ಪುತ್ತೂರು: ತನ್ನ ಸಾಧನೆಯ ಮೂಲಕ ಯಶಸ್ವಿ ಉದ್ಯಮಿಯಾದ ಪುತ್ತೂರಿನ ‘ಲಹರಿ ಡ್ರೈ ಫ್ರುಟ್ಸ್’ ಮಳಿಗೆಯ ಮಾಲಕ ಜೆ ಎಫ್ ಡಿ ಕುಸುಮರಾಜ್ ರವರಿಗೆ ಜೆಸಿಐ ವಲಯ ಮಟ್ಟದ ‘ಸಾಧನ ಶ್ರೀ’ ಪ್ರಶಸ್ತಿ ಒಲಿದು ಬಂದಿದೆ.
ಪುತ್ತೂರು ವಲಯದ ವ್ಯಾಪಾರೋದ್ಯಮ ಪ್ರಶಸ್ತಿಯಾಗಿರುವ ಸಾಧನಶ್ರೀ ಪ್ರಶಸ್ತಿಯನ್ನು ಕುಸುಮರಾಜ್ ರವರಿಗೆ ಅತ್ಯುತ್ತಮ ವ್ಯವಹಾರ ಸಾಧನೆಗಾಗಿ ನೀಡಲಾಗುತ್ತಿದ್ದು, ನ.7 ರಂದು ಕುಂದಾಪುರದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.
ತನ್ನ ಸಾಧನೆಯ ಮೂಲಕ ಡ್ರೈಫ್ರುಟ್ಸ್ ಉದ್ಯಮದಲ್ಲಿ ತೊಡಗಿಕೊಂಡ ಕುಸುಮ್ ರಾಜ್ ರವರು ಸುಳ್ಯ ತಾಲೂಕಿನ ಮುರುಳ್ಯ ಗೋಲ್ತಿಲದವರು. ಇದೀಗ ಪುತ್ತೂರಿನ ಬಲ್ನಾಡಿನಲ್ಲಿ ವಾಸವಿರುವ ಕುಸುಮ್ ರಾಜ್ ‘ಲಹರಿ’ ಎನ್ನುವ ತನ್ನದೇ ಬ್ರ್ಯಾಂಡ್ ಮೂಲಕ ಪ್ರಸಿದ್ದರಾಗಿದ್ದಾರೆ.
ದಕ್ಷಿಣ ಕನ್ನಡ ತೆಂಗು ರೈತ ಉತ್ಪಾದಕರ ಸಂಘದ ಸ್ಥಾಪಕರಾದ ಇವರು ಜೆಸಿಐ ಹಾಗೂ ರೋಟರಿ ಕ್ಲಬ್ ನಲ್ಲಿ ಸಕ್ರಿಯವಾಗಿದ್ದಾರೆ.