಪಕರಣಗಳ ನೆರವಿನಿಂದ ಅತ್ಯುನ್ನತ ಸೇವೆ ನೀಡುತ್ತಿರುವ ಉದ್ಯಮಿ ಕುಂಜೂರುಪಂಜ ನವಾಝ್ ಮಾಲಕತ್ವದ ಈ ಸುಸಜ್ಕಿತ ಲ್ಯಾಬ್ ಪುತ್ತೂರಿನ ಜನತೆಗೆ ಇನ್ನಷ್ಟು ಉತ್ಕೃಷ್ಟ ಹಾಗೂ ಗುಣಮಟ್ಟದ ಸೇವೆ ನೀಡುವಂತಾಗಲಿ ಎಂದು ಶುಭ ಹಾರೈಸಿದರು.
ಪುತ್ತೂರು ಶಾಸಕರಾದ ಸಂಜೀವ ಮಠಂದೂರುರವರು ರಿಬ್ಬನ್ ಕತ್ತರಿಸಿ ಲೋಕಾರ್ಪಣೆಗೊಳಿಸಿದರು. ನಗರಸಭಾಧ್ಯಕ್ಷ ಕೆ. ಜೀವಂಧರ್ ಜೈನ್, ಪೌರಾಯುಕ್ತ ಮನೋಹರ್ ಕಲ್ಲಾರೆ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಮುಳಿಯ ಕೇಶವ ಪ್ರಸಾದ್, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, SDPI ವಿಧಾನಸಭಾ ಕ್ಷೇತ್ರಾಧ್ಯಕ್ಷ ಜನಾಬ್ ಇಬ್ರಾಹಿಂ ಸಾಗರ್, ನಗರಸಭಾ ಸದಸ್ಯ ರಿಯಾಝ್, ಹರ್ಷಾದ್ ದರ್ಭೆ, ನಿಸಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಂಸ್ಥೆಯ ವಿಶೇಷತೆಗಳು:
ಶುಭಾರಂಭದ ಪ್ರಯುಕ್ತ ಆಗಮಿಸಿದ ಗ್ರಾಹಕರ ಶುಗರ್ ಹಾಗೂ ಬಿಪಿ ತಪಾಸಣೆಯನ್ನು ಉಚಿತವಾಗಿ ಮಾಡಲಾಯಿತು. ನೂತನ ಲ್ಯಾಬಿನಲ್ಲಿ 500ಕ್ಕೂ ಮಿಕ್ಕಿ ವಿವಿಧ ಮಾದರಿಯ ಟೆಸ್ಟ್ ಗಳು ಲಭ್ಯವಿದ್ದು ,ಆರಂಭಿಕ ಕೊಡುಗೆಯಾಗಿ ಪ್ರತಿ ತಪಾಸಣೆಯಲ್ಲೂ 25% ರಿಯಾಯಿತಿಯನ್ನು ಸಂಸ್ಥೆ ತನ್ನ ಗ್ರಾಹಕರಿಗೆ ನೀಡಲಿದೆ.
ಗ್ರಾಹಕರ ಅನುಕೂಲಕ್ಕಾಗಿ ಸಂಸ್ಥೆಯಲ್ಲಿ ವಿವಿಧ ರಕ್ತ ಪರೀಕ್ಷಾ ಪ್ಯಾಕೇಜ್ ಗಳು ರಿಯಾಯಿತಿ ದರದಲ್ಲಿ ಲಭ್ಯವಿದೆ. ತಪಾಸಣೆಯ ವರದಿಗಳು ಎಸ್ ಎಂಎಸ್ ಹಾಗೂ ಇಮೇಲ್ ಮೂಲಕವೂ ಗ್ಯಾಹಕರ ಕೈ ಸೇರಲಿದೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 8.30ರವರೆಗೆ ಲ್ಯಾಬ್ ಕಾರ್ಯಚರಿಸಲಿದೆ. ಮೊದಲೆ ಅಪಾಯಿಂಟ್ಮೆಂಟ್ ಪಡಕೊಳ್ಳುವ ಮತ್ತು ಮನೆಯಿಂದಲೇ ಸ್ಯಾಂಪಲ್ ಕಲೆಕ್ಷನ್ ಮಾಡಿಕೊಳ್ಳುವ ವ್ಯವಸ್ಥೆಯೂ ಸಂಸ್ಥೆಯೂ ತನ್ನ ಗ್ರಾಹಕರಿಗೆ ಒದಗಿಸಿದೆ.
